ದುಡ್ಡಿಗಾಗಿ ಇಮ್ರಾನ್ ಪರದಾಟ – ಪ್ರಧಾನಿ ನಿವಾಸವನ್ನು ಬಾಡಿಗೆ ನೀಡಲು ಮುಂದಾದ ಪಾಕ್ ಪ್ರಧಾನಿ..!
ಪಾಕಿಸ್ತಾನ : ಪಾಕಿಸ್ತಾನ ಆರ್ಥಿಕವಾಗಿ ಎಂತಹ ಮಟ್ಟ ತಲುಪಿದೆ ಅನ್ನೋದು ಇಡೀ ವಿಶ್ವಕ್ಕೆ ಗೊತ್ತಿದೆ.. ಚೀನಾದ ಸಾಲದ ಸುಳಿಯಲ್ಲಿ ಸಿಲುಕಿ ದ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ರೆಡ್ ಡ್ರ್ಯಾಗನ್ ( ಚೀನಾ ) ನ ಗುಲಾಮ ದೇಶ ಅನ್ನೋದು ಗೊತ್ತಿದೆ..
ಭಿಕಾರಿ ಪಾಕಿಸ್ತಾನದ ದುರ್ಬಲ ಆರ್ಥಿಕತೆಗೆ ಉದಾಹರಣೆ ಕೊಡೋದಾದ್ರೆ ಈ ಹಿಂದೆ ಮಾನ್ಯ ಇಮ್ರಾನ್ ಖಾನ್ ಅವರು ತಮ್ಮ 200 ಕ್ಕೂ ಹೆಚ್ಚು ಕತ್ತೆಗಳನ್ನ ಹರಾಜಿಗಿಟ್ಟಿದ್ದರು.. ಇಂತಹ ಪರಿಸ್ಥಿತಿ ಬಂದೊದಗಿದೆ..
ಇಷ್ಟಾದ್ರೂ ಪಾಕಿಸ್ತಾನ ಬುದ್ದಿ ಕಲಿತಿಲ್ಲ.. ಅಲ್ಲಿನ ಸರ್ಕಾರಕ್ಕೆ ಜನ ಜೀವನ ಸುಧಾರಣೆಗಿಂತ ಉಗ್ರರ ಪೋಷಣೆಯೇ ಮುಖ್ಯ.. ಇರೋ ಬರೋ ಉಗ್ರರೆಲ್ಲಾ ಪಾಕಿಸ್ತಾನದಲ್ಲಿಯೇ ಆಶ್ರಯ ಪಡೆದುಕೊಂಡಿದ್ದಾರೆ.. ಅಲ್ಲಿನ ಸರ್ಕಾರ ಅವರ ಪೋಷಣೆಯಲ್ಲೇ ಉಳಿದಿರೋ ಅಲ್ಪ ಸ್ವಲ್ಪ ಹಣವನ್ನು ಖರ್ಚು ಮಾಡ್ತಿದ್ರೆ ಆ ದೇಶ ಇನ್ನೆಲ್ಲಿ ಉದ್ಧಾರ ಆಗುತ್ತೆ..
ಆದ್ರೆ ಈಗ ವಿಷ್ಯ ಏನೆಂದ್ರೆ ಇಮ್ರಾನ್ ಖಾನ್ ಅವರು ಅಧಿಕೃತ ಪ್ರದಾನಿ ನಿವಾಸವನ್ನು ಬಾಡಿಗೆ ನೀಡಲು ಮುಂದಾಗಿದ್ದಾರೆ. ಹೌದು ಈ ಕುರಿತಾಗಿ ಖುದ್ದು ಇಮ್ರಾನ್ ಖಾನ್ ಅವರೇ ಹೀಗೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಕೋವಿಡ್ ವೈರಸ್ ಹಬ್ಬಿದ್ದು ‘ಛೀ’ನಾ ಲ್ಯಾಬ್ ನಿಂದಲೇ – ಸಾಕ್ಷಿ ಕೊಟ್ಟ ಅಮೆರಿಕಾ
2019ರ ಅಗಸ್ಟ್ ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಸರ್ಕಾರದ ಅಧಿಕೃತ ನಿವಾಸದಿಂದ ಸ್ವಂತ ಮನೆಗೆ ಶಿಫ್ಟ್ ಆಗಿದ್ದರು. ಬಳಿಕ ಈ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೀಗ ಪ್ರಧಾನಿ ನಿವಾಸ ಕಟ್ಟಡವನ್ನು ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದೆ.
ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಕಾಲ್ ಫೆಡೆರಲ್ ಕ್ಯಾಬಿನೆಟ್ ಆದೇಶ ಹೊರಡಿಸಿದೆ.
ಯೂನಿವರ್ಸಿಟಿ ಮಾಡುತ್ತೇವೆ ಎಂದು ಹೇಳಿ ಇದೀಗ ಬಾಡಿಗೆಗೆ ನೀಡುತ್ತಿರುವುದ್ಯಾಕೆ ಎಂಬುದಕ್ಕೆ ಉತ್ತರ ಹಣಕಾಸಿನ ಕೊರತೆಯಾಗಿದೆ. ಈ ಹಿಂದೆ ಇಮ್ರಾನ್‍ಖಾನ್ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟದೆ ಸುದ್ದಿಯಾಗಿದ್ದರು. ಇದೀಗ ನಿವಾಸವನ್ನು ಬಾಡಿಗೆ ನೀಡುವ ನಿರ್ಧಾರಕ್ಕೆ ಬರುವ ಮೂಲಕವಾಗಿ ತಾವೂ ವಿಶ್ವದ ಮುಂದೆ ಮುಖಭಂಗ ಅನುಭವಿಸೋದಲ್ಲದೆ ಪಾಕಿಸ್ತಾನದ ಪರಿಸ್ಥಿತಿ ಎಷ್ಟು ಹೀನ ಸ್ಥಿತಿಗೆ ತಲುಪಿದೆ ಅನ್ನೋದನ್ನ ಜಗತ್ತಿಗೆ ತೋರಿಸಿದ್ದಾರೆ.








