ADVERTISEMENT
Monday, August 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

ಅಫ್ಘಾನಿಸ್ತಾನದಲ್ಲಿ ಭಾರತ ಸೇನಾ ಪಾತ್ರ ವಹಿಸಿದ್ರೆ ಪರಿಣಾಮ ಭೀಕರ – ತಾಲೀಬಾನ್ ಎಚ್ಚರಿಕೆ

Namratha Rao by Namratha Rao
August 14, 2021
in Uncategorized
Share on FacebookShare on TwitterShare on WhatsappShare on Telegram

Related posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

August 24, 2026
mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

August 22, 2026

ಅಫ್ಘಾನಿಸ್ತಾನದಲ್ಲಿ ಭಾರತ ಸೇನಾ ಪಾತ್ರ ವಹಿಸಿದ್ರೆ ಪರಿಣಾಮ ಭೀಕರ – ತಾಲೀಬಾನ್ ಎಚ್ಚರಿಕೆ

ಅಫ್ಘಾನಿಸ್ತಾನ :  ಅಫ್ಗಾನಿಸ್ತಾನ ಅಮೆರಿಕಾದಿಂದ ತನ್ನ ಸೇನೆಯನ್ನ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ ಬೆನ್ನಲ್ಲೇ ಅಫ್ಗಾನ್ ನಲ್ಲಿ ಅರಾಜಕತೆಯು ತಾಂಡವವಾಡ್ತಿದೆ.. ಕುಂತಂತ್ರಿ ಚೀನಾ ಹಾಗೂ ಅದರ ಗುಲಾಮ ದೇಶ ಪಾಕಿಸ್ತಾನ ಸಹಾಯದಿಂದ ತಾಲೀಬಾನಿಗಳು ಮುಕ್ಕಾಲು ಭಾಗ ಅಫ್ಗಾನಿಸ್ತಾವನ್ನು ಅಧೀನಕ್ಕೆ ಪಡೆದುಕೊಮಡಿದ್ದು, ಜನರ ಮಾರಣ ಹೋಮ ನಡೆಸುತ್ತಿದ್ದಾರೆ.. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾ , ಅವಿವಾಹಿತ ಮಹಿಳೆಯರಿಗೆ ಉಗ್ರರನ್ನು ಮದುವೆಯಾಗುವಂತೆ ಚಿತ್ರಹಿಂಸೆ ನಿಡಲಾಗ್ತಿದೆ.. ಒಟ್ಟಾರೆಯಾಗಿ ಹೇಳೋದಾದ್ರೆ ಅಫ್ಗಾನ್ ಅಕ್ಷರಸಃ ಸ್ಮಶಾಣವಾಗಿ ಮಾರ್ಪಾಡಾಗಿದೆ..

ಈ ನಡುವೆ ಅಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ತಾಲೀಬಾನ್ ಎಚ್ಚರಿಕೆ  ನೀಡಿದೆ.  ಹೌದು ಅಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟು, ರಸ್ತೆ ನಿರ್ಮಾಣ ಅಭಿವೃದ್ಧಿ ವಿಚಾರಗಳಂತಹ ಮೂಲಸೌಕರ್ಯ ಯೋಜನೆಗಳಿಗೆ ಕೈಜೋಡಿಸಿರುವ ಭಾರತದ ಮಾನವೀಯ ಹಾಗೂ ಅಭಿವೃದ್ಧಿ ನೆರವನ್ನು ಸ್ವಾಗತಿಸಿರುವ ತಾಲೀಬಾನ್ ಉಗ್ರ ಸಂಘಟನೆ ಆಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ.

ಕತಾರ್ ಮೂಲದ ತಾಲೀಬಾನ್ ಉಗ್ರ ಸಂಘಟನೆಯ ವಕ್ತಾರ ಸುಹೈಲ್ ಶಹೀನ್ ಈ ಬಗ್ಗೆ ಮಾತನಾಡಿದ್ದು  ಅಫ್ಘಾನಿಸ್ತಾನದಲ್ಲಿ ಬೇರೆ ರಾಷ್ಟ್ರಗಳ ಸೇನಾ ಇರುವಿಕೆಯ ಪರಿಸ್ಥಿತಿಯನ್ನು ನೋಡಿದ್ದಾರೆ ಎನಿಸುತ್ತದೆ. ಈ ವಿಷಯ ಅವರಿಗೆ ತೆರೆದ ಪುಸ್ತಕವಾಗಿದೆ.ಅಫ್ಗಾನ್ ಮಿಲಿಟರಿಗೆ ಸೇನಾ ನೆರವು ನೀಡಿದರೆ ತಾಲೀಬಾನಿಗಳು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಭಾರತ ಆಫ್ಘಾನಿಸ್ತಾನದ ಜನತೆಗೆ ಹಾಗೂ ರಾಷ್ಟ್ರೀಯ ಯೋಜನೆಗಳಿಗೆ ಚಾಚಿರುವ ಸಹಾಯ ಹಸ್ತ ಶ್ಲಾಘನೀಯ ಎಂದೂ ಭಾರತಕ್ಕೆ ತಾಲೀಬಾನಿಗಳು ಧನ್ಯವಾದವನ್ನೂ ತಿಳಿಸಿದ್ಧಾರೆ.

