3 ಸಾವಿರ ಕೋಟಿ ವಂಚನೆ : ಆರೋಪಿಯ ಬಂಧನ
ಹೈದರಾಬಾದ್ : ಮೂರು ಸಾವಿರ ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಕಂಪನಿ ನಿರ್ದೇಶಕರನ್ನು ಇಡಿ ಬಂಧಿಸಿದೆ.
ಪೃಥ್ವಿ ಇನ್ಫರ್ಮೇಷನ್ ಸೊಲ್ಯೂಷನ್ಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಉಪಲಪತಿ ಸತೀಶ್ ಕುಮಾರ್ ಬಂಧಿತರಾಗಿದ್ದಾರೆ.
ಇವರು ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟದಲ್ಲಿ ರೂ 3,316 ಕೋಟಿ ವಂಚನೆ ಮಾಡಿದ್ದು, ಸದ್ಯ ಇಡಿ ವಶದಲ್ಲಿದ್ದಾರೆ.
ಆಗಸ್ಟ್ 12 ರಂದು ಉಪಲಪತಿ ಸತೀಶ್ ಕುಮಾರ್ ಅವರ ಬಂಧನವಾಗಿತ್ತು. ಈ ಸಂಬಂಧ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಪ್ರಕರಣ ದಾಖಲಾಗಿದ್ದು ಹಣ ವಂಚನೆಗೆ ಸಂಬಂಧಿಸಿ ವಿಶೇಷ ನ್ಯಾಯಾಲಯವು ಸತೀಶ್ ಕುಮಾರ್‍ರನ್ನು ಹತ್ತು ದಿನಗಳ ಕಸ್ಟಡಿಗೆ ನೀಡಿದೆ ಎಂದು ವರದಿ ಮಾಡಿದೆ.
ಅಂದಹಾಗೆ ಈ ಹಿಂದೆ ಪಿಐಎಸ್ ಎಲ್ ವ್ಯವಸ್ಥಾಪಕ ನಿರ್ದೇಶಕ ಉಪಲಪತಿ ಸತೀಶ್ ಕುಮಾರ್‍ರ ಸಹೋದರಿ ವಿ ಹಿಮಾ ಬಿಂಧು ಅವರನ್ನು ಬಂಧಿಸಲಾಗಿತ್ತು. ಅವರು ಕೂಡ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.