ರಾಜ್ಯಸಭೆಯಲ್ಲಿ ಮಹಿಳಾ ಮಾರ್ಷಲ್ ಗಳ ಮೇಲೆ ಹಲ್ಲೆ – ತನಿಖೆಗಾಗಿ ಸಮಿತಿ ರಚನೆ..!
ರಾಜ್ಯಸಭೆಯಲ್ಲಿ ಮಹಿಳಾ ಮಾರ್ಷಲ್ ಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋ ತುಣುಕೊಂದು ಸಖತ್ ವೈರಲ್ ಆಗ್ತಿದೆ.. ಈ ವಿಡಿಯೋದಲ್ಲಿ ಪಾ ವಿರೋಧ ಪಕ್ಷದ ಸದಸ್ಯರು ಭದ್ರತಾ ಸಿಬ್ಬಂದಿಯನ್ನು ಎಳೆದಾಡುತ್ತಿರುವ ದೃಶ್ಯಗಳಿವೆ.. ಈ ವಿಚಾರ ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿದೆ. ಸದನದ ಬಾವಿಗಿಳಿದು ಗದ್ದಲವೆಬ್ಬಿಸುತ್ತಿದ್ದ ಸದಸ್ಯರನ್ನು ಮಾರ್ಷಲ್‌ಗಳು ತಡೆಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಮಹಿಳಾ ಸಿಬ್ಬಂದಿಯೊಬ್ಬರನ್ನು ಕಾಂಗ್ರೆಸ್ ನ ರಾಜ್ಯಸಭೆ ಸದಸ್ಯೆ ಛಾಯಾ ವರ್ಮಾ ಎಳೆದಾಡಿದ್ದಾರೆ.. ಇದು ವಿಡಿಯೊದಲ್ಲಿ ದಾಖಲಾಗಿದೆ.ಇದೀಗ ಸಂಸತ್ ನಲ್ಲಿ ಮಹಿಳಾ ಮಾರ್ಷಲ್ ಜೊತೆಗೆ ದುರ್ನಡತೆ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ಸಮಿತಿ ರಚಿಸಿದೆ.
ಸ್ವಾತಂತ್ರ್ಯದ “ಅಮೃತ ಮಹೋತ್ಸವ” ಪ್ರಯುಕ್ತ “ಫಿಟ್ ಇಂಡಿಯಾ ಫ್ರೀಡಂ ರನ್ 2.0” ಅಭಿಯಾನಕ್ಕೆ ಚಾಲನೆ
ಸಂಸತ್ತಿನ ಸದಸ್ಯರು ಮಹಿಳಾ ಮಾರ್ಷಲ್ ಗಳನ್ನ ಎಳೆದಾಡಿ , ತಲ್ಲಾಡುತ್ತಾ ಹಲ್ಲೆಗೆ ಯತ್ನಿಸಿದ್ದಾರೆ.. ಅವರ ಜೊತೆಗೆ ಅನುಚಿತ ವರ್ತನೆ ಹಿನ್ನೆಲೆ ತನಿಖೆಗೆ ಸಮಿತಿ ರಚಿಸಲಾಗಿದೆ.. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಘಟನೆ ನಡೆದ ದಿನ ಒಟ್ಟಾರೆಯಾಗಿ 30 ಮಾರ್ಷಲ್ ಗಳನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.. ಈ ಪೈಕಿ 12 ಮಂದಿ ಮಹಿಳೆಯರಾಗಿದ್ರೆ 18 ಮಂದಿ ಪರುಷರಾಗಿದ್ರು.
ಪ್ರತಿಪಕ್ಷಗಳ ಕ್ರಮವನ್ನು ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ಘಟನೆ ನಡೆದಿರುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ.. ಅಲ್ಲದೇ ಮಹಿಲಾ ಮಾರ್ಷಲ್ ಗಳ ಜೊತೆಗೆ ದುರ್ನಡತೆ ಸಲ್ಲದು ಎಂದು ಆಕ್ರೋಶ ಹೊರಹಾಕಿದರು.. ಅಲ್ಲದೇ ಈ ದಿನ ಭಾರತದ ಪಾಲಿಗೆ ಕಪ್ಪು ದಿನವಾಗಿದೆ.. ಸಂಸತ್ತಿನಲ್ಲಿ ಈ ರೀತಿಯಾದ ನಡೆ ನಿಜಕ್ಕೂ ನಾಚಿಕೆಗೇಡು. ಸಂಸತ್ತಿನಲ್ಲಿ ಇಂತಹ ನಡೆ ತೋರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಿಡಿಕಾರಿದ್ದಾರೆ.
“ಜೋಕೆ ಜೋಕೆ ಮೇಕೆ… ಹೆಬ್ಬುಲಿ ಹಾಕಿದೆ ಕೇಕೆ”..! ಪುಷ್ಪಾ ಕನ್ನಡ ವರ್ಷನ್ ಹಾಡು ಸೂಪರ್…!
ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಹ ಈ ಕುರಿತಾಗಿ ಮಾತನಾಡಿದ್ದು, ವಿಕ್ಷದವರ ಕ್ರಮವನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಪ್ರಜಾಪ್ರಭುತ್ವದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದು ಕರೆದಿದ್ದಾರೆ. “7.5 ವರ್ಷಗಳ ನಂತರವೂ ಜನರು ನರೇಂದ್ರ ಮೋದಿಯನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ ಎಂಬುದನ್ನು ಇದು ತೋರಿಸುತ್ತದೆ” ಎಂದು ಹೇಳಿಕೊಂಡಿದ್ದಾರೆ.








