ವರಮಹಾಲಕ್ಷ್ಮಿ ವ್ರತಕ್ಕೆ ಭರ್ಜರಿ ಶಾಪಿಂಗ್ – ಹಬ್ಬದ ಸಂಭ್ರಮದಲ್ಲಿ ಕೊರೊನಾ ಮರೆತ ಜನ.. ಸಾಮಾಜಿಕ ಅಂತರ ಮಾಯ..!
ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೆ ಇಂದಿನಿಂದಲೇ ಜನರು ಭರ್ಜರಿ ಶಾಪಿಂಗ್ ಆರಂಭಿಸಿದ್ದಾರೆ.. ಲಕ್ಷ್ಮಿ ಕೂರಿಸುವುದಕ್ಕೆ ಸೀರಿ , ಹೂವು , ಹಣ್ಣು ಹಂಪಲು , ಸ್ವೀಟ್ಸ್ , ಇತರೇ ಹಬ್ಬದ ವಸ್ತುಗಳ ಖರೀದಾರಿ ಬ್ಯುಸಿಯಲ್ಲಿರುವ ಜನರು ಕೊರೊನಾ ಸೋಂಕನ್ನೇ ಮರೆತುಹೋಗಿರುವಂತೆ ಕಾಣ್ತಿದೆ.. ಬೆಂಗಳೂರಿನ ಎಲ್ಲಾ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದ್ರೂ ಜನರೇ ಜಜನರು ತುಂಬಿ ತುಳುಕುತ್ತಿದ್ದಾರೆ.. ಭರ್ಜರಿ ವ್ಯಾಪಾರ ಮಾಡ್ತಿದ್ದಾರೆ.. ಆದ್ರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಮಾಸ್ಕ್ ಧರಿಸದೇ ಕೊರೊನಾ ಲೆಕ್ಕಿಸದೇ ಶಾಪಿಂಗ್ ನಲ್ಲಿಯೇ ತಲ್ಲೀನರಾಗಿರೋದು ಗಲ್ಲಿ ಮಾರ್ಕೆಟ್ ಗಳಿಂದ ಹಿಡಿದು ರಾಜ್ಯಾದ್ಯಂತ ಪ್ರಮುಖ ಮಾರ್ಕೆಟ್ ಗಳಲ್ಲಿಯೂ ಇದು ಸರ್ವೇ ಸಾಮಾನ್ಯವಾಗಿದೆ.. ಪ್ರತಿ ಬಾರಿಯು ನಮ್ಮಲ್ಲಿ ಪ್ರತಿ ಹಬ್ಬಕ್ಕೂ ಜನರು ಹೀಗೆಯೇ ಮುಗಿ ಬಿದ್ದು ಶಾಪಿಂಗ್ ಮಾಡ್ತಾರೆ.. ಆದ್ರೆ ಕಳೆದ 2 ವರ್ಷಗಳಿಂದ ಸಮಯ ಬದಲಾಗಿದೆ.. ಕೊರೊನಾ ಟೈಮ್ ಅನ್ನೋದನ್ನ ಜನರು ಮರೆಯುತ್ತಿರೋದು ಮುಂದೆ ದೊಡ್ಡ ಗಂಡಾಂತರದ ೆಚ್ಚರಿಕೆಯ ಗಂಟೆಯಾಗಿದೆ.
ಮೂರನೇ ಅಲೆ ಬಗ್ಗೆ ತಜ್ಞರು ಒಂದೆಡೆ ಎಚ್ಚರಿಕೆ ನೀಡಿದ್ದಾರೆ.. ಮತ್ತೊಂದೆಡೆ ಸರ್ಕಾರ ಮಾರ್ಗಸೂಚಿಯನ್ನೇನೋ ಬಿಡುಗಡೆ ಮಾಡಿ ಸಾಮಾಜಿಕ ಅಂತರ ಮಾಸ್ಕ್ ಕಡ್ಡಾಯಗೊಳಿಸಿದೆ.. ಆದ್ರೆ ಜನರು ಇದಕ್ಕೇ ಕ್ಯಾರೇ ಅನ್ನದೇ ಶಾಪಿಂಗ್ ಮಾಡ್ತಾ ಇದ್ದಾರೆ.. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಭೀಕರವಾಗಿದ್ರೂ ಆಶ್ಚರ್ಯ ಪಡಬೇಕಾಗಿಲ್ಲ. ಅದ್ರಲ್ಲೂ ಸಿಲಿಕಾನ್ ಸಿಟಿಯಲ್ಲಂತೂ ಎಲ್ಲಿನೋಡಿದ್ರೂ ಮಾರುಕಟ್ಟೆಗಳಲ್ಲಿ ಗಿಜಿಗುಡುತ್ತಿರುವ ಜನರೇ ಜನರು. 6 ಫೀಟ್ ಅಂತರ ಕಾಯ್ದುಕೊಳ್ಳೋದಿರಲಿ.. 1 ಫೀಟ್ ಡಿಸ್ಟೆನ್ಸ್ ಕೂಡ ಇರುವುದು ಕಾಣಿಸುತ್ತಿಲ್ಲ.. ಹೀಗೆ ಸಾಪಿಂಗ್ ನಲ್ಲಿ ಜನರು ಬ್ಯುಸಿಯಿದ್ರೆ ವ್ಯಾಪಾರ ಮಾಡೋದ್ರಲ್ಲಿ ವ್ಯಾಪಾರಿಗಳು ಬ್ಯುಸಿಯಾಗಿದ್ದಾರೆ..
ಇನ್ನೂ ಕೊರೊನಾ ನಡುವೆಯೂ ಹಬ್ಬದ ಸಂಭ್ರಮದಲ್ಲಿ ಹೂವು ಕಾಯಿ , ಹಣ್ಣು ಹಂಪಲು , ಎಲೆ ಅಡಿಕೆ , ಸ್ವೀಟ್ಸ್ ಇಂದ ಹಿಡಿದು ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ.. ಆದ್ರೂ ಜನರು ಮುಗಿಬಿದ್ದು ಭರ್ಜರಿ ಶಾಪಿಂಗ್ ಮಾಡ್ತಾಯಿದ್ದಾರೆ.. ನಾಳೆ ಬಹುತೇಕ ಎಲ್ಲ ಮನೆಗಳಲ್ಲೂ ಲಕ್ಷ್ಮಿಯನ್ನೂ ಅದ್ಧೂರಿಯಾಗಿ ಅಲಂಕರಿಸಿ , ಪೂಜಿಸಿ ಆರಾಧನೆ ಮಾಡುತ್ತಾ ಮಹಿಳೆಯರು ಸಂಜೆ ಕಲರ್ ಫುಲ್ ಆಗಿ ಸೇರಿಯುಟ್ಟು ಎಡಿಯಾಗಿ ಮನೆಗೆ ಮನೆಗೆ ಹೋಗಿ ಅರಿಶಿಣ ಕುಂಕುಮ ತೆಗೆದುಕೊಂಡು ತಮ್ಮ ಮನೆಗೆ ಬರುವ ಮಹಿಳೆಯರಿಗೆ ಅರಿಶಿಣ ಕುಂಕುಮ ನೀಡಿ ಹಬ್ಬ ಮಾಡ್ತಾರೆ..