ಇತ್ತೀಚೆಗೆ ಬಿಗಿಯಾಗಿ ಬುರ್ಖಾ ಧರಿಸಿದ್ದ ಕಾರಣಕ್ಕೆ 21 ವರ್ಷದ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿದ್ದರು ಈ ಪಾಪಿ ಉಗ್ರರು..  ಅಕ್ಷರಸಹ ನರಕವಾಗಿ ಮಾರ್ಪಾಡಾಗಿಬಿಟ್ಟಿರುವ ಅಫ್ಗಾನ್ ನಲ್ಲಿ ಇದೀಗ ತಾಲೀಬಾನಿಗಳು  ತಮ್ಮ ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಅವಿವಾಹಿತ ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ತಾಲಿಬಾನ್ ಉಗ್ರರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ತಾಲಿಬಾನ್ ಉಗ್ರರ ದಾಳಿಯಿಂದ ಬೆದರಿದ ಸಾರ್ವಜನಿಕರು ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಕಾಬೂಲ್ ನತ್ತ ಧಾವಿಸುತ್ತಿದ್ದಾರೆ.

ಈ ನಡುವೆ ಅವಿವಾಹಿತ ಮಹಿಳೆಯರು ತಮ್ಮ ಸಂಘಟನೆ ಉಗ್ರರನ್ನು ಮಮದುವೆಯಾಗುವಂತೆ ತಾಲೀಬಾನಿಗಳು ಒತ್ತಾಯಿಸುತ್ತಾ ಮದುವೆಯಾಗುವಂತೆ ಚಿತ್ರಹಿಂಸೆ ನೀಡ್ತಿರೋದಾಗಿ ವರದಿಯಾಗಿದೆ. ಈಗಾಗಲೇ ತಾಲಿಬಾನ್ ವಶಕ್ಕೆ ಪಡೆದಿರು ಪ್ರದೇಶಗಳಲ್ಲಿ ಅವಿವಾಹಿತ ಮಹಿಳೆಯರು ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಒತ್ತಡ ಹೇರಲಾಗುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ, ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಈ ಆಪಾನೆಗಳನ್ನ ತಾಲೀಬಾನ್ ನಿರಾಕರಿಸಿದೆ..

ಅಸಲಿಗೆ ಪಾಕಿಸ್ತಾನ ಚೈನಾ ಸೇರಿಕೊಂಡು ಭಾರತದ ವಿರುದ್ಧ ಹೆಣೆಯುತ್ತಿರುವ ರಣತಂತ್ರವಿದು ಎಂದೇ ಅನೇಕ ತಜ್ಞರು ವ್ಯಾಕ್ಯಾನಿಸುತ್ತಿದ್ದಾರೆ.. ಅಮೆರಿಕಾ ಎಚ್ಚರಿಸಿರುವಂತೆ ಭಾರತದ ವಿರುದ್ಧ ಮುಂದೆ ತಾಲೀಬಾನಿಗಳು ಬಲಿಷ್ಠವಾಗಬೇಕೆಂಬ ಉದ್ದೇಶದಿಂದ್ಲೇ ಚೀನಾ ಮತ್ತದರ ಗುಲಾಮ ದೇಶ ಭಿಕಾರಿ ಪಾಕಿಸ್ತಾನ ಸಂಚು ಮಾಡ್ತಿದ್ದು, ಪರೋಕ್ಷಾವಗಿ ತಾಲೀಬಾನ್ ಗೆ ಆರ್ಥಿಕವಾಗಿ ನೆರವಾಗ್ತಿವೆ ಎನ್ನಲಾಗ್ತಿದೆ.. ಸಾಲದಕ್ಕೆ ಪಾಕ್ ತನ್ನ ದೇಶದಲ್ಲಿ ವಲಸಿಗ ತಾಲೀಬಾನಿಗಳಿಗೆ ನೆಲೆಯೂರಲು ಜಾಗ ಕೊಟ್ಟಿದೆ ಎಂದಿದೆ.. ಆದ್ರೆ ಅಸಲಿಗೆ ತಾಲೀಬಾನ್ ಉಗ್ರರಿಗೆ ನೆಲೆ ಕಲ್ಪಿಸಿಕೊಟ್ಟಿದೆ ಎಂದೇ ಹೇಳಲಾಗ್ತಿದೆ.. ಮುಂದಿನ ದಿನಗಳಲ್ಲಿ ಭಾರತಕ್ಕೆ ತಾಲೀಬಾನಿಗಳು ಕಂಟಕವಾಗಲು ಈಗ ಇಡೀ  ಅಫ್ಗಾನ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಉಗ್ರರಿಗೆ ಸಪೋರ್ಟ್ ಮಾಡ್ತಿವೆ.. ಚೀನಾ ಪಾಕಿಸ್ತಾನ..

