ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ 13ರ ಬಾಲಕಿ
ಬೆಂಗಳೂರು : ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅಮನಾ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ಅವಾರ್ಡ್ಸ್ ನಲ್ಲಿ ಕಿರಿಯ ಕವಯತ್ರಿ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿ ದಾಖಲೆ ಬರೆಯುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾಳೆ.
13 ವರ್ಷದ ಅಮನಾ 61 ಕವನಗಳನ್ನ ಬರೆದಿದ್ದು, ಎಕೋಸ್ ಆಫ್ ಸೋಲ್ ಫುಲ್ ಪೊಯೋಮ್ಸ್ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಇದನ್ನ ಸಪ್ನಾ ಬುಕ್ ಹೌಸ್ ಕಳೆದ ಜುಲೈ 26 ಎಂದು ಪ್ರಕಟಿಸಿತ್ತು. ಆಗ ಕವಯತ್ರಿ ಅಮನಾ ವಯಸ್ಸು 12 ವರ್ಷ 5 ತಿಂಗಳು ಹಾಗು 10ದಿನಗಳಾಗಿತ್ತು. ಇದನ್ನ ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಕಿರಿಯ ಕವಯತ್ರಿ ಎಂದು ಧೃಡಪಡಿಸಲಾಗಿದೆ. ಇನ್ನು ಇದೇ ಪುಸ್ತಕಕ್ಕೆ 2020 ರಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಕಿರಿಯ ಕವಯತ್ರಿ ಎಂದು ದೃಢಪಡಿಸಲಾಗಿದೆ. ಅಮನಾ ಇದುವರೆಗೂ 275ಕ್ಕೂ ಹೆಚ್ಚು ಕವನಗಳನ್ನ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದಿದ್ದಾಳೆ.









