ಹೆಂಡತಿ ಜೊತೆ ಜಗಳ : 8 ತಿಂಗಳ ಕಂದಮ್ಮನನ್ನ ನೆಲಕ್ಕೆ ಕುಕ್ಕಿ ಕುಕ್ಕಿ ಕೊಂದ ಪಾಪಿ..!
ಉತ್ತರ ಪ್ರದೇಶ : ಹೆಂಡತಿಯ ಜೊತೆಗೆ ಜಗಳವಾಡಿಕೊಂಡ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಮಗುವನ್ನ ಅನೇಕ ಬಾರಿ ನೆಲಕ್ಕೆ ಕುಕ್ಕಿ ಕುಕ್ಕಿ ಕೊಲೆ ಮಾಡಿ ಅಮಾನವೀಯತೆ ಮೆರದಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯ ರಹ್ತಾಪುರ್ ಖುರ್ಡ್ ಗ್ರಾಮದಲ್ಲಿ ನಡೆದಿದೆ. ಕೃತ್ಯ ನಡೆದ ಕೂಡಲೇ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದೂವರೆ ವರ್ಷದ ಹಿಂದೆ ಆರೋಪಿ ಮೊಹಮ್ಮದ್ ನಝೀಂ ಮೆಹ್ತಾಬ್ ಜಹಾನ್ ನನ್ನು ಮದುವೆಯಾಗಿದ್ದ. ಈ ದಂಪತಿಗೆ 8 ತಿಂಗಳ ಹೆಣ್ಣು ಮಗುವೊಂದಿತ್ತು. ಕ್ಲುಲ್ಲಕ ಕಾರಣಕ್ಕಾಗಿ ದಂಪತಿ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿತ್ತು.
ಹೀಗೆ ಜಗಳವಾಗಿ ಕೆಲ ದಿನಗಳ ಹಿಂದೆಯಷ್ಟೇ ಪತ್ನಿ ತವರು ಮನೆ ಸೇರಿದ್ದಳು. ಹೀಗೆ ಒಂದು ದಿನ ಕಂಠಪೂರ್ತಿ ಕುಡಿದು ಬಂದ ನಝೀಂ, ಮಗಳನ್ನು ಮನೆಗೆ ವಾಪಸ್ ಕಳುಹಿಸುವಂತೆ ಪತ್ನಿಯ ಪೋಷಕರನ್ನು ಪೀಡಿಸಿದ್ದಾನೆ. ಈ ವೇಳೆ ಮೆಹ್ತಾಬ್ ಮತ್ತು ನಝೀಂ ಮತ್ತೆ ಜಗಳವಾಡಿಕೊಂಡಿದ್ದಾರೆ.
ಜಗಳ ತಾರಕಕ್ಕೇರುತ್ತಿದ್ದಂತೆಯೇ ನಝೀಂ ತನ್ನ 8 ತಿಂಗಳ ಮಗಳನ್ನು ಪತ್ನಿ ಕೈಯಿಂದ ಎಳೆದುಕೊಂಡಿದ್ದಾನೆ. ಬಳಿಕ ನೆಲಕ್ಕೆ ಹಲವು ಬಾರಿ ಹೊಡೆದಿದ್ದಾನೆ. ಪರಿಣಾಮ ಕಂದಮ್ಮ ಸಾವನ್ನಪ್ಪಿದೆ. ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅಷ್ಟ್ರಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.







