ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ತಬ್ಲಿಘಿ ಜಮಾತ್ ನ 200ಕ್ಕೂ ಹೆಚ್ಚು ಸದಸ್ಯರು, ಸೋಂಕಿನಿಂದ ಬಳಲುತ್ತಿರುವ ಇತರೆ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡುವುದಾಗಿ ವರದಿಯಾಗಿದೆ.
ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡುವಂತೆ ಕೆಲ ದಿನಗಳ ಹಿಂದಷ್ಟೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದರು. ಇದೀಗ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ವರು ತಬ್ಲಿಘಿಗಳು ಪ್ಲಾಸ್ಮಾ ನೀಡಿದ್ದಾರೆ. ಅಲ್ಲದೆ ಇನ್ನು ಹಲವರು ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, 200ಕ್ಕೂ ಹೆಚ್ಚು ಜಮಾತ್ ಸದಸ್ಯರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ರೋಗದಿಂದ ಮುಕ್ತಿಗೊಂಡಿರುವ ತಬ್ಲಿಘಿ ಜಮಾತ್ ಸದಸ್ಯರ ವೈದ್ಯಕೀಯ ಪರೀಕ್ಷೆ ನೆರವೇರಿಸಲಾಗುತ್ತಿದ್ದು, ಪ್ಲಾಸ್ಮಾ ಸಂಗ್ರಹಣೆಯನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.








