ಬಾಲಿವುಡ್ ನ ಖ್ಯಾತ ನಟ ಅನುಪಮ್ ಶ್ಯಾಮ್ ನಿಧನ
ಬಾಲಿವುಡ್ ಸಿನಿಮಾಗಳು ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿ , ಅನೇಕ ಸಿನಿಮಾಗಳು , ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತ ಹಿರಿಯ ನಟ ಅನುಪಮ್ ಶ್ಯಾಮ್ ಅನಾರೋಗ್ಯದಿಂದಾಗಿ ಇಂದು (ಆಗಸ್ಟ್ 9) ನಿಧನರಾಗಿದ್ದಾರೆ.. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅನುಪಮ್ ಶ್ಯಾಮ್ ಅವರನ್ನು ಕಳೆದ ವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
63 ವರ್ಷದ ನಟ ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದರು.. ಈ ಸಮಸ್ಯೆ ಗಂಭೀರವಾಗಿ ಕಾಡಿದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.. ಅವರ ಆಪ್ತ ಸ್ನೇಹಿತ ಯಶ್‌ಪಾಲ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.. ಸುಮಾರು 30 ದಶಕಗಳಿಂದ ಅನುಪಮ್ ಶ್ಯಾಮ್ ಅವರು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ತೊಡಗಿಕೊಂಡಿದ್ದರು. ಸತ್ಯ, ದಿಲ್ ಸೇ, ಲಗಾನ್ ಸೇರಿದಂತೆ ಹಲವು ಉತ್ತಮ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಮನ್ ಕಿ ಅವಾಝ್ ಪ್ರತಿಗ್ಯಾ’ದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದ ಶ್ಯಾಮ್ ಅವರಿಗೆ ಆ ಪಾತ್ರ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.. ನಂತರ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹೆಚ್ಚಿದ್ದರು.. ಇತ್ತೀಚಿಗೆ ಮನ್ ಕಿ ಅವಾಝ್ ಪ್ರತಿಗ್ಯಾ ಸೀಸನ್ 2ಕ್ಕೆ ಚಾಲನೆ ಕೊಡಲಾಗಿತ್ತು. ಆದ್ರೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅನುಪಮ್ ಶ್ಯಾಮ್ ಕಳೆದ ವರ್ಷ (2020) ಡಯಾಲಿಸಿಸ್‌ಗೆ ಒಳಗಾಗಿದ್ದರು. ಡಯಾಲಿಸಿಸ್ ಸಮಯದಲ್ಲಿ ಕುಸಿದು ಬಿದ್ದ ನಂತರ ಅವರನ್ನು ಗೋರೆಗಾಂವ್ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಅನುರಾಗ್ ಪಿಟಿಐಗೆ ತಿಳಿಸಿದ್ದರು. ಆ ಸಮಯದಲ್ಲಿ ಚಿಕಿತ್ಸೆಗಾಗಿ ಆರ್ಥಿಕವಾಗಿ ಸಹಾಯ ಬೇಕಿದೆ ಎಂದು ಕುಟುಂಬದವರು ಚಿತ್ರರಂಗದವರ ಬಳಿ ಮನವಿ ಮಾಡಿದ್ದರು.
2020ರಲ್ಲಿ ನಟನನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿತ್ತು. ಈ ವೇಳೆ ಡಯಾಲಿಸಿಸ್ ಪ್ರಾರಂಭಿಸಿದರು. ಸಿನಿ ಮತ್ತು ಟಿವಿ ಕಲಾವಿದರ ಸಂಘ (CINTAA) ನಟನ ಪರವಾಗಿ ಹಣಕಾಸಿನ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿರಿಯ ಚಿಕಿತ್ಸೆಗಾಗಿ 20 ಲಕ್ಷ ರೂಪಾಯಿ ಸಹಾಯವನ್ನು ಘೋಷಿಸಿದ್ದರು.