ಲವ್ ಯೂ ರಚ್ಚು ಶೂಟಿಂಗ್ ವೇಳೆ ದುರಂತ , ಫೈಟರ್ ಸಾವು : ರಚಿತಾ ರಾಮ್ ಸಂತಾಪ
ಬೆಂಗಳೂರು: ಅಜಯ್ ರಾವ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಲವ್ ಯು ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವನ್ನಪ್ಪಿದ್ದಾರೆ. 35 ವರ್ಷದ ವಿವೇಕ್ ಎಂಬುವವರು ಮೃತ ಫೈಟರ್ ಆಗಿದ್ದಾರೆ. ಪ್ರಕರಣ ಸಂಬಂಧ ಬಿಡದಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸಿನಿಮಾ ನಿರ್ದೇಶಕ ಶಂಕರ್ ರಾಜ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ವಿವೇಕ್ ದುರಂತ ಸಾವಿಗೆ ನಟಿ ರಚಿತಾ ರಾಮ್ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಇನ್‍ಸ್ಟಾದಲ್ಲಿ ಪೋಸ್ಟ್ ಹಾಕಿರುವ ನಟಿ, ವಿವೇಕ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ.ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ತಿಳಿಸಿದ್ದಾರೆ.
ಇನ್ನೂ ಅಘಾತದಲ್ಲಿ ಮೃತಪಟ್ಟ ಫೈಟರ್ ವಿವೇಕ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರದ ಭರವಸೆಯನ್ನ ನಿರ್ಮಾಪಕ ಗುರು ದೇಶಪಾಂಡೆ ನೀಡಿದ್ದಾರೆ ಎನ್ನಲಾಗಿದೆ. ಮೃತ ವಿವೇಕ್ ಚಿಕ್ಕಪ್ಪ ಗೋಪಿ ಈ ವಿಷಯ ತಿಳಿಸಿದ್ದು, ಅಜ್ಞಾತ ಸ್ಥಳದಿಂದಲೇ ದೂರವಾಣಿ ಕರೆ ಮಾಡಿ ಪರಿಹಾರದ ಕುರಿತು ಮಾತನಾಡಿರುವುದಾಗಿ ಹೇಳಿದ್ದಾರೆ. ಇನ್ನು, ಫೈಟರ್ ವಿವೇಕ್ ಮೃತದೇಹದ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಹಳೇಗುಡ್ಡದಲ್ಲಿ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಇನ್ನಲಾಗಿದೆ.
ಪ್ರಕರಣ ಸಂಬಂಧ ನಿರ್ದೇಶಕ ಶಂಕರ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ ಸೇರಿದಂತೆ ಮೂವರನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ನಿರ್ಮಾಪಕ ಗುರುದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದುವರೆಗೂ ನಿರ್ಮಾಪಕ ಗುರು ದೇಶಪಾಂಡೆ ಯಾವ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.. ಐದು ದಿನಗಳಿಂದ ನಡೆಯುತ್ತಿದ್ದ ಚಿತ್ರೀಕರಣ ನಡೆಯುತಿತ್ತು.. ಇಂದು ಕೊನೆಯ ದಿನದ ಚಿತ್ರೀಕರಣ ಆಗಿತ್ತು. ಇನ್ನೂ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟ ಅಜಯ್ ರಾವ್, ಬೇಜವಾಬ್ದಾರಿಯಿಂದಲೇ ದುರಂತ ಸಂಭವಿಸಿದೆ ಎಂದು ಕಿಡಿಕಾರಿದ್ದಾರೆ. ಚಿತ್ರೀಕರಣದ ವೇಳೆ ಹೈಟೆನ್ ಶನ್ ವಿದ್ಯುತ್ ತಂತಿಗೆ ಮೆಟಲ್ ರೋಪ್ ಬಳಸಿ ಶೂಟಿಂಗ್ ಮಾಡಲಾಗಿದೆ. ಹಾಗಾಗಿ ಶಾಕ್ ಹೊಡೆದು ದುರಂತ ಸಂಭವಿಸಿದೆ. ನಾನು 5 ದಿನಗಳ ಹಿಂದೆಯೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೆ. ನಾವು ಪ್ರಶ್ನೆ ಮಾಡಿದರೆ ಕೋಪಕ್ಕೆ ಗುರಿಯಾಗಬೇಕಾಗುತ್ತೆ, ಮೂಗು ತೂರಿಸುತ್ತಾರೆ ಅಂತಾರೆ. ಮುಂಜಾಗೃತಾ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ಘಟನೆ ಸಂಭವಿಸಿದೆ. ಅಮಾಯಕ ವ್ಯಕ್ತಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.
