ಜಾಮೀನು ಸಿಕ್ರು ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್ ಆಗುವುದು ಡೌಟ್..?
ಧಾರವಾಡ : ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಬೇಕಾದ ಖಾತೆ ಕೊಡದೇ ಹೋದ್ರೆ ರಾಜಕೀಯ ನಿವೃತ್ತಿ..? – ಆನಂದ್ ಸಿಂಗ್
ಒಂಬತ್ತು ತಿಂಗಳ ಕಾಲ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿಗೆ ಕಡೆಗೂ ಜಾಮೀನು ಸಿಕ್ಕಿದೆ.. ಕಳದೆ ವರ್ಷ ನವೆಂಬರ್ 5 ರಂದು ವಿನಯ್ ಕುಲಕರ್ಣಿ ಬಂಧಿಸಿಲಾಗಿತ್ತು. 9 ತಿಂಗಳು 6 ದಿನಗಳ ಜೈಲು ವಾಸದ ಬಳಿಕ ಬೇಲ್ ಸಿಕ್ಕಿದೆ..
ಆದ್ರೆ ಸಾಕ್ಷನಾಶ ಪ್ರಕರಣದಲ್ಲಿ ಇನ್ನೂ ಕುಲಕರ್ಣಿಗೆ ಕಂಟಕ ಮುಂದುವರೆದಿದೆ.. ಸಾಕ್ಷ್ಯ ನಾಶ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಮೊದಲ ಆರೋಪಿಯಾಗಿದ್ದು, ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಜಾಮೀನು ತಿರಸ್ಕಾರ ಗೊಂಡಿರುವ ಹಿನ್ನೆಲೆ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗೋದು ಡೌಟು ಎಂದು ಸಹ ಹೇಳಲಾಗ್ತಿದೆ.