ಸುಲಭ ಶೌಚಾಲಯಕ್ಕೆ ಮೋದಿ ಹೆಸರಿಡಿ ಅಂದಿದ್ದು ಕೇಳಿ ರಕ್ತ ಕುದೀತು – ಈಶ್ವರಪ್ಪ
ಬೆಳಗಾವಿ : ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ಸಂಘಟನೆ ಬೆಳೆಸಬೇಕು ಅಂತಾ ಮಾತಾಡಿದ್ದೆ. ದೀನದಯಾಳ್ ಉಪಾಧ್ಯರನ್ನ ಕಗ್ಗೊಲೆ ಮಾಡಿ ಫುಟ್‌ಬಾತ್‌ನಲ್ಲಿ ಎಸೆದು ಹೋದ್ರು. ಆಗ ಬಿ ಕಾಮ್ ಅಂತಾ ನಮ್ಮ ಹಿರಿಯರು ಹೇಳಿದ್ರು, ಆಗ ನಮ್ಮ ಬಳಿ ಶಕ್ತಿ ಇರಲಿಲ್ಲ. ಈಗ ನಮ್ಮ ಶಕ್ತಿ ಜಾಸ್ತಿ ಇದೆ ಎಂದು ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ..
ಬೆಳಗಾವಿಯಲ್ಲಿ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕೆ ಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಗೋ ಕಳ್ಳತನ ಮಾಡೋರನ್ನ ತಡೆದಿದಕ್ಕೆ ಕೊಲೆಗಳಾದವು. ಆಗ ಸಿದ್ದರಾಮಯ್ಯರನ್ನ ಕೇಳಿದಾಗ ಕೋಮುವಾದಿಗಳನ್ನು ಬಗ್ಗು ಬಡೀತಿವಿ ಅಂದ್ರು. ನಮ್ಮ ಶಕ್ತಿ ಬೆಳೆಸಬೇಕು ಅಂತಾ ಹೇಳಿದ್ದು ತಪ್ಪಲ್ಲ.
ಫೇಸ್ ವಿತ್ ಸೇಮ್ ಸ್ಟಿಕ್, ಹೊಡೆದ್ರೆ ವಾಪಸ್ ಹೊಡೀರಿ ಅಂತಾ ನಮ್ಮ ಹಿರಿಯರು ಹೇಳಿದ್ದಾರೆ. ಅದಕ್ಕೆ ಜೋಕರ್ ಅಂತಾ ಹೆಸರಿಟ್ಟುಕೊಳ್ಳಿ ಅಂತಾ ಅವರು ಹೇಳಿದ್ರು. ನನಗೆ ಬಿಪಿ ಶುಗರ್ ಇಲ್ಲ ನನ್ನ ತಂಟೆಗೆ ಬಂದವ್ರಿಗೆ ಬಿಪಿ ಶುಗರ್ ಬರುತ್ತೆ ಎಂದಿದ್ರು.
ನರೇಂದ್ರ ಮೋದಿ ಹೆಸರು ಸುಲಭ ಶೌಚಾಲಯಕ್ಕೆ ಹೆಸರಿಡಿ ಅಂತಾ ಹೇಳಿದ್ದು ಸರೀನಾ. ಜೋಕರ್ ಅಂದಿದ್ದಕ್ಕೆ ಸಿಟ್ಟು ಬಂತು. ಸುಲಭ ಶೌಚಾಲಯಕ್ಕೆ ಮೋದಿ ಹೆಸರಿಡಿ ಅಂದಿದ್ದು ಕೇಳಿ ರಕ್ತ ಕುದೀತು. ಸಿಟ್ಟಿನ ಭರದಲ್ಲಿ ಆ ಮಾತು ಮಾತನಾಡಿ ತಕ್ಷಣವೇ ಆ ಪದ ವಾಪಸ್ ಪಡೆದೆ ಎಂದು ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ನೀಡಿದ್ದ ಹೇಳಿಕೆ ಸರಿ ಅಲ್ಲ ಅನ್ನುವುದನ್ನ ಹೇಳಿಕೊಂಡಿದ್ದಾರೆ.
ಇದೇ ವೇಳೆ ನಾಗಪುರ ಟ್ರೇನಿಂಗ್ ಬಂದಿದ್ದಕ್ಕೆ ಶಿವಮೊಗ್ಗ ಜನ ನನ್ನ ಐದು ಸಾರಿ ಆರಿಸಿದ್ರು. ನಾನು ಕ್ಷಮೆ ಕೇಳಿದೆ, ನೀವು ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕಲ್ವಾ. ಇಟಲಿ ಯೂನಿವರ್ಸಿಟಿ ಒಳ್ಳೆಯ ಬುದ್ದಿ ಹೇಳಿಕೊಟ್ಟಿದ್ದೆ ಅಂತಾ ಹೇಳ್ತಿದ್ದೆ. ನಾನು ಆ ಪದ ಬಳಕೆ ಮಾಡಿದ್ದು ಹರಿಪ್ರಸಾದ್‌ಗೆ. ಎಲ್ಲಾ ಕಾಂಗ್ರೆಸ್ ನಾಯಕರಿಗಲ್ಲ. ನನಗೂ ಹರಿಪ್ರಸಾದ್ ಗೂ ವೈಯಕ್ತಿಕ ದ್ವೇಷ ಇಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.