ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಶಾಕಿಂಗ್ ಅಂಶ ಬಹಿರಂಗ ಪಡಿಸಿದ IMRC
ಕೊರೊನಾ 2ನೇ ಅಲೆ ತಗ್ಗಿತು ಅನ್ನೋ ಅಷ್ಟ್ರಲ್ಲಿ ಅದರದ್ದೇ ಹೊಸ ರೂಪಾಂತರಿ ಹೆಚ್ಚು ಹಾವಳಿ ಸೃಷ್ಟಿಮಾಡಿದ್ದು, ಡೆಲ್ಟಾ ಪ್ಲಸ್ ಹೆಚ್ಚು ಪರಿಣಾಮ ಬೀರಲಿದೆ ಅನ್ನೋ ಆತಂಕಕಾಂರಿ ಮಾಹಿತಿಯು ಹೊರಬಿದ್ದಿದೆ. ಹೌದು ದೇಶದಲ್ಲಿ ಕಾಡ್ತಿರುವ ಡೆಲ್ಟಾ ಪ್ಲಸ್ ವೈರಸ್ ತೀವ್ರ ಸ್ವರೂಪವಾಗಿದ್ದು, ಲಸಿಕೆ ಹಾಕಿಸಿಕೊಂಡವರು ಹಾಕಿಸಿಕೊಳ್ಳದವರನ್ನೂ ಸಹ ಅತೀವಾಗಿ ಕಾಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ IMRC ತಿಳಿಸಿದೆ.
ಒಂದೇ ಒಂದು ಸಮಾಧಾನಕರ ಸಂಗತಿಯೆಂದ್ರೆ ಡೆತ್ ರೇಟ್ ಕಡಿಮೆಯಿರಲಿದೆ ಎನ್ನಲಾಗಿದೆ. ಈ ಅಧ್ಯಯನವನ್ನು IMRC – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ , ಚೆನ್ನೈನ ಸಾಂಸ್ಥಿಕ ನೈತಿಕ ಸಮಿತಿಯು ಅಂಗೀಕರಿಸಿದೆ.. ಅಲ್ಲದೇ ಆಗಸ್ಟ್ 17 ರಂದು ಜರ್ನಲ್ ಆಫ್ ಇನ್ಫೆಕ್ಷನ್ ನಲ್ಲಿ ಇದನ್ನ ಪ್ರಕಟಿಸಲಾಗಿದೆ. ಚೆನ್ನೈನಲ್ಲಿ ನಡೆಸಿದ ಕೆಲ ಅಧ್ಯಯನಗಳಿಂದ ಡೆಲ್ಟಾ ಸೋಂಕು ತೀವ್ರವಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಡೆಲ್ಟಾ ರೂಪಾಂತರ (B.1.617.2 ) ಹರಡುವಿಕೆಯು ಲಸಿಕೆ ಹಾಕದ ಗುಂಪುಗಳ ನಡುವೆ ಭಿನ್ನವಾಗಿರುವುದಿಲ್ಲ ಎಂದು ಕೂಡ ಸಂಶೋಧನೆಯಿಂದ ತಿಳಿದುಬಂದಿದೆ.
ಪ್ಯಾರೇ ದೇಶವಾಸಿಯೋ ಗಮನಿಸಿ : ಮತ್ತೆ ಅಡುಗೆ ಸಿಲಿಂಡರ್ ದರ ಏರಿಕೆ..!