ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್ ತೆಂಡುಲ್ಕರ್ ವೀಕ್ ನೆಸ್ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್

admin by admin
August 21, 2021
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸಚಿನ್ ತೆಂಡುಲ್ಕರ್ ವೀಕ್ ನೆಸ್ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್

sachin tendulkar team india saakshatvಸಚಿನ್ ತೆಂಡುಲ್ಕರ್.. 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ಆಟಗಾರ. ಅನೇಕ ದಾಖಲೆಗಳ ಒಡೆಯ.. ಸಚಿನ್ ಅಂದ್ರೆ ಜೀನಿಯಸ್.. ಸಚಿನ್ ಅಂದ್ರೆ ಕ್ರಿಕೆಟ್ ಜಗತ್ತಿನ ಎವರ್ ಗ್ರೀನ್ ಆಟಗಾರ..
ಅಂದ ಹಾಗೇ, ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದರು. ಇನ್ನೊಂದೆಡೆ ಸಚಿನ್ ವಿಕೆಟ್ ಪಡೆಯಲು ಬೌಲರ್ ಗಳು ಶತಪ್ರಯತ್ನ ನಡೆಸುತ್ತಿದ್ದರು. ಆದ್ರೆ ಸಚಿನ್ ಕೆಲವೊಂದು ಸಲ ಸುನಾಮಿಯಂತೆ ಭೊರ್ಗರೆಯುವ ಆಟವನ್ನು ಆಡುತ್ತಿದ್ರೆ, ಮತ್ತೆ ಕೆಲವು ಬಾರಿ ತಂಗಾಳಿಯಂತೆ ರನ್ ಗಳಿಸುತ್ತಿದ್ದರು. ಇನ್ನು ಕೆಲವು ಬಾರಿ ಕ್ರಿಸ್ ಗೆ ವಿಸಿಟ್ ಕೊಟ್ಟು ಹೋಗುತ್ತಿದ್ದರು. ಅದೇನೇ ಇರಲಿ, 1989ರಿಂದ 2013ರವರೆಗೆ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಸಚಿನ್ ಅನ್ನೋ ಹೆಸರು ಮಂತ್ರಘೋಷದಂತೆ ಮೈದಾನದಲ್ಲಿ ಮೊಳಗುವಂತೆ ಮಾಡಿದ್ದರು.
ಇನ್ನು ಸಚಿನ್ ಆಟದಲ್ಲಿ ಪರಿಪೂರ್ಣ ಆಟಗಾರ. ಅವರ ಆಟದ ಶೈಲಿ, ತಾಂತ್ರಿಕತೆಯಲ್ಲಿ ಯಾವುದೇ ತಪ್ಪುಗಳನ್ನು ಹುಡುಕಲು ಸಾಧ್ಯವಿಲ್ಲ. ಅದು ವೇಗದ ಬೌಲಿಂಗ್ ಇರಲಿ, ರಿವರ್ಸ್ ಸ್ವಿಂಗ್, ಇನ್ ಸ್ವಿಂಗ್, ಆಫ್ ಸ್ಪಿನ್, ಲೆಗ್ ಸ್ಪಿನ್, ದೂಸ್ರಾ ಎಸೆತ, ಕೇರಂ ಎಸೆತ.. ಹೀಗೆ ಬೌಲರ್ ಗಳ ಬತ್ತಳಿಕೆಯ ಎಲ್ಲಾ ಆಸ್ತ್ರಗಳಿಗೂ ಸಚಿನ್ ದಿಟ್ಟ ಉತ್ತರ ನೀಡುತ್ತಿದ್ದರು. ಹೀಗಾಗಿ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜಗತ್ತಿನ ಮಾಸ್ಟರ್ ಬ್ಲ್ಯಾಸ್ಟರ್.
ಆದ್ರೆ ಸಚಿನ್ ಇಷ್ಟೆಲ್ಲಾ ರನ್ ಗಳಿಸಿದ್ರೂ, 24 ವರ್ಷ ಆಡಿದ್ರೂ, ಹಲವು ದಾಖಲೆಗಳನ್ನು ಬರೆದ್ರೂ ಅವರ ಬ್ಯಾಟಿಂಗ್ ನಲ್ಲಿ ಒಂದು ಲೋಪವಿತ್ತು. ಹೌದು, ಸಚಿನ್ ಅವರ ವಿಕ್ ನೆಸ್ ಯಾವುದು ಅನ್ನೋದನ್ನು ಮುತ್ತಯ್ಯ ಮುರಳೀಧರನ್ ಬಹಿರಂಗಪಡಿಸಿದ್ದಾರೆ.
