“ನೀವು ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ, ನಾವು 11 ಜನ ತಿರುಗಿ ಬೀಳ್ತೀವಿ”
ಲಂಡನ್ : “ನೀವು ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ, ನಾವು 11 ಜನ ತಿರುಗಿ ಬೀಳ್ತೀವಿ” ಇದು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆದ್ದ ಬಳಿಕ ಕನ್ನಡಿಗ ಕೆ.ಎಲ್.ರಾಹುಲ್ ಹೇಳಿದ ಮಾತು.
ಕನ್ನಡಿಗನ ಈ ಮಾತು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಭಾರತೀಯರು ಸಾಕಷ್ಟು ಮಿಮ್ ಗಳ ಮೂಲಕ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚುತ್ತಿದ್ದಾರೆ.
ಅಂದಹಾಗೆ ಕೆ ಎಲ್ ನ ಈ ಹೇಳಿಕೆಗೆ ಕಾರಣವೂ ಇದೆ. ಈ ಪಂದ್ಯದಲ್ಲಿ ಮೈದಾನದ ಹೊರಗೆ ಆಂಗ್ಲ ಅಭಿಮಾನಿಗಳು ಮತ್ತು ಮೈದಾನದಲ್ಲಿ ಆಂಗ್ಲ ಕ್ರಿಕೆಟಿಗರು ಭಾರತೀಯರನ್ನು ಪದೇಪದೆ ಕೆಣಕುತ್ತಿದ್ದರು.
ಇದಕ್ಕೆ ಅಲ್ಲೆ ಡ್ರಾ ಅಲ್ಲೆ ಬಹುಮಾನದಂತೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡುತ್ತಿದ್ದರು.
ಇದಕ್ಕೆ ಪಂದ್ಯ ಗೆದ್ದ ನಂತರ ಉತ್ತರಿಸಿರುವ ಕನ್ನಡಿಗ ಕೆ ಎಲ್ ರಾಹುಲ್, ನಾವು ವಿಡಂಬನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ನಮ್ಮ ಒಬ್ಬ ಆಟಗಾರನನ್ನ ಕೆಣಕಿದರೆ, ನಮ್ಮ 11 ಮಂದಿ ಆಟಗಾರರು ತಿರುಗಿ ಬೀಳುತ್ತೇವೆ ಎಂದು ಎದುರಾಳಿಗೆ ಎಚ್ಚರಿಕೆ ಹೊರಡಿಸಿದ್ದಾರೆ.
ಕೆ ಎಲ್ ರಾಹುಲ್ ಅವರ ಈ ಹೇಳಿಕೆ ಸದ್ಯ ತಂಡದಲ್ಲಿರುವ ಯೂನಿಟಿಯನ್ನ ತೋರಿಸುತ್ತಿದೆ. ಹಾಗೆ ಟೀಂ ಇಂಡಿಯಾ ಆಟಗಾರರ ಖದರ್ ಗೆ ಸಾಕ್ಷಿಯಾಗಿದೆ.









