ಕೊಡಗಿನಲ್ಲಿ ಭಾರಿ ಮಳೆ : ರಸ್ತೆ ಮಧ್ಯ ಭಾಗದಲ್ಲಿ ಗುಂಡಿ Heavy rain saaksha tv
ಮಡಿಕೇರಿ : ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಮಧ್ಯ ಭಾಗ ಗುಂಡಿ ಬಿದ್ದಿದ್ದು, ಕುಸಿಯುವ ಹಂತಕ್ಕೆ ತಲುಪಿದೆ.
ಜಿಲ್ಲೆಯ ಸುಂಟಿಕೊಪ್ಪ – ಮಾದಾಪುರ ರಸ್ತೆಯ ಸ್ವಸ್ಥ ಶಾಲೆ ಸಮೀಪ ಭೂಕುಸಿತ ಉಂಟಾಗಿದೆ. ಅಲ್ಲದೆ ರಸ್ತೆಯ ನಡುವೆ ನೀರು ಉಕ್ಕುತ್ತಿದೆ.
ಇದರಿಂದ ರಸ್ತೆಯ ಮಧ್ಯೆ ಭಾಗವೇ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ.
ಹೀಗಾಗಿ ಸುಂಟಿಕೊಪ್ಪ ಸೋಮವಾರಪೇಟೆಗೆ ಹೋಗುವ ಜನಸಾಮಾನ್ಯರಿಗೆ ನಾಲ್ಕು ಐದು ಕಿಲೋ ಮೀಟರ್ ಸುತ್ತಿಬಳಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಲ್ಲದೆ ಮಳೆಯಿಂದಾಗಿ ಜಿಲ್ಲೆಯಲ್ಲಿ ನಾನಾ ಅವಾಂತರಗಳು ಸೃಷ್ಠಿಯಾಗುತ್ತಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ.









