ಸಚಿವ ಸ್ಥಾನ ಕೊಡಿ ಎಂದು ದೆಹಲಿಗೆ ಹೋಗಲ್ಲ : ಹರತಾಳು ಹಾಲಪ್ಪ
ಶಿವಮೊಗ್ಗ : ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಕಸರತ್ತು ಶುರುವಾಗಿದ್ದು, ನನಗೆ ಸಚಿವ ಸ್ಥಾನ ನೀಡಿ ಎಂದು ದೆಹಲಿಗೆ ಹೋಗಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಸಚಿವ ಸ್ಥಾನದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವುದಿಲ್ಲ.ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುತ್ತೇನೆ. ಇಲ್ಲವೇ ಈಶ್ವರಪ್ಪ ಹೇಳಿದ ಹಾಗೆ ಶಾಸಕನಾಗಿ ಕೆಲಸ ಮಾಡುತ್ತೇನೆ.
ಬೇರೆ ಬೇರೆ ಕಾರಣಕ್ಕೆ ಹಿರಿಯರನ್ನು ಕೈ ಬಿಟ್ಟರೆ, ನಮ್ಮಂತಹವರಿಗೆ ಸ್ಥಾನ ಸಿಗಬಹುದು. ನನಗೂ ಹಾಗೂ ಆರಗ ಜ್ಞಾನೇಂದ್ರ ಅಂತಹವರಿಗೆ ಅವಕಾಶ ಸಿಗಬಹುದು.
ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಯಡಿಯೂರಪ್ಪ ಇಬ್ಬರು ಸ್ಟ್ರಾಂಗ್ ಇದ್ದಾರೆ. ನಮಗೆ ಪರಿವಾರವಿದೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವರಾಗುವ ಆಸೆ ಹೊರಹಾಕಿದರು.
ಮುಂದುವರೆದು ಮಾತನಾಡಿ, ನಮ್ಮ ಪಕ್ಷದಲ್ಲಿ ಒತ್ತಡವೆಲ್ಲ ನಡೆಯುವುದಿಲ್ಲ ಎಂದ ಹರತಾಳು ಹಾಲಪ್ಪ ನವರು, ಕೇಂದ್ರ ಸಚಿವ ಸಂಪುಟವನ್ನೇ ನೋಡಿದ್ದೇವೆ.
ನಮ್ಮ ಪಕ್ಷದ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೆ. ನಮ್ಮ ಎಲ್ಲಾ ವರದಿಯನ್ನು ವರಿಷ್ಠರು ನೋಡುತ್ತಾರೆ. ನಾನು ಆಶಾವಾದಿ. ಹಾಗಂತ ಗುಂಪುಗಾರಿಕೆ ಮಾಡುವುದಿಲ್ಲ. ಮನುಷ್ಯ ಸಹಜ ಹಾಗೂ ರಾಜಕಾರಣ ಸಹಜವಾದ ಆಸೆ ಇರುತ್ತದೆ ಎಂದಿದ್ದಾರೆ.








