`ಹೊಸ ಇನ್ನಿಂಗ್ಸ್’ ಆರಂಭಿಸಿದ `ಉನ್ಮುಕ್ತ್ ಚಾಂದ್’
ನವದೆಹಲಿ : ಶುಕ್ರವಾರವಷ್ಟೇ ಎಲ್ಲಾ ವಿಭಾಗದ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಉನ್ಮುಕ್ತ್ ಚಾಂದ್, ಇದೀಗ ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಉನ್ಮುಕ್ತ್ ಚಾಂದ್ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದರು. ಬಳಿಕ ರಾಷ್ಟ್ರೀಯ ತಂಡಕ್ಕೆ ಎಂಟ್ರಿಕೊಡುವ ಭರವಸೆಯನ್ನೂ ಮೂಡಿದ್ದರು.
ಆದ್ರೆ ಸತತ ವೈಫಲ್ಯಗಳಿಂದ ಮೈದಾನದಿಂದ ದೂರ ಉಳಿಯಬೇಕಾಯಿತು. ಐಪಿಎಲ್ ನಲ್ಲೂ ಕೂಡ ಚಾಂದ್ ಕಮಾಲ್ ಮಾಡಲಿಲ್ಲ. ಇದರಿಂದ ನಿನ್ನೆ ಅವರು ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ಆದ್ರೆ ಇದೀಗ ಅಮೆರಿಕ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದ ಪರವಾಗಿ ಟೊಯೋಟಾ ಮೈನರ್ ಕ್ರಿಕೆಟ್ ಲೀಗ್ ಚಾಂಪಿಯನ್ ಶಿಪ್ ನಲ್ಲಿ ಉನ್ಮುಕ್ತ್ ಚಾಂದ್ ಮೈದಾನಕ್ಕೆ ಇಳಿಯಲಿದ್ದು, ಮೊದಲ ಪಂದ್ಯವನ್ನು ಸೋಕಲ್ ಲ್ಯಾಶಿಂಗ್ಸ್ ವಿರುದ್ಧ ಆಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಉನ್ಮುಕ್ತ್ ಚಾಂದ್, ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಮುಂದಿನ ಹೆಜ್ಜೆಯಿಟ್ಟಿದ್ದೇನೆ. ಅಮೆರಿಕನ್ ಕ್ರಿಕೆಟ್ ಅಭಿವೃದ್ಧಿಯ ಭಾಗವಾಗಲಿದ್ದೇನೆ. ಈ ಅವಕಾಶದಿಂದ ರೋಮಾಂಚನಗೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.