SSLC ಪರೀಕ್ಷೆ ಬರೆದು ಒಟ್ಟಾಗಿ ಪಾಸಾದ ತಾಯಿ – ಮಗ
ಹಾಸನ : 2021 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಓರ್ವ ವಿದ್ಯಾರ್ಥಿ ಬಿಟ್ಟು ಉಳಿದ ಎಲ್ಲರೂ ಪಾಸ್ ಆಗಿದ್ದಾರೆ.. 99.9% ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.. ಆದ್ರೆ ವಿಶೇಷ ಅಂದ್ರೆ ಹಾಸನದಲ್ಲಿ ತಾಯಿ ಮಗ ಇಬ್ಬರೂ ಸಹ ಪರೀಕ್ಷೆ ಬರೆದು ಒಟ್ಟಾಗಿ ಪಾಸ್ ಆಗುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು.. 34 ವರ್ಷದ ತಾಯಿ ತೀರ್ಥಾ ಹಾಗೂ ಆಕೆಯ ಪುತ್ರ ಹೇಮಂತ್ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.. ಸಕಲೆಶಪುರ ತಾಲೂಕಿನ ಲಕ್ಷ್ಮೀಪುರ ನಿವಾಸಿಗಳಾದ ತಾಯಿ ಮಗ ಪರೀಕ್ಷೆಯಲ್ಲಿ ಪಾಸಾಗಿ ಎಲ್ಲರ ಗಮನ ಸೆಳೆದಿದ್ದಾರೆ.. ತೀರ್ಥಾ 8ನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದರು..
ಆದ್ರೆ ಈ ಬಾರಿ 10ನೇ ತರಗತಿ ಪರೀಕ್ಷೆ ಬರೆಯುವ ನಿರ್ಧಾರ ಮಾಡಿ ತನ್ನ ಮಗನ ಸ್ಟಡಿ ಮೆಟೀರಿಯಲ್ಸ್ ನ ಓದಿಕೊಂಡೇ ಪಾಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.. ಲಾಂಗನಾಸ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ.. ಮಗ ಹೇಮಂತ್ ಶ್ರೀ ಮಾರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾನೆ.. ಮಗ 562 ಅಂಕ ಪಡೆದ್ರೆ ತಾಯಿ 235 ಅಂಕ ಪಡೆದಿದ್ದಾರೆ.