ಟೋಕಿಯೋ ಒಲಿಂಪಿಕ್ಸ್ : ಚರಿತ್ರೆ ಸೃಷ್ಟಿಸಿದ ವಂದನಾ ಕಟಾರಿಯಾ..!
ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಚರಿತ್ರೆ ಸೃಷ್ಟಿಸಿದ್ದಾರೆ.
ಸೌತ್ ಆಫ್ರಿಕಾ ಮಹಿಳಾ ಹಾಕಿ ತಂಡದ ವಿರುದ್ಧದ ಪಂದ್ಯದಲ್ಲಿ ವಂದನಾ ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ. ಆ ಮೂಲಕ ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂದು ನಡೆದ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನದೊಂದಿಗೆ ಸೌತ್ ಆಫ್ರಿಕಾ ವಿರುದ್ಧ 4-3 ಅಂತರಿಂದ ಭರ್ಜರಿ ಜಯ ಸಾಧಿಸಿದೆ.
ಗ್ರೂಪ್ ಎನಲ್ಲಿ ಭಾರತಕ್ಕೆ ಇದು ಎರಡನೇ ಗೆಲುವುದಾಗಿದ್ದು, ಮೊದಲಾರ್ಧದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು 2-2 ಗೋಲ್ ಗಳನ್ನು ಪಡೆದು ಆಟ ಮುಂದುವರೆಸಿದ್ದವು.
ಬಳಿಕ ಆಟ ರೋಚಕತೆಯಿಂದ ಕೂಡಿತ್ತು. ಬಳಿಕ ಉಭಯ ತಂಡಗಳು 3-3 ಗೋಲ್ ಗಳನ್ನು ಗಳಿಸಿದ್ದು, ಕೊನೆಯ ಕ್ಷಣದಲ್ಲಿ ಭಾರತದ ಪರವಾಗಿ ಕಟಾರಿಯಾ ಅವರು ಗೆಲುವಿನ ಗೋಲು ಬಾರಿಸಿದರು.
ಭಾರತದ ಪರ ವಂದನಾ ಕಟಾರಿಯಾ ಮೂರು ಗೋಲ್ ಗಳು ಮತ್ತು ನೇಹಾ ಒಂದು ಗೋಲ್ ಬಾರಿಸುವ ಮೂಲಕ ತಂಡದ ಗೆಲುವಿನ ರುವಾರಿಗಳಾದ್ರು.








