`ಫಲಿತಾಂಶ ತೃಪ್ತಿದಾಯಕವಲ್ಲ’ | 11 ವಿದ್ಯಾರ್ಥಿಗಳಿಂದ ಪಿಯು ರಿಸೆಲ್ಟ್ ರಿಜೆಕ್ಟ್ puc mysore
ಮೈಸೂರು : ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಎಕ್ಸಾಂ ಮಾಡದೇ ಈ ಹಿಂದಿನ ತರಗತಿಗಳ ಅಂಕಗಳನ್ನು ಪರಿಗಣಿಸಿ ಪಿಯು ರಿಸಲ್ಟ್ ಪ್ರಕಟಿಸಲಾಗಿತ್ತು.
ಆದ್ರೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಮೈಸೂರಿನ 11ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ. ಅಲ್ಲದೆ ಪೂರಕ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರು ನಗರದಲ್ಲಿ 6, ಕೆ ಆರ್ ನಗರ- 3, ಹುಣಸೂರು-2 ಮಂದಿ ವಿದ್ಯಾರ್ಥಿಗಳು ಪಿಯುಸಿ ರಿಸಲ್ಟ್ ರಿಜೆಕ್ಟ್ ಮಾಡಿದ್ದು, ಆಗಸ್ಟ್ ಕೊನೆಯ ವಾರದಲ್ಲಿ ಆರಂಭವಾಗಲಿರುವ ಪಿಯು ಪೂರಕ ಪರೀಕ್ಷೆ ಬರೆಯಲಿದ್ದಾರೆ.
ನಿರೀಕ್ಷೆಯಷ್ಟು ಅಂಕ ಬಂದಿಲ್ಲ, ಫಲಿತಾಂಶ ತೃಪ್ತಿದಾಯಕವಲ್ಲ ಎಂದು ವಿದ್ಯಾರ್ಥಿಗಳು ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.









