ಖ್ಯಾತ ವೈದ್ಯೆ, ಲೇಖಕಿ ಡಾ. ಎಚ್. ಗಿರಿಜಮ್ಮ ನಿಧನ
ದಾವಣಗೆರೆ : ಲೇಖಕಿ, ಖ್ಯಾತ ವೈದ್ಯೆ ಡಾ ಹೆಚ್ ಗಿರಿಜಮ್ಮ ಅವರು ವಿಧಿವಶರಾಗಿದ್ದಾರೆ. ದಾವಣಗೆರೆಯಲ್ಲಿ ಅವರು ಹೃದಯಾಘಾತದಿಂದ ಕೊನೆಯುಸೆರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಡಾ. ಎಚ್. ಗಿರಿಜಮ್ಮ ಅವರು ಹರಿಹರದಲ್ಲಿ ಹುಟ್ಟಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದರು. ಅವರ ತಾಯಿಯ ಆಸೆಯಂತೆ ಗಿರಿಜಮ್ಮ ಯಶಸ್ವಿ ವೈದ್ಯರಾದರು.
ಇದಲ್ಲದೆ ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದವರು ಗಿರಿಜಮ್ಮ, ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳನ್ನು ಬರೆದಿದ್ದಾರೆ.
ಅಧಾರ್ಂಗಿ, ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ಬರೆದಿದ್ದಾರೆ.









