ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ಗಾಳಿ ಸಹಿತ ಮಳೆರಾಯ ಅಬ್ಬರಿಸಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಭಾರಿ ವರ್ಷಧಾರೆಯಿಂದ ಮದ್ದೂರಿನ ಕೂಳಗೆರೆ ಧಾಖಲೆ ಅರೆತಿಪ್ಪುರು ಗ್ರಾಮದ ಪುಟ್ಟಸ್ವಾಮಿ ಎಂಬುವರು 5 ಎಕರೆಯಲ್ಲಿ ಬೆಳೆದಿದ್ದ ಬಾಳೆ ನೆಲಕಚ್ಚಿದೆ. ಪರಿಣಾಮ ರೈತ ಪುಟ್ಟಸ್ವಾಮಿ ಅವರಿಗೆ 12 ರಿಂದ 15 ಲಕ್ಷ ನಷ್ಟ ಉಂಟಾಗಿದ್ದು, ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಇನ್ನು ರೈತ ಪುಟ್ಟಸ್ವಾಮಿ ಅವರು ಸಾಲ ಮಾಡಿ ತಮ್ಮ 5 ಎಕರೆ ಜಮೀನಲ್ಲಿ ಬಾಳೆ ಬೆಳೆದಿದ್ದರು. ಸದ್ಯ ಬಾಳೆ ಕಟಾವಿನ ಹಂತಕ್ಕೆ ಬಂದಿತ್ತು. ಆದ್ರೆ ನಿನ್ನೆ ವರುಣ ಹೊಡೆತಕ್ಕೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ಸಾಲಸೂಲ ಮಾಡಿ ಬೆಳೆ ಬೆಳೆದಿದ್ದ ಪುಟ್ಟಸ್ವಾಮಿ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.