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ಟ್ರೈನಿ ಎಂಜಿನಿಯರ್ ಮತ್ತು ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಗಾಗಲೇ ತಾಲೀಬಾನಿಗಳು ಅಫ್ಗಾನ್ ನ ಮೊದಲ ಪ್ರಾಂತ್ಯದ ರಾಜಧಾನಿಯನ್ನು ಕೈವಶ ಮಾಡಿಕೊಂಡಿದ್ದಾರೆ. ನಿನ್ರೋಜ್‌ ಪಾಂತ್ಯದ ರಾಜಧಾನಿ ಝರಾಂಜ್‌ ಅನ್ನು ಉಗ್ರರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಾಂತ್ಯದ ಡೆಪ್ಯುಟಿ ಗವರ್ನರ್‌ ರೋಹ್‌ ಗುಲ್‌ ಖೈರ್ಜಾದ್‌ ತಿಳಿಸಿದ್ದಾರೆ. ಇರಾನ್‌ ಗಡಿಭಾಗದಲ್ಲಿರುವ ಈ ಪ್ರಾಂತ್ಯದಲ್ಲಿ ಉಗ್ರರು ಮತ್ತು ಸರ್ಕಾರಿ ಪಡೆಗಳ ನಡುವೆ ಕಾಳಗ ನಡೆಯದೆ ಪ್ರಾಂತ್ಯವನ್ನು ಅವರ ವಶಕ್ಕೊಪ್ಪಿಸಲಾಯಿತು ಎಂದು ಹೇಳಿದ್ದಾರೆ. ಉಗ್ರರು ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ. ಈ ನಗರದಲ್ಲಿ ಒಟ್ಟು50 ಸಾವಿರ ಮಂದಿ ವಾಸಿಸುತ್ತಿದ್ದಾರೆ.

ಮತ್ತೂಂದೆಡೆ, ಕಾಬೂಲ್‌ ನಲ್ಲಿ ಸರ್ಕಾರದ ಮಾಧ್ಯಮ ವಿಭಾಗದ ಮುಖ್ಯಸ್ಥ ದವಾಖಾನ್‌ ಮನಾಪಾಲ್‌ರನ್ನು ಹತ್ಯೆ ಮಾಡಲಾಗಿದೆ. ಶುಕ್ರವಾರದ ಪ್ರಾರ್ಥನೆಗಾಗಿ ಆಗಮಿಸುತ್ತಿದ್ದಂತೆಯೇ ಉಗ್ರರು ಅವರ ಮೇಲೆ ಗುಂಡು ಹಾರಿ ಸಿದ್ದಾರೆ. ಈ ಬಗ್ಗೆ ತಾಲಿಬಾನ್‌ ಸಂಘಟನೆಯ ವಕ್ತಾರನೇ ಈ ಅಂಶವನ್ನು ಖಚಿತಪಡಿಸಿದ್ದಾನೆ. ಆಫ್ಘಾನ್‌ನ ಪರಿಸ್ಥಿತಿ ಬಗ್ಗೆ ಕೇಂದ್ರ ಏಷ್ಯಾದ ರಾಷ್ಟ್ರಗಳಾಗಿರುವ ಕಝಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ತುರ್ಕ್ ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನದ ಸರ್ಕಾರಿ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಅಫ್ಘಾನಿಸ್ತಾನದ ಪಟಿಕಾ ಪ್ರಾಂತ್ಯದಲ್ಲಿ ಇರುವ ಅತ್ಯಂತ ಹಳೆಯ ಸಿಖ್‌ ಸಮುದಾಯದವರ ಗುರುದ್ವಾರದಲ್ಲಿ ಹಾಕಲಾಗಿದ್ದ ಧಾರ್ಮಿಕ ಧ್ವಜವನ್ನು ತಾಲಿಬಾನ್‌ ಉಗ್ರರು ತೆಗೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಫೋಟೋ ವೈರಲ್‌ ಆಗಿದೆ. ಇದನ್ನ ಭಾರತೀಯ ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿದೆ. ಎಲ್ಲಾ ಸಮುದಾಯದವರನ್ನು ಒಳಗೊಂಡಂತೆ ಆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತೆ ಪರಿಸ್ಥಿತಿ ಸುಧಾರಿಸಬೇಕು ಎನ್ನುವುದೇ ಭಾರತ ಸರ್ಕಾರದ ಆಶಯ. ಸದ್ಯ ಉಂಟಾಗಿರುವ ಬೆಳವಣಿಗೆ ಖಂಡನೀಯ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ಹೇಳಿದ್ದಾರೆ. ಇಡೀ ಅಫ್ಗಾನ್ ನ ಸುಮಾರು 70 % ಭಾಗವನ್ನ ಈಗಾಗಲೇ ಅಧೀನಕ್ಕೆ ತೆಗೆದುಕೊಂಡಿರುವ ತಾಲೀಬಾನ್ ಉಗ್ರರು ಇತ್ತೀಚೆಗೆ ಭಾರತದ ಫೋಟೋ ಜರ್ನಲಿಸ್ಟ್ ಡ್ಯಾನಿಷ್ ರನ್ನ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದರು.. ಅಲ್ಲದೇ ಇನ್ನೂ ವಿಕೃತಿ ಅಂದ್ರೆ ಖ್ಯಾತ ಹಾಸ್ಯ ಕಲಾವಿದ ಕೇವಲ ಜನರನ್ನ ನಗಿಸುತ್ತಿದ್ದರು.. ಇದು ಇಸ್ಲಾಂ ಧರ್ಮಕ್ಕೆ ವಿರೋಧ ಎಂದು ಅವರನ್ನೂ ಅಪಹರಿಸಿ ಕೊಂದಿದ್ದರು ಪಾಪಿಗಳು..  

