ಮೊಹರಂ ಆಚರಣೆ ವೇಳೆ ದುರಂತ : ಇಬ್ಬರು ಸಾವು
ರಾಯಚೂರು : ಮಸ್ಕಿ ತಾಲೂಕಿನ ಸಂತೆಕೆಲ್ಲೂರ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ದೇವರ ಪಂಜಾಗೆ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊರ್ವ ವ್ಯಕ್ತಿಯ ಸ್ಥಿತಿ ಸಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ದೇವರನ್ನು ಹಿಡಿದಿದ್ದಂತ ಹುಸೇನ್ ಸಾಬ್ ಮುಲ್ಲಾ (55 ) ಹಾಗೂ ದೇವರ ದರ್ಶನಕ್ಕೆ ಆಗಮಿಸಿದ್ದಂತ ಹುಲಿಗೆಮ್ಮ ( 25 ) ಮೃತರಾಗಿದ್ದಾರೆ.
ಸಂತೆಕೆಲ್ಲೂರ ಗ್ರಾಮದಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮವನ್ನು ಬ್ರೇಕ್ ಮಾಡಿ, ಮೋಹರಂ ಆಚರಣೆಯನ್ನು ಅದ್ದೂರಿಯಾಗಿ ನಡೆಸಲಾಗಿದೆ.
ಸಂತೆಕಲ್ಲೂರಿನಿಂದ ದಾನದೊಡ್ಡಿಗೆ ದೇವರುಗಳ ಕೊಂಡೊಯ್ಯವ ವೇಳೆ ದೇವರ ಪಂಜಾಗೆ ವಿದ್ಯುತ್ ತಂತಿ ತಾಕಿದೆ.
ಪರಿಣಾಮ ದೇವರನ್ನು ಹಿಡಿದಿದ್ದಂತ ಹುಸೇನ್ ಸಾಬ್ ಮುಲ್ಲಾ (55 ) ಹಾಗೂ ದೇವರ ದರ್ಶನಕ್ಕೆ ಆಗಮಿಸಿದ್ದಂತ ಹುಲಿಗೆಮ್ಮ ( 25 ) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.