ಭಾರತದ ವಿಮಾನಗಳ ಮೇಲೆ ನಿಷೇಧ ವಿಸ್ತರಿಸಿದ ಕೆನಡಾ Canada saaksha tv
ಒಟ್ಟಾವಾ : ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಾಗೂ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕೆನಡಾ ಭಾರತದಿಂದ ತೆರಳುವ ಅಂತರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ಹೇರಿದ್ದ ನಿಷೇಧವನ್ನು ವಿಸ್ತರಿಸಿದೆ.
ಭಾರತದ ವಿಮಾನಗಳ ಮೇಲೆ ನಿಷೇಧವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಿದೆ ಎಂದು ಫೆಡರಲ್ ಸಾರಿಗೆ ಸಚಿವಾಲಯ ತಿಳಿಸಿದೆ.
ಭಾರತದಿಂದ ಕೆನಡಾಕ್ಕೆ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನವನ್ನು 2021ರ ಸೆಪ್ಟೆಂಬರ್ 21ರವರೆಗೆ ನಿಬರ್ಂಧಿಸಲಾಗಿದೆ.
ಇದಕ್ಕೂ ಮುನ್ನ ಕೆನಡಾ, ಏಪ್ರಿಲ್ 22ರಂದು ಭಾರತದಿಂದ ಬರುವ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು. ಇದೀಗ ಐದನೇ ಬಾರಿಗೆ ಈ ನಿಷೇಧವನ್ನು ವಿಸ್ತರಿಸಲಾಗಿದೆ.









