ರಾಜ್ಯದಲ್ಲಿ 3ನೇ ಅಲೆಯ ಆತಂಕ : ಬೆಂಗಳೂರಲ್ಲಿ ಕೊರೊನಾ ಸ್ಫೋಟ
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮೂರನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಈ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದೆ.
ನಗರದ 32 ಕಡೆ ಕೊರೊನಾ ಹೆಚ್ಚಾಗಿದ್ದು, ಬಿಬಿಎಂಪಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.
ನಗರದಲ್ಲಿ ಹೆಚ್ಚಾಗುತ್ತಿರುವ ಸೋಂಕು ನಿಯಂತ್ರಣಕ್ಕಾಗಿ ಬಿಬಿಎಂಪಿ ಈಗಾಗಲೇ ನೈಟ್ ಕಫ್ರ್ಯೂ ಜಾರಿ ಮಾಡಿದ್ದು, ಕಂಟೈನ್ ಮೆಂಟ್ ಝೋನ್ ಗಳನ್ನ ಮಾಡುತ್ತಿದೆ.
ಬೆಂಗಳೂರಿನ ಎಂಟು ವಿಭಾಗದ ಒಟ್ಟು 32 ಏರಿಯಾದಲ್ಲಿ ಮೈಕ್ರೋ ಕಂಟೈಂನ್ ಮೆಂಟ್ ಝೋನ್ ಗಳನ್ನು ಬಿಬಿಎಂಪಿ ಹೆಚ್ಚಿಸುತ್ತಿದೆ.
ಸರ್ಕಾರದ ಆದೇಶದ ಮೇರೆಗೆ ಒಂದೇ ಕಡೆ ಮೂರಕ್ಕೂ ಹೆಚ್ಚು ಕೊರೊನಾ ಕೇಸ್ ಗಳಿರುವ ಸ್ಥಳವನ್ನು ಮೈಕ್ರೋ ಕಂಟೈಂನ್ ಮೆಂಟ್ ಝೋನ್ ಮಾಡಲಾಗುತ್ತದೆ.
ಇನ್ನು ಕಂಟೈನ್ ಮೆಂಟ್ ಝೋನ್ ಗಳ ಲಿಸ್ಟ್ ಹೀಗಿದೆ.
ಬೊಮ್ಮನಹಳ್ಳಿ ವಲಯದಲ್ಲಿ ಸಿಂಗಸಂದ್ರ, ಯಲಚೇನಹಳ್ಳಿ, ಬೇಗೂರು, ಅರೆಕೆರೆ ಕಂಟೈನ್ ಮೆಂಟ್ ಝೋನ್ ಗಳಲಾಗಿವೆ.
ಪೂರ್ವ ವಲಯದಲ್ಲಿ ಬಾಣಸವಾಡಿ, ಲಿಂಗರಾಜಪುರ, ಜೋಗುಪಾಳ್ಯ, ಮನೋರಾಯನಪಾಳ್ಯ, ಮಹದೇವಪುರ ವಲಯದಲ್ಲಿ ವಿಜ್ಞಾನ ನಗರ, ಹೂಡಿ, ಗರುಡಾಚಾರಪಾಳ್ಯ, ರಾಮಮೂರ್ತಿ ನಗರ, ಆರ್.ಆರ್.ನಗರ ವಲಯದಲ್ಲಿ ಹೆಮ್ಮಿಗೆಪುರ, ಲಗ್ಗೆರೆ, ಆರ್.ಆರ್.ನಗರ, ಉಲ್ಲಾಳ, ದಕ್ಷಿಣ ವಲಯದಲ್ಲಿ ಕೋರಮಂಗಲ, ವಿಜಯನಗರ, ಗಿರಿನಗರ, ಗಣೇಶ್ ಮಂದಿರ, ಬಸವನಗುಡಿ, ಪಶ್ಚಿಮ ವಲಯದಲ್ಲಿ ಅರಮನೆ ನಗರ, ಮಾರಪ್ಪನಪಾಳ್ಯ, ಬಸವೇಶ್ವರ ನಗರ, ರಾಜ್ ಮಹಲ್ ಗುಟ್ಟಹಳ್ಳಿ, ಯಲಹಂಕ ವಲಯದಲ್ಲಿ ಕುವೆಂಪು ನಗರ, ಕೆಂಪೇಗೌಡ ನಗರ, ದೊಡ್ಡಬೊಮ್ಮಸಂದ್ರ, ದಾಸರಹಳ್ಳಿ ವಲಯದಲ್ಲಿ ಅಬ್ಬಿಗೆರೆ, ನೆಲಮಹೇಶ್ವರಿ ನಗರ ಕಂಟೈನ್ ಮೆಂಟ್ ಝೋನ್ ಗಳಾಗಿ ಗುರುತಿಸಲಾಗಿದೆ.