ಕಾಬೂಲ್ ವಿಮಾನ ನಿಲ್ದಾಣದಲ್ಲಿ 5 ಸಾವಿರ ಅಮೆರಿಕಾ ಸೈನಿಕರ ನಿಯೋಜನೆ
ಕಾಬೂಲ್ : ಸ್ಮಶಾಣದಂತಾಗಿರುವ ಅಫ್ಗಾನ್ ನಲ್ಲಿ ಜನರಿಗೆ ಅದ್ರಲ್ಲೂ ಮಹಿಳೆಯರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲೀಬಾನಿ ರಾಕ್ಷಸರಿಂದ ಪ್ರತಿ ಕ್ಷಣ , ಪ್ರತಿ ನಿಮಿಷ ಜನ ಭಯದಲ್ಲಿ ಬದುವಂತಹ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಕ್ಕೆ 5 ಸಾವಿರ ಅಮೆರಿಕಾ ಸೈನಿಕರನ್ನ ನಿಯೋಜನೆ ಮಾಡಲಾಗಿದೆ. ಇನ್ನೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಸುರಕ್ಷಿತವಾಗಿದೆ. ಎಂದಿನಂತೆ ವಿಮಾನ ಕಾರ್ಯಾಚರಣೆಗೆ ಮುಕ್ತವಾಗಿದೆ ಎಂದು ಅಮೆರಿಕಾ ಸೇನೆಯ ಮೇಜರ್ ಜನರಲ್ ವಿಲಿಯಂ ಹ್ಯಾಂಕ್ ಟೇರ್ ತಿಳಿಸಿದ್ದಾರೆ.
10 ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಅಪ್ರೆಂಟಿಸ್‌ಶಿಪ್ ಹುದ್ದೆಗಳು
ಸದ್ಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ 5,200ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದ್ದು, ವಿಮಾನ ನಿಲ್ದಾಣವು ಸುರಕ್ಷಿತವಾಗಿದೆ ಮತ್ತು ವಿಮಾನ ಕಾರ್ಯಾಚರಣೆ ಮುಕ್ತಗೊಳಿಸಲಾಗಿದೆ. ಆಗಸ್ಟ್ 14ರಿಂದ ಇಲ್ಲಿಯವರೆಗೂ ಸುಮಾರು 7 ಸಾವಿರ ಜನರನ್ನು ಸ್ಥಳಾಂತರಿಸಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ನಾವು ಅಮೆರಿಕನ್ನರನ್ನ ಸುರಕ್ಷಿತವಾಗಿ ರಕ್ಷಿಸಲು ನರಂತರವಾಗಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಎಷ್ಟು ಸಾಧ್ಯವಾಗುತ್ತೋ ಅಷ್ಟು ಬೇಗ ಜನರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತದೆ ಎಂದಿದ್ದಾರೆ.








