ಅಫ್ಗಾನ್ ನಾಗರಿಕರ ಸ್ಥಳಾಂತರ ಕಠಿಣ , ವಿಶ್ವದಲ್ಲೇ ಈ ಮಟ್ಟದ ಶಕ್ತಿ ಪ್ರದರ್ಶಿಸುವ ಸಾಮರ್ಥ್ಯವಿರುವ ಏಕೈಕ ದೇಶ ಅಮೆರಿಕ – ಜೋ ಬೈಡೆನ್
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಅಫ್ಗಾನ್ ನಿಂದ ಅಮೆರಿಕಾ ತನ್ನ ನಾಗರಿಕರ ಸ್ಥಳಾಂತರಕ್ಕೆ ಹರಸಾಹಸ ಪಡುತ್ತಿದೆ.. ಇದೀಗ ಅಫ್ಗಾನ್ ನಾಗರಿಕರ ಸ್ಥಳಾಂ
ತರ ಅತ್ಯಂತ ಕಠಿಣ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕದ ನಾಗರಿಕರು ಮತ್ತು ಅವರಿಗೆ ಬೆಂಬಲ ನೀಡಿದ ಅಫ್ಗನ್ನರನ್ನು ಸ್ಥಳಾಂತರಿಸಲಾಗುತ್ತಿದ್ದು, ಇದು ಇತಿಹಾಸದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಕಠಿಣ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯ ಪಟ್ಟಿದ್ದಾರೆ. ಜುಲೈನಿಂದ ಇಲ್ಲಿಯವರೆಗೂ 18 ಸಾವಿರ ಮಂದಿಯನ್ನು ಅಮೆರಿಕ ಈಗಾಗಲೇ ಸ್ಥಳಾಂತರಿಸಿದೆ.
ಆಗಸ್ಟ್ 14ರಿಂದ ಇದುವರೆಗೆ ಮಿಲಿಟರಿ ವಿಮಾನದ ಮೂಲಕ ಸುಮಾರು 13ಸಾವಿರ ಜನರನ್ನು ಅಫ್ಗಾನಿಸ್ತಾನದಿಂದ ಕರೆದೊಯ್ಯಲಾಗಿದೆ ಎಂದು ತಿಳಿಸಿರುವ ಬೈಡೆನ್ ಇದು ಇತಿಹಾಸದಲ್ಲಿ ಅತಿ ಕಠಿಣ ಏರ್ ಲಿಫ್ಟ್ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಇಡಿ ವಿಶ್ವದಲ್ಲೇ ಈ ಮಟ್ಟದ ಶಕ್ತಿ ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುವ ಏಕೈಕ ದೇಶ ಅಮೆರಿಕ ಎಂದು ಅಭಿಪ್ರಾಯಪಟ್ಟಿದ್ದಾರೆ.