ಜಪಾನ್ : ಸಮುದ್ರದಲ್ಲಿ ಇಬ್ಭಾಗವಾದ ಹಡಗು – ಕಡಲಲ್ಲಿ  ತೈಲ ಸೋರಿಕೆ..!

ರಾಷ್ಟ್ರಪತಿ ಪದಕ – ಪೊಲೀಸ್ ಸೇವಾ ಪದಕದ ಪಟ್ಟಿ ಬಿಡುಗಡೆ

Tags: afganisthanindiataliban terrorists
ShareTweetSendShare
Join us on:

Related Posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

by admin
August 24, 2026
0

ಬೆಂಗಳೂರು: ಕನ್ನಡ ಮಾಧ್ಯಮ ರಂಗದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಮಾಧ್ಯಮ ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ವಿನೂತನ ಕ್ರಿಕೆಟ್ ಟೂರ್ನಿಗೆ 9 ಡ್ರೀಮ್ಸ್ ಸಂಸ್ಥೆ...

mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

by admin
August 22, 2026
0

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ಮಿಂಚಿನ ಸಂಚಾರಕ್ಕೆ ಕಾರಣವಾದ ಮೇಲುಕೋಟೆ ಶಾಸಕ ಸ್ಥಳದಲ್ಲೇ ಸಮಸ್ಯೆಗಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ...

r-ashoka-protest-demanding-minister-b-nagendra-resignation-valmiki-corporation-scam

ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಹೋರಾಟ ಮುಂದುವರಿಕೆ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 21, 2026
0

  ಬೆಂಗಳೂರು,  ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಹೋರಾಟ ಮುಂದುವರಿಸಲಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ...

karnataka-apartment-ownership-and-management-bill-2026-krishna-byre-gowda-vidhana-soudha

ಲಕ್ಷಾಂತರ ಆಸ್ತಿ ಮಾಲೀಕರಿಗೆ ‘ಭೂ ಗ್ಯಾರಂಟಿ’: ‘ಬಿ-ಖಾತಾ’ ನಿವೇಶನಗಳಿಗೆ ಪಕ್ಕಾ ‘ಎ-ಖಾತಾ’: ಕೃಷ್ಣ ಬೈರೇಗೌಡ

by admin
August 21, 2026
0

• ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2026ಕ್ಕೆ ಸದನ ಅನುಮೋದನೆ • ಅನಧಿಕೃತ ಬಡಾವಣೆಗಳ ರಸ್ತೆಗಳನ್ನು 'ಸಾರ್ವಜನಿಕ ರಸ್ತೆ' ಎಂದು ಘೋಷಿಸಲು ಸೆಕ್ಷನ್ 284ಕ್ಕೆ ತಿದ್ದುಪಡಿ •...

dk-shivakumar-meets-hudco-delegation-in-vidhana-soudha

 ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ HUDCO ಪ್ರತಿನಿಧಿಗಳ ನಿಯೋಗ

by admin
August 21, 2026
0

ರಾಜ್ಯದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಯೋಜನೆಗಳ ಚುರುಕಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ (HUDCO) ಸಂಸ್ಥೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram