ರೋಗನಿರೋಧಕ ಶಕ್ತಿ ಹೆಚ್ಚಿಸುವ ಸತುಪೂರಕ ಆಹಾರಗಳು
ಪ್ರಸ್ತುತ ಪರಿಸ್ಥಿತಿಯಲ್ಲಿ ಆರೋಗ್ಯವಾಗಿರುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿಯು ಉತ್ತಮವಾಗಿರಬೇಕು. ಇದು ನಮ್ಮನ್ನು ರೋಗಗಳಿಂದ ರಕ್ಷಿಸಲು ಮತ್ತು ವೈರಸ್‌ಗಳೊಂದಿಗೆ ಹೋರಾಡಲು ನೆರವಾಗುತ್ತದೆ. ಆದ್ದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಬಹಳ ಮುಖ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸತುವು ಪ್ರಮುಖ ಪಾತ್ರ ವಹಿಸುತ್ತದೆ. ಶೀತಗಳನ್ನು ನಿವಾರಿಸಲು ಔಷಧಿಗಳಲ್ಲಿ ಸತುವನ್ನು ಬಳಸಲಾಗುತ್ತದೆ. ತಜ್ಞರ ಪ್ರಕಾರ, ಮಹಿಳೆಯರಿಗೆ ಒಂದು ದಿನಕ್ಕೆ 8 ಮಿಲಿಗ್ರಾಂ ಸತುವು ಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಮತ್ತು ಮಗುವಿಗೆ ಹಾಲುಣಿಸುವಾಗ ಮಹಿಳೆಯರಿಗೆ ಸತು ಅಗತ್ಯವು ಹೆಚ್ಚಿರುತ್ತದೆ. ಮತ್ತೊಂದೆಡೆ, ಪುರುಷರು ಆರೋಗ್ಯವಾಗಿರಲು ದಿನಕ್ಕೆ 11 ಮಿಲಿಗ್ರಾಂ ಸತುವು ಬೇಕಾಗುತ್ತದೆ.

ಮೊಸರು ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿದ್ದು ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಮೊಸರು ಸತುವಿನ ಅತ್ಯುತ್ತಮ ಮೂಲವಾಗಿದೆ.
ಗೋಡಂಬಿಯಲ್ಲಿ ಸತು, ತಾಮ್ರ, ವಿಟಮಿನ್ ಕೆ, ವಿಟಮಿನ್ ಎ ಮತ್ತು ಫೋಲೇಟ್ ತುಂಬಿರುತ್ತದೆ. ಈ ಬೀಜಗಳು ಮೊನೊ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದು ಹೃದಯದೊಳಗಿನ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವುಗಳನ್ನು ನಿಯಮಿತವಾಗಿ ತಿನ್ನುವುದರಿಂದ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಓಟ್ಸ್ ಜನರ ನೆಚ್ಚಿನ ಉಪಹಾರವಾಗಿದೆ. ಈ ಪೋಷಕಾಂಶ ಭರಿತ ಆಹಾರವು ಫೈಬರ್, ಬೀಟಾ-ಗ್ಲುಕನ್, ವಿಟಮಿನ್ ಬಿ 6 ಮತ್ತು ಫೋಲೇಟ್ಗಳಿಂದ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಓಟ್ಸ್‌ನಿಂದ ನೀವು ಸಾಕಷ್ಟು ಸತುವನ್ನು ಪಡೆಯುತ್ತೀರಿ. ಅರ್ಧ ಬೌಲ್ ಓಟ್ಸ್ 1.3 ಮಿಗ್ರಾಂ ಸತುವನ್ನು ಹೊಂದಿರುತ್ತದೆ.
ಬಿಳಿ ಬಣ್ಣದ ಕಡಲೆ ಸತುವಿನ ಉತ್ತಮ ಮೂಲವಾಗಿದೆ. ಇದರಲ್ಲಿ ಫೈಬರ್, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಪೋಷಕಾಂಶಗಳಿವೆ. ಸತು ಕೊರತೆಯನ್ನು ನೀಗಿಸಲು ಇದನ್ನು ಅಡುಗೆಯಲ್ಲಿ ಸೇರಿಸುವ ಮೂಲಕ ಸೇವಿಸಬಹುದು.
ಕಲ್ಲಂಗಡಿ ಬೀಜಗಳಲ್ಲಿ ಸತು, ಪೊಟ್ಯಾಸಿಯಮ್ ಮತ್ತು ತಾಮ್ರ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಬೀಜಗಳನ್ನು ಎಸೆಯುವ ಬದಲು, ಅವುಗಳನ್ನು ತೊಳೆದು ಒಣಗಿಸಿ ನಂತರ ಸೇವಿಸಿ.
ಕಡಲೆಕಾಯಿ ಅಗ್ಗದ ಮತ್ತು ಜನಪ್ರಿಯ ಆಹಾರವಾಗಿದೆ. ಸತುವು ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಸತುವಿನ ಕೊರತೆಯನ್ನು ನೀಗಿಸಲು ನೀವು ಕಡಲೆಕಾಯಿ ಎಣ್ಣೆಯನ್ನು ಕೂಡ ಬಳಸಬಹುದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ನಮ್ಮ ಆಹಾರದಲ್ಲಿರಬೇಕಾದ ಆಂಟಿ-ವೈರಲ್ ಆಹಾರಗಳು https://t.co/Mcc6m7ybXF
— Saaksha TV (@SaakshaTv) August 14, 2021
ಕೆಂಪು ತರಕಾರಿ ದೋಸೆ https://t.co/X7R9v2dRzg
— Saaksha TV (@SaakshaTv) August 14, 2021
ತಮಿಳುನಾಡು ಕೃಷಿ ಬಜೆಟ್ ನ ಮುಖ್ಯಾಂಶಗಳು – ದೇಶಕ್ಕೆ ಇದು ಮಾದರಿ ಬಜೆಟ್ ಆಗುತ್ತಾ?? https://t.co/XnbhtdkS0V
— Saaksha TV (@SaakshaTv) August 15, 2021
ಕನಿಷ್ಠ 210 ರೂ ಗಳ ಮಾಸಿಕ ಹೂಡಿಕೆಯ ಪಿಂಚಣಿ ಯೋಜನೆಯ ಪ್ರಯೋಜನಗಳು#Benefits #CentralGovernment #AtalPension https://t.co/cp3iRj8eBo
— Saaksha TV (@SaakshaTv) August 14, 2021
#Saakshatv #healthtip #Zinc








