ಅಧಿಕಾರ ಕೊಟ್ಟರೇ ದೇಶವೇ ರಾಜ್ಯದತ್ತ ತಿರುಗಿ ನೋಡುವಂತೆ ಮಾಡ್ತೀನಿ
ದಾಬಸ್ ಪೇಟೆ : ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಟ್ಟಿದ್ದೇಯಾದಲ್ಲಿ ರಾಜ್ಯದಲ್ಲಿ ಕಾಂತ್ರಿಕಾರಿ ಬೆಳವಣಿಗೆ ತಂದು ದೇಶದಲ್ಲೇ ಅಭಿವೃದ್ದಿ ಪರ ರಾಜ್ಯ ಮಾಡುತ್ತೇನೆ. ಇದಕ್ಕಾಗಿ ಜನರು ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿಕೊಂಡದ್ದಾರೆ.
ದಾಬಸ್ ಪೇಟೆಯ ಕೆಂಗಲ್ ಗ್ರಾದದಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದು, ಅಧಿಕಾರದಲ್ಲಿದ್ದಾಗ ಜನತೆಗೆ ಮೋಸ ಮಾಡಿಲ್ಲ. ನಾನು ಮೊದಲ ಬಾರಿ ಸಿಎಂ ಆಗಿದ್ದಾಗ ಮೈತ್ರಿ ಸರ್ಕಾರ ಸಹಕಾರ ನೀಡಿತ್ತು. ಆದ್ರೆ ಎರಡನೇ ಬಾರಿ ಸಿಎಂ ಆದಾಗ ಮೈತ್ರಿ ಸರ್ಕಾರದವರು ಇಲ್ಲಸಲ್ಲದ ಕಷ್ಟ ನೀಡಿದರು. ಆದ್ರೂ ನಾನು ಜನರಿಗೆ ಉತ್ತಮವಾದ ಆಡಳಿತ ನೀಡಿದ್ದೆನೆ. ರೈತ ಸಾಲಮನ್ನಾ ಮಾಡಿದ್ದೇನೆ. ಆದ್ರೆ ರೈತರ ಕಷ್ಟಗಳಿಗೆ ಶಾಶ್ವತ ಪರಿಹಾರವಾಗುವುದಿಲ್ಲ. ರೈತರು ಸಾಲಗಾರನಾಗದೆ ಇರುವ ಹಾಗೆ ಸರ್ಕಾರ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಇನ್ನೂ ರೈತರ ಸಮಸ್ಯೆಗಳು ಬಗೆಹರಿದಿಲ್ಲ ಎಂದರು.
ಇದೇ ವೇಳೆ ಸದ್ಯದ ಬಿಜೆಪಿ ಸರ್ಕಾರದ ವಿರುದ್ಧ ಗರಂ ಆದ ಕುಮಾರಸ್ವಾಮಿ, ನಾನು ಜಾರಿಗೆ ತಂದಿದ್ದ ಹಲವಾರು ಯೋಜನೆಗಳನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಇದರಿಂದ ಜನರು ಮತ್ತೆ ಸಂಕಷ್ಟ ಅನುಭವಿಸುವಂತೆ ಮಾಡಿದೆ. ಸರ್ಕಾರ ಈ ಹಿಂದೆ ಅತಿವೃಷ್ಟಿಯಾಗಿದ್ದ ಮನೆಗಳಿಗೂ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.









