ತಾಲಿಬಾನಿಗಳಿಗೂ ಬಿಜೆಪಿಗೂ ಬಹಳ ಸಾಮ್ಯತೆ ಇದೆ : ಕಾಂಗ್ರೆಸ್ taliban saaksha tv
ಬೆಂಗಳೂರು : ತಾಲಿಬಾನಿಗಳಿಗೂ ಆರ್ ಆರ್ ಎಸ್ & ಬಿಜೆಪಿಗೂ ಬಹಳ ಸಾಮ್ಯತೆ ಇದೆ ಎಂದು ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ.
ತಾಲಿಬಾನ್ ಶೈಲಿಯಲ್ಲಿ ಟಿಎಂಸಿ ನಾಯಕರ ಮೇಲೆ ದಾಳಿ ಮಾಡಿ ಎಂಬ ತ್ರಿಪುರ ಬಿಜೆಪಿ ನಾಯಕನ ಹೇಳಿಕೆ ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಟ್ವೀಟ್ ನಲ್ಲಿ..
ತಾಲಿಬಾನಿಗಳಿಗೂ ಆರ್ ಆರ್ ಎಸ್ & ಬಿಜೆಪಿಗೂ ಬಹಳ ಸಾಮ್ಯತೆ ಇದೆ. ಪ್ರಜಾಪ್ರಭುತ್ವ ಒಪ್ಪದ, ನೈತಿಕ ಪೊಲೀಸ್ಗಿರಿ ಪ್ರತಿಪಾದಿಸುವ ಮೂಲಭೂತವಾದಿ ಉಗ್ರ ಮನಸ್ಥಿತಿಯ ಆರ್ ಆರ್ ಎಸ್ & ಬಿಜೆಪಿಗೆ ತಾಲಿಬಾನಿಗಳೇ ಆದರ್ಶ!
ಮೊನ್ನೆ ರಾಜ್ಯದಲ್ಲಿ ಗುಂಡು ಹಾರಿಸಿ ನಿರೂಪಿಸಿದ್ದರು, ಈಗ ತ್ರಿಪುರದ ಬಿಜೆಪಿ ಶಾಸಕ ಬಿಜೆಪಿಯ ತಾಲಿಬಾನ್ ಅನುಕರಣೆಯನ್ನ ಬಾಯ್ಬಿಟ್ಟು ಹೇಳಿದ್ದಾರೆ ಎಂದು ಕುಟುಕಿದೆ.
ಇನ್ನು ಬಿಜೆಪಿಯ ಡಕೋಟಾ ಇಂಜಿನ್ ಸರ್ಕಾರ ಎಂದೂ ಟೇಕಾಫ್ ಆಗುವುದಿಲ್ಲ. ಕೆಲವರಿಗೆ ಇಷ್ಟವಿಲ್ಲದ ಖಾತೆ, ಇನ್ನು ಕೆಲವರಿಗೆ ಕಷ್ಟವಾಗುವ ಖಾತೆ!
ಸಚಿವರುಗಳಿಗೆ ತಮ್ಮ ಖಾತೆಗಳಲ್ಲಿ ಆಸಕ್ತಿ ತೋರುತ್ತಿಲ್ಲ, ಹೀಗಿರುವಾಗ ಅವರು ತಮ್ಮ ಖಾತೆಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವುದು ದೂರದ ಮಾತು. ಒಟ್ಟಿನಲ್ಲಿ ರಾಜ್ಯದ ಅಭಿವೃದ್ದಿ ಮರೀಚಿಕೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರಿದೆ.









