ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಂಚಿತರಾದವರಿಗೂ ‘ಅಲ್ಟ್ರಾಜ್’ ಕಾರು ಗಿಫ್ಟ್ ಆಗಿ ಕೊಟ್ಟ ಟಾಟಾ..!
ನವದೆಹಲಿ : ಟೋಕಿಯೋ ಒಲಂಪಿಕ್ಸ್ ನಲ್ಲಿ ಈ ಬಾರಿ ಹಲವರು ಪದಕಗಳನ್ನ ಗೆದ್ದು ಭಾರತದ ಕೀರ್ತಿ ಹೆಚ್ಚಿಸಿದ್ರೆ ಇನ್ನೂ ಅನೇಕ ಸ್ಪರ್ಧಿಗಳು ಭಾರತಕ್ಕಾಗಿ ಹೋರಾಡಿ ಕಡೆ ಕ್ಷಣದಲ್ಲಿ ಪದಕ ವಂಚಿತರಾಗಿದ್ದಾರೆ.. ಹೀಗೆ ಕಂಚಿನ ಪದಕ ವಂಚಿತರಾದ ಕ್ರೀಡಾಪಟುಗಳಿಗೂ ಸಹ ಟಾಟಾ ಆಲ್ಟ್ರೋಜ್ ಕಾರನ್ನ ಗಿಫ್ಟ್ ಆಗಿ ಘೋಷಿಸಿದೆ ಟಾಟಾ ಮೋಟಾರ್ಸ್ ಕಂಪನಿ..
ಹೌದು.. ಟಾಟಾ ಮೋಟಾರ್ಸ್ ತನ್ನ ಅತ್ಯಂತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಕಂಚಿನ ಪದಕ ಮಿಸ್ ಆದ ಕ್ರೀಡಾಪಟುಗಳಿಗೂ ಘೋಷಣೆ ಮಾಡುವ ಮೂಲಕ ಕ್ರೀಡಾ ಸ್ಪೂರ್ತಿ ಕಳೆದುಕೊಳ್ಳದಂತೆ ನೆರವಾಗಿದೆ.. ಜೊತೆಗೆ ಆಟಗಾರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ಈ ಮೂಲಕ ಧನ್ಯವಾದಗಳನ್ನ ಅರ್ಪಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಕಳೆದುಕೊಂಡ ಭಾರತೀಯ ಕ್ರೀಡಾಪಟುಗಳಿಗೆ ಆಲ್ಟ್ರೋಜ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಟಾಟಾ ಮೋಟಾರ್ಸ್ ಗುರುವಾರ ಘೋಷಿಸಿದೆ.
https://twitter.com/TataMotors_Cars/status/1426040027314749446
ಈ ಆಟಗಾರರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಚಿನ್ನದ ಮಾನದಂಡವನ್ನ ಸೆಟ್ ಮಾಡಿದ್ದಾರೆ.. ಹಲವಾರು ಯುವ ಕ್ರೀಡಾಪಟುಗಳಿಗೆ ಪ್ರೇರೇಪಣೆಯಾಗಿದ್ದಾರೆ. ಎಂದು ಕಂಪನಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. “ಈ ಸ್ವದೇಶಿ ಆಟಗಾರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ಧನ್ಯವಾದ” ಎಂದು ತಿಳಿಸಿರುವ ಟಾಟಾ ಮೋಟಾರ್ಸ್ ತನ್ನ ಅತ್ಯುನ್ನತ ಪ್ರೀಮಿಯಂ ಹ್ಯಾಚ್ ಅನ್ನು ಉಡುಗೊರೆಯಾಗಿ ನೀಡ್ತಿದೆ.. ಅಲ್ಟ್ರೊಜ್” ಹೈ ಸ್ಟ್ರೀಟ್ ಗೋಲ್ಡ್ “ಬಣ್ಣದ ಪ್ಯಾಲೆಟ್ ಅನ್ನು ಶೀಘ್ರದಲ್ಲೇ ಈ ಆಟಗಾರರಿಗೆ ನೀಡುವುದಾಗಿ ತಿಳಿಸಿದೆ.
ಇದಕ್ಕೆ ಹೇಳೋದು… ಮನುಷ್ಯರಿಗಿಂತ ವಿಷಪೂರಿತ ಪ್ರಾಣಿ ಮತ್ತೊಂದಿಲ್ಲ..! ಹಾವು ಕಚ್ಚಿದ ಸಿಟ್ಟಲ್ಲಿ …ಅದೇ ಹಾವಿಗೆ ಕಚ್ಚಿ ಕೊಂದ ಭೂಪ..!








