ಬೊಮ್ಮಾಯಿ ಬ್ರಿಗೇಡ್ ರೆಡಿ : ನೂತನ ಸಚಿವರ ಪದಗ್ರಹಣಕ್ಕೆ ಕ್ಷಣಗಣನೆ
ಬೆಂಗಳೂರು : ಅಂತು ಇಂತು ರಾಜ್ಯ ಸಚಿವ ಸಂಪುಟ ಫೈನಲ್ ಆಗಿದ್ದು, ಇಂದು 29 ಮಂದಿಯ ಹೆಸರುವುಳ್ಳ ಪಟ್ಟಿ ಅಧಿಕೃತವಾಗಿದೆ. ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದೆ.
ಇಂದು ದೆಹಲಿಯಿಂದ ಆಗಮಿಸಿದ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಲ್ಲರಿಗೂ ಶುಭ ಕೋರಿದರು. 8 ಲಿಂಗಾಯತ, 7 ಒಕ್ಕಲಿಗ, 7 ಒಬಿಸಿ, 3 ದಲಿತ, 3 ಎಸ್.ಸಿ., 1 ಎಸ್.ಟಿ ಮತ್ತು ಮಹಿಳೆ ಶಾಸಕಿಗೂ ಸ್ಥಾನ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಸಚಿವರ ಪಟ್ಟಿ
ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ, ಆರ್.ಅಶೋಕ್- ಪದ್ಮನಾಭ ನಗರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ- ಮಲ್ಲೇಶ್ವರ, ಬಿ.ಶ್ರೀ ರಾಮುಲು- ಮೊಳಕಾಲ್ಮೂರು, ಉಮೇಶ್ ಕತ್ತಿ- ಹುಕ್ಕೇರಿ, ಮುರುಗೇಶ್ ನಿರಾಣಿ – ಬೀಳಗಿ, ಶಶಿಕಲಾ ಜೊಲ್ಲೆ- ನಿಪ್ಪಾಣಿ, ಸುನೀಲ್ ಕುಮಾರ್ – ಕಾರ್ಕಳ, ಅರಗ ಜ್ಞಾನೇಂದ್ರ – ತೀರ್ಥಹಳ್ಳಿ, ಗೋವಿಂದ ಕಾರಜೋಳ-ಮುಧೋಳ, ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ, ಹಾಲಪ್ಪ ಆಚಾರ್ – ಯಲ್ಬುರ್ಗ, ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ, ಕೋಟಾ ಶ್ರೀನಿವಾಸ ಪೂಜಾರಿ – ಎಂಎಲ್‍ಸಿ, ಪ್ರಭು ಚೌವ್ಹಾಣ್ – ಔರಾದ್, ವಿ ಸೋಮಣ್ಣ – ಗೋವಿಂದರಾಜನಗರ, ಎಸ್ ಅಂಗಾರ-ಸುಳ್ಯ, ಸಿ.ಸಿ.ಪಾಟೀಲ್ – ನರಗುಂದ, ಬಿ.ಸಿ.ನಾಗೇಶ್ – ತಿಪಟೂರು
ವಲಸಿಗರಿಗೆ ಮಂತ್ರಿ ಪಟ್ಟ
ಎಸ್.ಟಿ.ಸೋಮಶೇಖರ್- ಯಶವಂತಪುರ, ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ, ಬೈರತಿ ಬಸವರಾಜ- ಕೆ ಆರ್ ಪುರಂ, ಕೆಸಿ ನಾರಾಯಣಗೌಡ – ಕೆಆರ್ ಪೇಟೆ, ಮುನಿರತ್ನ- ಆರ್ ಆರ್ ನಗರ, ಎಂ.ಟಿ.ಬಿ ನಾಗರಾಜ್ – ಎಂಎಲ್‍ಸಿ, ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್,ಶಿವರಾಂ ಹೆಬ್ಬಾರ್- ಯಲ್ಲಾಪುರ, ಆನಂದ್ ಸಿಂಗ್ – ಹೊಸಪೇಟೆ, ಬಿ ಸಿ ಪಾಟೀಲ್









