ಒಲಿಂಪಿಕ್ಸ್ ವೇಳೆ ಅನುಚಿತ ವರ್ತನೆ : ಅಮಾನತುಗೊಂಡ ವಿನೇಶ್ ಪೋಗಟ್
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅಅನುಚಿತ ವರ್ತನೆ ತೋರಿದ ಆರೋಪದಡಿ ಭಾರತದ ಕುಸ್ತಿ ಪಟು ವಿನೇಶ್ ಪೋಗಟ್ ಗೆ ಸಂಕಷ್ಟ ಎದುರಾಗಿದ್ದು, ಅವರನ್ನ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ . ಇದೀಗ ಅನುಚಿತ ವರ್ತನೆ ತೋರಿದ್ದ ಇನ್ನೋರ್ವ ಕುಸ್ತಿ ಪಟು ಸೋನಮ್ ಮಲಿಕ್ ಗೆ ಭಾರತ ಕುಸ್ತಿ ಫೆಡರೇಶನ್ ಮಂಗಳವಾರ ನೋಟಿಸ್ ನೀಡಿದೆ.
ಒಲಿಂಪಿಕ್ಸ್ ಗೂ ಮೊದಲು ಕೋಚ್ ವೂಲರ್ ಅಕೋಶ್ ಬಳಿ ಹಂಗೇರಿಯಲ್ಲಿ ತರಬೇತಿ ಪಡೆದಿದ್ದ ವಿನೇಶ್ ಅಲ್ಲಿಂದ ನೇರವಾಗಿ ಟೋಕಿಯೊಗೆ ಪ್ರಯಾಣಿಸಿದ್ದರು. ಕ್ರೀಡಾಗ್ರಾಮದಲ್ಲಿ ಉಳಿದುಕೊಳ್ಳಲು ತಗಾದೆ ತೆಗೆದಿದ್ದ ಅವರು ಭಾರತದ ಇತರ ಕುಸ್ತಿಪಟುಗಳ ಜೊತೆಯಲ್ಲಿ ಅಭ್ಯಾಸ ನಡೆಸಲು ನಿರಾಕರಿಸಿದ್ದರು.
ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಶಿವ್ ನರೇಶ್ ಸಂಸ್ಥೆ ಪ್ರಾಯೋಜಕತ್ವ ನೀಡಿತ್ತು. ಕ್ರೀಡಾಪಟುಗಳು ಸ್ಪರ್ಧೆಯ ವೇಳೆ ಶಿವ್ ನರೇಶ್ ಲಾಂಛನವಿರುವ ಪೋಷಾಕು ಧರಿಸುವಂತೆ ಸೂಚಿಸಲಾಗಿತ್ತು. ಇದನ್ನು ಧಿಕ್ಕರಿಸಿದ್ದ ವಿನೇಶ್ ನೈಕ್ ಸಂಸ್ಥೆಯ ಲಾಂಛನ ವಿರುವ ಪೋಷಾಕು ತೊಟ್ಟಿದ್ದರು. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ಅ.16ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ .
ಒಲಿಂಪಿಕ್ಸ್ ಗೆ ತೆರಳುವ ಮೊದಲು ಸೋನಮ್ / ಅವರ ಕುಟುಂಬದವರು ಡಬ್ಲ್ಯು ಎಫ್ ಐ ಕಚೇರಿಗೆ ತೆರಳಿ ಪಾಸ್ ಪೋರ್ಟ್ ಪಡೆಯಬೇಕಿತ್ತು. ಆದರೆ ಅವರು ತಮ್ಮ ಪರವಾಗಿ ಪಾಸ್ ಪೋರ್ಟ್ ಪಡೆದುಕೊಳ್ಳುವಂತೆ ಸಾಯ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅವರ ವರ್ತನೆ ಸಹಿಸುವುದಕ್ಕೆ ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿ ಅನುಚಿತ ವರ್ತನೆ ಎಂದು ಈ ಕ್ರಮ ತೆಗೆದುಕೊಳ್ಳಲಾಗಿದೆ.








