ಅಧಿವೇಶನದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹೋರಾಟ : ಸಾ.ರಾ.ಮಹೇಶ್ Sa Ra Mahesh saaksha tv
ಮೈಸೂರು : ಮುಂಬರುವ ಅಧಿವೇಶನದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹೋರಾಟ ಮಾಡುವುದಾಗಿ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, ರೋಹಿಣಿ ಸಿಂಧೂರಿ ಅವರನ್ನು ಅಮಾನತು ಮಾಡುವ ಆಗ್ರಹ ನನ್ನದಾಗಿತ್ತು. ಸರ್ಕಾರ ಕೇವಲ ವರ್ಗಾವಣೆ ಮಾತ್ರ ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಇನ್ನು ಇಂತಹ ಅಧಿಕಾರಿ ಮೈಸೂರಿಗೆ ಬೇಡ ಅಂತಾ ಆರಂಭದಲ್ಲೇ ಹೇಳಿದ್ದೆ ಎಂದ ಮಹೇಶ್, ಆಗ ಸಚಿವರು, ಸಂಸದ ಹಾಗೂ ಶಾಸಕರು ಅವರ ಪರ ನಿಂತಿದ್ದರು. ಜಿಲ್ಲಾಡಳಿತಕ್ಕೆ ಅವರಿಂದ ಕೆಟ್ಟ ಹೆಸರು ಬರುತ್ತಿದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಂಡರು ಎಂದು ಸಾ ರಾ ಮಹೇಶ್ ತಿಳಿಸಿದರು.