ಪತಿ ಜೈಲಲ್ಲಿ.. ಶಿಲ್ಪಾ ಶೆಟ್ಟಿ ಬಂಧನದ ಭೀತಿಯಲ್ಲಿ … ವಂಚನೆ ಕೇಸ್ ನಲ್ಲಿ ನಟಿ , ತಾಯಿ ವಿರುದ್ಧ ಕೇಸ್ ದಾಖಲು..!
ಘಟನೆ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ 200 ಮೀಟರ್ ದೂರದಲ್ಲಿದ್ದೆ. ದುರಂತದ ವೇಳೆ ಜೋರಾದ ಸೌಂಡ್ ಆಗಿದೆ ಎದ್ದು ನೋಡುವಷ್ಟರಲ್ಲಿ ಗುಂಪು ಸೇರಿತ್ತು. ನಮ್ಮ ಹುಡುಗರು ಮಾಹಿತಿ ನೀಡಿದ್ದಾರೆ. ನಾನು ಯಾರನ್ನೂ ದೂರುತ್ತಿಲ್ಲ, ಆದರೆ ಬೇಜವಬ್ದಾರಿ ಇಂತಹ ದುರಂತಕ್ಕೆ ಕಾರಣವಾಗುತ್ತಿದೆ. ಹಾಗಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇನ್ನೂ ಯಾವುದೇ ಮುಂಜಾಗ್ರತಾ ಇಲ್ಲದೇ ಚಿತ್ರೀಕರಣ ನಡೆಯುತ್ತಿದ್ದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ಘಟನೆಯಲ್ಲಿ ತೆಂಗಿನ ಜಮೀನು ಸಂಪೂರ್ಣ ಹಾಳಾಗಿದೆ. ಫೈಟರ್ ಗೆ ಸಹಾಯವಾಗಿದ್ದ ವ್ಯಕ್ತಿಗೂ ಗಂಭೀರ ಗಾಯವಾಗಿದೆ. ಅವರನ್ನ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.. ಬಿಡದಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..
ಇನ್ನೂ ತೆಂಗಿನ ತೋಟದ ಜಮೀನು ಮಾಲೀಕ ಪುಟ್ಟರಾಜು ನಾಪತ್ತೆಯಾಗಿರೋದಾಗಿ ತಿಳಿಸದುಬಂದಿದೆ. ಫೈಟ್ ಸಂಬಂಧ ವಿದ್ಯುತ್ ತಂತಿ ನೋಡದೇ ಕ್ರೇನ್ ಮೆಲಕ್ಕೆತ್ತಿದ್ದ ಪರಿಣಾಮ ಅನಾಹುತ ಸಂಭವಿಸಿದೆ ಎನ್ನಲಾಗಿದೆ.. ಈ ವೇಳೆ ವಿದ್ಯುತ್ ಸ್ಪರ್ಶಿಸಿ ವಿವೇಕ್ ಸಾವನಪ್ಪಿದ್ದಾರೆ.. ಕ್ರೇನ್ ಚಾಲಕ ಹಾಗೂ ಫೈಟ್ ಮಾಸ್ಟರ್ ಅನ್ನು ವಿಚಾರಣೆಗೆ ಒಳಪಡಿಸಲಾಗಿದೆ.. ಯೋಗ್ಯವಲ್ಲದ ಜಾಗದಲ್ಲಿ ಚಿತ್ರೀಕರಣ ಮಾಡಿರುವುದೇ ಚಿತ್ರತಂಡ ಮಾಡಿರುವ ತಪ್ಪು ಎನ್ನಲಾಗ್ತಿದೆ. ಈ ದರ್ಘಟನೆಯಲ್ಲಿ ರಂಜಿತ್ ಎನ್ನುವ ಮತ್ತೋರ್ವ ವ್ಯಕ್ತಿಗೂ ಗಂಭೀರ ಗಾಯಗಳಾಗಿದೆ. ಅವರನ್ನು ಆರ್ ಆರ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಲವ್ ಯೂ ರಚ್ಚು ಶೂಟಿಂಗ್ ವೇಳೆ ದುರಂತ , ಫೈಟರ್ ಸಾವು : ಬೇಜವಾಬ್ದಾರಿಯೇ ದುರಂತಕ್ಕೆ ಕಾರಣ ಎಂದ ಅಜಯ್ ರಾವ್..!
ಈ ಘಟನೆ ಬಗ್ಗೆ ರಂಜಿತ್ ಪ್ರತಿಕ್ರಿಯೆ ನೀಡಿದ್ದು, ಇದು ಕ್ರೇನ್ ಆಪರೇಟರ್ ಅಜಾಗರೂಕತೆಯಿಂದ ಆಗಿರುವ ಘಟನೆ. ಇದರಲ್ಲಿ ಫೈಟ್ ಮಾಸ್ಟರ್ ಆಗಲಿ ಅಥವಾ ಬೇರೆ ಯಾರದ್ದೇ ಅಗಲಿ ತಪ್ಪಿಲ್ಲ. ಕ್ರೇನ್ ಆಪರೇಟರ್ ಅಚಾನಕ್ ಆಗಿ ವೈರ್ ತಗುಲಿಸಿದ ಕಾರಣ ದುರಂತ ನಡೆಯಿತು ಎಂದಿದ್ದಾರೆ. ನಾನು ಏಳು ವರ್ಷದಿಂದ ಮಾಸ್ಟರ್ ಬಳಿ ಕೆಲಸ ಮಾಡ್ತಿದ್ದೇನೆ. ಅವರು ಈ ರೀತಿ ನಿರ್ಲಕ್ಷ್ಯ ಮಾಡುವ ವ್ಯಕ್ತಿಯಿಲ್ಲ. ಶೂಟಿಂಗ್ ನಲ್ಲಿ ಎಲ್ಲ ಸ್ಟಂಟ್ ಚೆನ್ನಾಗಿ ಆಗ್ತಿತ್ತು. ಟೇಕ್ ಮಾಡೋದಕ್ಕೆ ರಿಹಾರ್ಸಲ್ ಮಾಡ್ತಿದ್ವಿ. ಪಕ್ಕದಲ್ಲೇ ಮಾಸ್ಟರ್ ಹೀರೋ ಅವರದ್ದು ಶೂಟ್ ಮಾಡ್ತಿದ್ರು. ಮೊದಲೇ ಆ ತೋಟದೊಳಗೆ ಕ್ರೇನ್ ಬರಲ್ಲ ಅಂತ ಹೇಳಿದ. ಆಮೇಲೆ ಹೇಗೋ ಒಳಗೆ ಬಂದ. ಮೊದಲು ಒಂದು ಸಲ ಮರ ಟಚ್ ಮಾಡಿದ. ಆಗಲೇ ನಾವು ಎಚ್ಚರಿಸಿದ್ವಿ. ಆದರೆ ಇನ್ನೊಂದು ಅಚಾನಕ್ ಆಗಿ ಹೈಟೆನ್ಷನ್ ವೈರ್ ಟಚ್ ಮಾಡಿದಾಗ ಹೀಗೆ ಆಯಿತು. ಇಲ್ಲಿ ಮಾಸ್ಟರ್ ನ ಆರೋಪಿ ಮಾಡುವುದು ಸರಿಯಿಲ್ಲ ಎಂದು ಹೇಳಿದ್ದಾರೆ.