ಅಷ್ಟಕ್ಕೂ ಸಚಿನ್ ತೆಂಢುಲ್ಕರ್ ಅವರಿಗೆ ಬೌಲಿಂಗ್ ಮಾಡಲು ಯಾವುದೇ ಹೆದರಿಕೆ ಇಲ್ಲ. ಯಾಕಂದ್ರೆ ಸಚಿನ್ ನೋಯಿಸುವುದಿಲ್ಲ. ಹಾಗಂತ ಸಚಿನ್ ಸೆಹ್ವಾಗ್ ರೀತಿ ನೋವು ನೀಡದೇ muralidharan srilanka saakshatvಇದ್ರೂ ಕೂಡ ಬೇರೆ ರೀತಿಯಲ್ಲಿ ಸತಾಯಿಸುತ್ತಾರೆ. ಸಚಿನ್ ತನ್ನ ವಿಕೆಟ್ ಉಳಿಸಿಕೊಳ್ಳುತ್ತಿದ್ದರು. ತಾಂತ್ರಿಕತೆಯಲ್ಲಿ ಪರಿಪಕ್ವ ಗೊಂಡಿರುವ ಸಚಿನ್ ತೆಂಡುಲ್ಕರ್ ಪ್ರತಿ ಎಸೆತಗಳನ್ನು ಬಲು ಬೇಗನೇ ಅಥೈಸಿಕೊಳ್ಳುತ್ತಿದ್ದರು ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.
ಆದ್ರೆ ಸಚಿನ್ ತೆಂಡುಲ್ಕರ್ ಆಫ್ ಸ್ಪಿನ್ನರ್ ಗಳಿಗೆ ಸ್ವಲ್ಪ ಎಡವುತ್ತಿದ್ದರು. ಲೆಗ್ ಸ್ಪಿನ್ ಎಸೆತಗಳಿಗೆ ಸುಲಭವಾಗಿ ಹೊಡೆಯುತ್ತಿದ್ದರು. ಆದ್ರೆ ಆಫ್ ಸ್ಪಿನ್ ಎಸೆತಗಳಿಗೆ ತುಸು ಕಷ್ಟಪಡುತ್ತಿದ್ದರು. ಯಾಕಂದ್ರೆ ಸಚಿನ್ ವಿಕೆಟ್ ಅನ್ನು ನಾನೇ ಸಾಕಷ್ಟು ಬಾರಿ ಪಡೆದಿದ್ದೇನೆ. ಹಾಗೇ ಸಾಕಷ್ಟು ಆಫ್ ಸ್ಪಿನ್ ಬೌಲರ್ ಗಳು ವಿಕೆಟ್ ಉರುಳಿಸಿದ್ದಾರೆ ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.
ಮುತ್ತಯ್ಯ ಮುರಳೀಧರನ್ ಅವರು ಸಚಿನ್ ಅವರನ್ನು 13 ಬಾರಿ ಔಟ್ ಮಾಡಿದ್ದಾರೆ. ಆದ್ರೆ ಅತೀ ಹೆಚ್ಚು ಬಾರಿ ಸಚಿನ್ ವಿಕೆಟ್ ಒಪ್ಪಿಸಿದ್ದು ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಅವರಿಗೆ. ಬ್ರೆಟ್ ಲೀ 14 ಬಾರಿ ಸಚಿನ್ ಅವರನ್ನು ಔಟ್ ಮಾಡಿದ್ದಾರೆ.
ಅದ್ಯಾಕೋ ಗೊತ್ತಿಲ್ಲ. ಸಚಿನ್ ಜೊತೆ ನಾನು ಇದರ ಬಗ್ಗೆ ಮಾತನಾಡಿಲ್ಲ. ಆದ್ರೆ ಸಚಿನ್ ಅವರ ಈ ವೀಕ್‍ನೆಸ್ ನಿಂದ ನನಗೆ ಲಾಭವಾಗಿದೆ. ಆದ್ರೂ ಸಚಿನ್ ವಿಕೆಟ್ ಪಡೆಯುವುದು ತುಂಬಾ ಕಷ್ಟ ಎಂದು ಮುರಳೀಧರನ್ ಹೇಳಿದ್ದಾರೆ.
ಶ್ರೀಲಂಕಾದ ಸ್ಮೈಲಿಂಗ್ ಕಿಲ್ಲರ್ ಖ್ಯಾತಿಯ ಮುತ್ತಯ್ಯ ಮುರಳೀಧರನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಹಾಗೇ ಏಕದಿನ ಕ್ರಿಕೆಟ್ ನಲ್ಲಿ 534 ಹಾಗೂ ಟಿ-ಟ್ವೆಂಟಿಯಲ್ಲಿ 13 ವಿಕೆಟ್ ಗಳನ್ನು ಕಬಳಿಸಿದ್ದಾರೆ.

Related posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026
ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

March 4, 2026
Tags: #saakshatvCricketindiaMuttiah MuralitharanSachin TendulkarSportssrilankateam india
ShareTweetSendShare
Join us on:

Related Posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

by Shwetha
March 4, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಭಾರತವು ಈ ವಿಚಾರದಲ್ಲಿ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು ಎಂದು ಹೇಳಿದ್ದಾರೆ. ಇರಾನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram