ಇವರೊಬ್ಬರೇ ಅಲ್ಲ ಅಹಿಂದ ಉಳಿಸುವವರು : ಸಿದ್ದು ವಿರುದ್ಧ ಹೆಚ್ ಡಿಕೆ ಕಿಡಿ
ರಾಮನಗರ :ಇವರು ಒಬ್ಬರೇ ಅಲ್ಲ ಅಹಿಂದ ಉಳಿಸುವವರು. ಅಹಿಂದ ಉಳಿಸಲು ಬಹಳ ಜನ ಕೆಲಸ ಮಾಡಿದ್ದಾರೆ. ಆದ್ರೆ ಇವರು ಮಾತ್ರ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೊರಟಿದ್ದಾರೆ. ಇವರ ನಿಜವಾದ ಬಣ್ಣ ಹೊರಬರಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಜಾತಿಗಣತಿ ವರದಿಯನ್ನ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ ಡಿ ಕೆ ಸ್ವೀಕರಿಸಲಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ನವರಿಗೆ ಬೇರೆ ಕೆಲಸ ಇಲ್ಲ. ಅದು ಕಾಂತರಾಜು ಕೊಟ್ಟಿರುವ ಜನಗಣತಿ ಅಲ್ಲ, ಸಿದ್ದರಾಮಯ್ಯ ಕೊಟ್ಟಿರುವ ಜನಗಣತಿಯಾಗಿದೆ. ರಾಜಕೀಯ ಬೆರೆಸಬೇಕು ಎಂದರೇ ನಾನು ದೊಡ್ಡಮಟ್ಟದಲ್ಲಿ ಬೆರೆಸಬಲ್ಲೆ. ಇವರು ಬರೆಸಿರುವ ವರದಿ ಅದು, 160 ಕೋಟಿ ಖರ್ಚು ಮಾಡಿ ಕಾಂತರಾಜು ಎಂಬುವವರನ್ನ ಅಧ್ಯಕ್ಷರು ಮಾಡಿ, ಕಾಂತರಾಜು ಬರಿ ಟಸ್ಸೆ ಹೊಡೆದಿರುವುದು ಅಷ್ಟೇ ಅದೇಲ್ಲ ಹುನ್ನಾರ ಎಂದು ದೂರಿದರು.
ಇದೀಗ ಆ ಕ್ರೆಡಿಟ್ ಸಿದ್ದರಾಮಯ್ಯ ನವರಿಗೆ ಹೋಗುತ್ತಿದೆ. ಮುಂದಿನ ದಿನದಲ್ಲಿ ದೇಶದಲ್ಲಿ ರಾಜ್ಯದಲ್ಲಿ ಯಾವಾವ ರೀತಿ ದೊಡ್ಡ ಮಟ್ಟದ ಸಮಸ್ಯೆ ಉದ್ಭವ ಮಾಡುತ್ತಾರೆ. ನಾನು ಸಿಎಂ ಆದಾಗ ಸಿದ್ದರಾಮಯ್ಯ ನವರೇ ಸಮನ್ವಯ ಸಮಿತಿ ಚೇರ್ಮನ್ ಆಗಿದ್ದರು. ಅವರು ಸುಳ್ಳು ಹೇಳಿದರೆ ನಾನು ಏನು ಮಾಡಲು ಸಾಧ್ಯ..? ಸಮಿತಿಯಲ್ಲಿ ಜನಗಣತಿ ವರದಿ ಸ್ವೀಕಾರ ಮಾಡಿ ಎಂದು ಹೇಳಿದ್ರಾ..? ಕಾಂತರಾಜು ವರದಿ ಸಿದ್ಧವಾಗಿದೆ ಎಂದು ನನ್ನ ಬಳಿ ಬಂದಿದ್ದರಾ ಎಂದು ಪ್ರಶ್ನಿಸಿದರು.
ಇನ್ನು ಸಿದ್ದರಾಮಯ್ಯ ಕಾಲದಲ್ಲಿ ದಲಿತರಿಗೆ ಕೊಡಬೇಕಾದ ಮನೆಗಳನ್ನ ರದ್ದು ಮಾಡಿ ಬೇರೆ ಸಮಾಜಕ್ಕೆ ಕೊಟ್ಟಿದ್ದಾರೆ. ನನ್ನ ಬಳಿ ಮಾಹಿತಿ ಇದೆ. ಇವರು ಒಬ್ಬರೇ ಅಲ್ಲ ದಲಿತರು, ಹಿಂದುಳಿದವರನ್ನ ರಕ್ಷಣೆ ಮಾಡುವವರು. ಆ ಹೆಸರಿನಲ್ಲಿ ಏನೇನೋ ಅಕ್ರಮ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ನನ್ನ ಬಳಿ ಇದೆ. ಇವರು ಒಬ್ಬರೇ ಅಲ್ಲ ಅಹಿಂದ ಉಳಿಸುವವರು. ಅಹಿಂದ ಉಳಿಸಲು ಬಹಳ ಜನ ಕೆಲಸ ಮಾಡಿದ್ದಾರೆ. ಆದ್ರೆ ಇವರು ಮಾತ್ರ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೊರಟಿದ್ದಾರೆ. ಇವರ ನಿಜವಾದ ಬಣ್ಣ ಹೊರಬರಲಿದೆ ಎಂದು ಎಚ್ಚರಿಕೆ ನೀಡಿದರು.









