ಬಂಧನದ ಬೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ನಟಿ……
ಮಹಾರಾಷ್ಟ್ರದ ಮುಂಬೈನಲ್ಲಿ 28 ವರ್ಷದ ನಟಿಯೊಬ್ಬರು ಬಂಧನದ ಬೀತಿಯಿಂದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ವ್ಯಕ್ತಿಗಳು — ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಅಧಿಕಾರಿಗಳ ಸೋಗಿನಲ್ಲಿ ನಟಿಸಿ – ಮಾದಕವಸ್ತು ಸೇವನೆಯ ಆರೋಪದ ಮೇಲೆ ನಟಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಲಕ್ಷಾಂತರ ರುಪಾಯಿ ವಸೂಲಿ ಮಾಡಲು ಯತ್ನಿಸಿದ್ದಾರೆ ಇದರಿಂದ ಖಿನ್ನತೆಗೆ ಜಾರಿ ನಟಿ ಆತ್ಮ ಹತ್ಯೆಗೆ ಯತ್ನಿಸಿದ್ದಾಳೆ.
ಮೃತ ನಟಿ ಭೋಜ್ಪುರಿ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಡಿಸೆಂಬರ್ 23 ರಂದು ತನ್ನ ನಿವಾಸದಲ್ಲಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿನ ನಂತರ, ಆಕೆಯ ಸ್ನೇಹಿತರೊಬ್ಬರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ, ನಂತರ ಪ್ರಕರಣವನ್ನು ದಾಖಲಿಸಲಾಗಿದೆ
ಮೃತ ಭೋಜ್ಪುರಿ ನಟಿ ಮತ್ತು ಆಕೆಯ ಮೂವರು ಸ್ನೇಹಿತರು ಸಾಂತಾಕ್ರೂಜ್ (ಪಶ್ಚಿಮ) ಪ್ರದೇಶದ ಹೋಟೆಲ್ಗೆ ಪಾರ್ಟಿಗೆ ಹೋಗಿದ್ದರು ಎಂದು ಅಂಬೋಲಿ ಪೊಲೀಸರಿಗೆ ತಿಳಿದು ಬಂದಿದೆ. ಇಬ್ಬರು ವ್ಯಕ್ತಿಗಳು — ಎನ್ಸಿಬಿ ಅಧಿಕಾರಿಗಳಂತೆ ನಟಿಸಿ ಪಾರ್ಟಿ ಮೇಲೆ “ದಾಳಿ” ನಡೆಸಿದ್ದಾರೆ.
ಡ್ರಗ್ಸ್ ಸೇವನೆ ಆರೋಪದ ಮೇಲೆ ಬಂಧಿಸುವುದಾಗಿ ಹೆದರಿಸಿದ್ದಾರೆ. ನಟಿ ಮತ್ತು ಆಕೆಯ ಸ್ನೇಹಿತರು ಭಯಭೀತರಾದರು ಮತ್ತು ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ವಿನಂತಿಸಿದ್ದಾರೆ. ಆರೋಪಿಗಳು 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.
ಲಕ್ಷಗಟ್ಟಲೆ ಹಣದ ವ್ಯವಸ್ಥೆ ಮಾಡುವ ಬಗ್ಗೆ ಆತಂಕಗೊಂಡ ನಟಿ ಖಿನ್ನತೆಗೆ ನಟಿ ಆತ್ಮ ಹತ್ಯೆಗೆ ಮುಂದಾಗಿದ್ದಾಳೆ..








