ಕಾಂಟ್ರವರ್ಸಿ ಕ್ವೀನ್ ಕಂಗನಾ ಡೇಟಿಂಗ್ ಮಾಡ್ತಿರೋದು ಯಾರ ಜೊತೆ ಗೊತ್ತಾ..?
ಸುಖಾ ಸುಮ್ಮನೇ ತಮಗೆ ಸಂಬಂಧ ಇರದೇ ಇರೋ ವಿಚಾರಗಳ ಬಗ್ಗೆಯೂ ಮಾತನಾಡುತ್ತಾ ರಾಜಕಾರಣಿಗಳು , ಸೆಲೆಬ್ರಿಟಿಗಳು ಯಾರನ್ನೂ ಬಿಡದೇ ಇಲ್ಲರ ವಿರುದ್ಧ ಹರಿಹಾಯುತ್ತಾ ಮಿತ್ರರಿಗಿಂತ ಹೆಚ್ಚು ಶತ್ರುಗಳನ್ನೇ ಸಂಪಾದನೆ ಮಾಡಿರೋ ಬಾಲಿವುಡ್ ‘ಕ್ವೀನ್’ ಕಂಗನಾ ರಣಾವತ್ ಅವರಿಗೆ ಕೆಲ ಸ್ಟಾರ್ ಗಳ ಜೊತೆಗೆ ಅಫೇರ್ ಇದ್ದ ವದಂತಿಗಳು ಹೊಸದೇನಲ್ಲ..
ಹೃತಿಕ್ ಇರಬಹುದು, ಅಜಯ್ ದೇವಗನ್ ಇರಬಹುದು ಇನ್ನೂ ಕೆಲವರ ಜೊತೆಗೆ ಕಂಗನಾ ಡೇಟಿಂಗ್ ಮಾಡ್ತಿದ್ದರು ಎನ್ನುವ ವದಂತಿಗಳು ಸಾಕಷ್ಟು ಚಾಲ್ತಿಯಲ್ಲಿತ್ತು. ಆದ್ರೆ ಈಗ ಕಂಗನಾ ಸಿಂಗಲ್ ಅನ್ನೋದು ಎಲ್ರಿಗೂ ಗೊತ್ತಿದೆ.. ಆದ್ರೆ ಈ ನಡುವೆ ಕಂಗನಾ ಈಜಿಪ್ಟ್ ನಲ್ಲಿ ಇಮ್ರಾನ್ ಎಂಬಾತನ ಜೊತೆಗೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್ ಮಾಡ್ತಿದೆ..
ಹೀಗೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿರುವವರು ಮತ್ಯಾರೂ ಅಲ್ಲ ಈ ಹಿಂದೆ ಕಂಗಾನಾಗೆ ಈ ಜನ್ಮದಲ್ಲಿ ಮದುವೆಯಾಗಲ್ಲ ಎಂದು ಭವಿಷ್ಯ ನುಡಿದಿದ್ದ ವಿವಾದಾತ್ಮಕ ಯೂಟ್ಯೂಬರ್ ಕಮಲ್ ಆರ್ ಖಾನ್. ಹೌದು ಇದೇ ಕಮಲ್ ಅನೇಕ ಸ್ಟಾರ್ ಗಳ ಬಗ್ಗೆ ಈ ಹಿಂದೆ ಭವಿಷ್ಯ ನುಡಿದಿದ್ದಾರೆ.. ಸಲ್ಮಾನ್ ಕಾನ್ ಕೆರಿಯರ್ ನಾಶ ಮಾಡೋದಾಗಿ ಬಹಿರಂಗವಾಗಿಯೇ ತೊಡೆ ತಟ್ಟಿದ್ದು ಕೂಡ ಇವರೇ..
ಇದೀಗ ಕಂಗನಾ ಬಗ್ಗೆ ಹೀಗೊಂದು ಟ್ವೀಟ್ ಮಾಡಿ ಸೋಷಿಯಲ್ ಮೀಡಿಯದಲ್ಲಿ ಹಲ್ ಚಲ್ ಸೃಷ್ಟಿ ಮಾಡಿಬಿಟ್ಟಿದ್ದಾರೆ.. ಟ್ವೀಟ್ ನಲ್ಲಿ ಏನಿದೆ – ”ಬ್ರೇಕಿಂಗ್ ನ್ಯೂಸ್: ಈಜಿಪ್ಟ್ ಮೂಲದ ಇಮ್ರಾನ್ ಎಂಬ ವ್ಯಕ್ತಿಯೊಂದಿಗೆ ಕಂಗನಾ ರಣಾವತ್ ಡೇಟ್ ಮಾಡ್ತಿದ್ದಾರೆ. ಇದು ಲವ್ ಜಿಹಾದ್ ಇರಬಹುದಾ?” ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಕಂಗನಾ ಜೊತೆಗೆ ಯಾರೋ ಅಪರಿಚಿತ ವ್ಯಕ್ತಿಯಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ಇದು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಡಿಲೀಟ್ ಆಗಿದೆ. ಆದ್ರೂ ಸಹ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ.
ಆದ್ರೆ ಈ ಬಗ್ಗೆ ಕಂಗನಾ ಪರ ವಕೀಲರು ಸ್ಪಷ್ಟನೆ ಕೊಟ್ಟಿದ್ದು, ಕಂಗನಾ ಬಾಯ್ ಫ್ರೆಂಡ್ ಎಂದು ಫೋಟೋಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಕಂಗನಾ ಅವರ ಮ್ಯಾನೇಜರ್ ರಿಜ್ವಾನ್ ಸೈಯದ್. ಈ ಫೋಟೋ ಬಳಸಿ ಕಂಗನಾ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ . ಮುಂದುವರೆದ್ರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.








