`ಬಂಗಾರದ ಹುಡುಗ’ನಿಗೆ ಬಹುಮಾನಗಳ ಮಹಾಪೂರ
ಟೋಕಿಯೊ : ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ತಂದಿರುವ ಚಿನ್ನದ ಹುಡುಗ ನೀರಜ್ ಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಜೊತೆಗೆ ಬಹುಮಾನಗಳ ಸುರಿಮಳೆಯೂ ನಡೆಯುತ್ತಿದೆ.
ಭಾರತದ ಪರ ಚಿನ್ನ ಗೆದ್ದ ಇತಿಹಾಸ ಬರೆದ ನೀರಜ್ ಗೆ ಅವರ ತವರು ಹರ್ಯಾಣ ರಾಜ್ಯ ಸರ್ಕಾರ 6 ಕೋಟಿ ರೂ.ಗಳ ಬಹುಮಾನ ಮೊತ್ತ ಘೋಷಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ 1 ಕೋಟಿ ರೂ. ಪಂಜಾಬ್ ಸರ್ಕಾರ 2 ಕೋಟಿ ರೂ., ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 1 ಕೋಟಿ ರೂ., ಮಣಿಪುರ ಸರ್ಕಾರ 1 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ.
ಇನ್ನು ಸದಾ ಕ್ರೀಡಾಳುಗಳಿಗೆ ಪೆÇ್ರೀತ್ಸಾಹ ನೀಡುವ ಉದ್ಯಮಿ ಆನಂದ್ ಮಹೀಂದ್ರಾ, ನೀರಜ್ ಚೋಪ್ರಾಗೆ ನೂತನ ಎಕ್ಸ್ ಯುವಿ 700 ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ. ಇದಲ್ಲದೆ ಪ್ರಮುಖ ವೈಮಾನಿಕ ಸಂಸ್ಥೆ ಇಂಡಿಗೋ ನೀರಜ್ ಗೆ ಜೀವನಮಾನ ಪಯರ್ಂತ ಉಚಿತ ಪ್ರಯಾಣದ ಆಫರ್ ನೀಡಿದೆ.
ಇದಿಷ್ಟೆ ಅಲ್ಲದೆ ನೀರಜ್ ಚೋಪ್ರಾ ಸದ್ಯ ದೇಶದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದು, ಎಲ್ಲೆಲ್ಲೂ ನೀರಜ್ ಹೆಸರು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲವೂ ನೀರಜ್ ಮಯವಾಗಿದ್ದು, ಬಹುಮಾನಗಳ ಪಟ್ಟಿ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.









