ಸಚಿವ ಸಂಪುಟ ರಚನೆ : ರಾಮದಾಸ್ ಅಸಮಾಧಾನ
ಮೈಸೂರು : ಸವಾಲಿನ ದಿನವಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುತ್ತೇನೆ, ನಾನು ನೋವಿನಲ್ಲಿಲ್ಲ. ಮಂತ್ರಿ ಸ್ಥಾನ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ ಎಂದು ಶಾಸಕ ಎಸ್ ಎ ರಾಮದಾಸ್ ಅಸಮಾಧಾನ ಹೊರಹಾಕಿದ್ದಾರೆ.
ಇಂದು ರಾಜ್ಯ ಸಂಪುಟ ರಚನೆಯಾಗಿದ್ದು, ಸಚಿವ ಸ್ಥಾನ ಆಸೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ಅದರಲ್ಲೂ ಮೂಲ ಬಿಜೆಪಿಗರು ಅಸಮಾಧಾನಗೊಂಡಿದ್ದಾರೆ.
ಸಚಿವಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ರಾಮದಾಸ್ ಸಂಪುಟ ರಚನೆ ಬಗ್ಗೆ ಮಾತನಾಡುತ್ತಾ ಅಸಮಾಧಾನ ಹೊರಹಾಕಿದ್ದಾರೆ. ಇಂದಿನ ದಿನವನ್ನು ಸವಾಲಿನ ದಿನವಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುತ್ತೇನೆ, ನಾನು ನೋವಿನಲ್ಲಿಲ್ಲ.
ಮಂತ್ರಿ ಸ್ಥಾನ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ. ಮನುಷ್ಯ ಜೀವನದಲ್ಲಿ ನಿರೀಕ್ಷೆ ಇಟ್ಟುಕೊಂಡು ಬದುಕುವುದಿಲ್ಲ. ಬಂದಂತ ವಿಚಾರವನ್ನು ಸ್ವೀಕಾರ ಮಾಡುವುದು ಮನುಷ್ಯನ ಅರ್ಹತೆ ಮೇಲೆ ಇರುತ್ತದೆ.
ನನ್ನ ತಂದೆ ಸೈನಿಕ, ಸೈನಿಕನ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ನಾನು ಯಾವುದಕ್ಕೂ ಬೇಸರ ಪಟ್ಟುಕೊಳ್ಳುವುದಿಲ್ಲ.
ಈ ಬಾರಿ ಸಚಿವನಾಗುವ ಬಗ್ಗೆ ನಿರೀಕ್ಷೆ ಇದ್ದಿದ್ದು ಸಹಜ, ಆದರೆ ಬೇರೆ ಲೆಕ್ಕಚಾರದ ಮೂಲಕ ಸಂಪುಟ ಮಾಡಿದ್ದಾರೆ. ನನಗೆ ಅರ್ಹತೆ ಎನ್ನುವುದಕ್ಕಿಂತ ಅನುಭವ ಇದೆ ಎಂದು ಅಸಮಾಧಾನ ಹೊರಹಾಕಿದರು.









