ಪ್ರೇಯಸಿ ಮೇಲೆ ಅನುಮಾನ ಬಂದು ಆಕೆಗೆ ಬೆಂಕಿಯಿಟ್ಟ ಕಿಡಿಗೇಡಿ
ಆಂಧ್ರಪ್ರದೇಶ : 24 ವರ್ಷದ ಯುವಕನೋರ್ವ ತನ್ನ ಪ್ರೇಯಸಿ (21) ( ಮದುವೆ ನಿಶ್ಚಯವಾಗಿದ್ದ ಯುವತಿ) ಮೇಲೆ ಅನುಮಾನ ಪಟ್ಟು ಆಕೆಗೆ ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶದ ವಿಜಯನರಂನ ಪುಸಪತಿರೆಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.. ಚೌಡವಾಡಾದ ನಿವಾಸಿ 21 ವರ್ಷದ ರಾಮುಲಮ್ಮ ಎಂಬಾಕೆಯನ್ನ ಕಾರ್ ಚಾಲಕ ರಾಂಬಾಬು ಎಂಬಾತ ಪ್ರೀತಿಸುವ ಭರವಸೆ ನೀಡಿದ್ದ. ಈ ವಿಚಾರ ತಿಳಿದು ಇಬ್ಬರ ಮನೆಯವರೂ ಕೂಡ ಮದುವೆ ನಿಶ್ಚಯ ಮಾಡಿದ್ದರು..
ನಿಶ್ಚಿತಾರ್ಥವೂ ಕೂಡ ನೆರವೇರಿತ್ತು ಎನ್ನಲಾಗಿದೆ.. ಆದ್ರೆ ಇದಾದ ನಂತರ ರಾಮಬಾಬುಗೆ ರಾಮುಲಮ್ಮ ಬೇರೆಯವರ ಜೊತೆಗೆ ಸಂಬಂಧ ಹೊಂದಿದ್ದ ಬಗ್ಗೆ ಅನುಮಾನ ಬಂದಿದೆ.. ಇದೇ ವಿಚಾರವಾಗಿ ಆತ ಆಕೆಯೊಂದಿಗೆ ಜಗಳವಾಡಿಕೊಂಡಿದ್ದಾನೆ. ಬಳಿಕ ಮದುವೆ ಮುರಿಯುವ ಬಗ್ಗೆಯೂ ಮಾತನಾಡಿದ್ದಾನೆ.. ಆದ್ರೆ ರಾಮುಲಮ್ಮ ಮನೆಯವರು ಆತನ ಮೇಲೆ ಮದುವೆಗೆ ಒತ್ತಡ ಹೇರಿದ್ದಕ್ಕೆ ಸಿಟ್ಟಾಗಿದ್ದ ರಾಮಬಾಬು ಆಕೆಯ ಮನೆಗೆ ನುಗ್ಗಿ ರಾಮುಲಮ್ಮಗೆ ಪೆಟ್ರೋಲ್ ಬೆಂಕಿ ಹಚ್ಚಿದ್ದಾನೆ..
ಅದೇ ಸಮಯಕ್ಕೆ ಅಲ್ಲಿಗೆ ಬಂದಿರುವ ರಾಮುಲಮ್ಮ ಅಕ್ಕ ಸಂತೋಶಿ ಹಾಗೂ ಆಕೆಯ 8 ವರ್ಷದ ಮಗ ಅರವಿಂದ್ ಬೆಂಕಿ ನಿಂದಿಸಲು ಪ್ರಯತ್ನ ಪಟ್ಟಿದ್ದಾರೆ.. ಈ ವೇಳೆ ಅವರೂ ಕೂಡ ಬೆಂಕಿ ತಗುಲಿ ಗಾಯಗೊಂಡಿದ್ದಾರೆ.. ಶೇ 15- 20 ದೇಹದ ಭಾಗ ಸುಟ್ಟುಹೋಗಿದೆ ಎನ್ನಲಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಆರೋಪಿ ರಾಮಬಾಬುನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ತಲೆಸುತ್ತಿ ರೈಲ್ವೇ ಹಳಿ ಮೇಲೆ ಬಿದ್ದ ವೃದ್ಧ – ಪ್ರಾಣದ ಹಂಗು ತೊರೆದು ಕಾಪಾಡಿದ ಅಧಿಕಾರಿಗಳು – ವಿಡಿಯೋ ಫುಲ್ ವೈರಲ್








