‘ಕೆಮ್ ಚೋ, ಟ್ರಂಪ್’ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಇದೇ ತಿಂಗಳ 24 ಮತ್ತು 25ರಂದು ಭಾರತಕ್ಕೆ ಭೇಟಿ ಕೊಡಲಿರುವ ಟ್ರಂಪ್ ದಂಪತಿಗಳಿಗೆ ಸ್ವಾಗತವನ್ನು ನೀಡಲು ಸಿದ್ಧವಾಗುತ್ತಿರುವ ಬೃಹತ್ ಕಾರ್ಯಕ್ರಮ.
ಅಮೆರಿಕದಲ್ಲಿ ನಡೆದ ಹೌಡಿ ಮೋದಿ ಮಾದರಿಯಲ್ಲೇ ಪ್ರಧಾನಿ ಮೋದಿ ತವರು ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸಿದ್ಧವಾಗುತ್ತಿರುವ ಕಾರ್ಯಕ್ರಮ. ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಟ್ರಂಪ್ ಅವರನ್ನು ಮೋದಿ ಸ್ವಾಗತಿಸಲಿದ್ದು, ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮಕ್ಕೆ ತೆರಳಲಿದ್ದು, ಆಶ್ರಮದವರೆಗೆ ರೋಡ್ ಶೋ ನಿಗದಿಯಾಗಿದೆ.
ಇದೇ ತಿಂಗಳ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿರುವ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದು, ವಾಣಿಜ್ಯ ವ್ಯಾಪಾರ ಸಂಬಂಧ ಸಹಿ ಮಾಡಲಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡದು ಎಂಬ ಖ್ಯಾತಿ ಪಡೆದಿರುವ ಅಹ್ಮದಾಬಾದ್ ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯ್ ಕ್ರೀಡಾಂಗಣವನ್ನು ಮೋದಿ ಮತ್ತು ಟ್ರಂಪ್ ಉದ್ಘಾಟಿಸಲಿದ್ದು, ಇಲ್ಲಿಯೇ ‘ಕೆಮ್ ಚೋ ಟ್ರಂಪ್’ ನಡೆಯಲಿದೆ.
ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಯ ತಾಣಗಳಾಗಿ ಉಳಿದಿಲ್ಲ. ಅವು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಶಕ್ತಿಯುತ ಅಸ್ತ್ರಗಳಾಗಿ ಬದಲಾಗಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್...








