ADVERTISEMENT
Sunday, February 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ತನ್ನ ಕಟ್ಟ ಕಡೆಯ ದಿನದವರೆಗೂ ಪ್ರಪಂಚದ ಗಮನ ಸೆಳೆದಿದ್ದ ಅಗ್ನಿದಿವ್ಯ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನೆನಪಿಸಿಕೊಳ್ಳುತ್ತಾ:

admin by admin
January 9, 2021
in Marjala Manthana, Newsbeat, ಮಾರ್ಜಲ ಮಂಥನ
Stephen William Hawking saakshatv
Share on FacebookShare on TwitterShare on WhatsappShare on Telegram

ತನ್ನ ಕಟ್ಟ ಕಡೆಯ ದಿನದವರೆಗೂ ಪ್ರಪಂಚದ ಗಮನ ಸೆಳೆದಿದ್ದ ಅಗ್ನಿದಿವ್ಯ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನೆನಪಿಸಿಕೊಳ್ಳುತ್ತಾ:

Stephen William Hawking saakshatvವಿಶ್ವ ವಿಜ್ಞಾನ ಕ್ಷೇತ್ರದಲ್ಲಿ ಅಚ್ಚರಿಯೆಂಬಂತೆ ಬದುಕಿದ ಅವಧೂತ. ವಿಕಿರಣ, ಕ್ವಾಂಟಂ ವಿಜ್ಞಾನ, ಕಾಲ, ಕೃಷ್ಣ ಕಾಯಗಳ ಕುರಿತು ಆಳವಾಗಿ ಅಧ್ಯಯನ ಮಾಡಿದ್ದ ವೈಜ್ಞಾನಿಕ ಸಂತ. ಅಭಿನವ ಐನ್​ಸ್ಟೀನ್ ಅಂತ ಕರೆಸಿಕೊಂಡರೂ ನೋಬೆಲ್​ ವಂಚಿತ. ವೈದ್ಯಲೋಕಕ್ಕೆ ಸವಾಲೆಸೆದು ಮನೋಬಲದಲ್ಲಿ ಬದುಕಿ ಸಾಧಿಸಿದ ಸರ್ವಶ್ರೇಷ್ಟ ಪಂಡಿತ. ಜಗತ್ತು ಮರೆಯದ ಮಹಾ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಯಾಕೋ ನೆನಪಾದರು. ನಿನ್ನೆ (ಜನವರಿ 8) ಅವರ ಜನ್ಮದಿನ.

Related posts

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

February 15, 2026
ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

February 15, 2026

ಇಡೀ ಜಗತ್ತೇ ಆ ಮಹಾನ್ ವ್ಯಕ್ತಿಯ ಬದುಕನ್ನು ಬೆರಗುಗಣ್ಣಿಂದ ನೋಡಿದೆ. ಆ ವ್ಯಕ್ತಿ ವಿಜ್ಞಾನ ಹಾಗೂ ವೈದ್ಯಕೀಯ ಎರಡೂ ಕ್ಷೇತ್ರಗಳಿಗೂ ಅಚ್ಚರಿ ಹುಟ್ಟಿಸುವಂತೆ ಬದುಕಿದ್ದರು.. ಅವರು ಆಲ್ಬರ್ಟ್​ ಐನ್​ಸ್ಟೀನ್​ನಷ್ಟು ಬುದ್ದಿ ಮತ್ತೆ ಹೊಂದಿದ್ದರು. ಸರ್ ಐಸಾಕ್ ನ್ಯೂಟನ್​​ಗೆ ಸಮಾನರಾಗಿ ಭೌತಕ್ಷೇತ್ರದ ಸಿದ್ಧಾಂತಗಳನ್ನು ಮಂಡಿಸಿದ್ದರು. ಆದ್ರೆ ಅವರಿಗೆ ಬಂದಿದ್ದು ಕೋಟಿಗೆ ಒಬ್ಬರಿಗೆ ಬರುವ ಅಪರೂಪದ ವ್ಯಾಧಿ. ಆದ್ರೆ ಅವರ ಬದುಕಿನ ಕಟ್ಟ ಕಡೆಯ ದಿನದವರೆಗೂ ಪ್ರಪಂಚದ ಗಮನವನ್ನು ತಮ್ಮತ್ತ ಸೆಳೆದಿಟ್ಟುಕೊಂಡಿದ್ದರು. ಆ ಮಹಾನ್ ಖಭೌತ ವಿಜ್ಞಾನಿಯೇ ಸ್ಟೀಫನ್ ಹಾಕಿಂಗ್.

ವಿಶ್ವವೇ ಕೊಂಡಾಡುತ್ತಿದ್ದ ವಿಖ್ಯಾತ ಭೌತಶಾಸ್ತ್ರ ವಿಜ್ಞಾನಿ 76 ವರ್ಷದ ಸ್ಟೀಫನ್ ವಿಲಿಯಂ ಹಾಕಿಂಗ್, ಎರಡು ವರ್ಷಗಳ ಹಿಂದೆ ಕೇಂಬ್ರಿಡ್ಜ್​ನ ತಮ್ಮ ನಿವಾಸದಲ್ಲಿ ಇಹಲೋಕದ ವ್ಯವಹಾರ ಮುಗಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಜಗತ್ತು ಒಬ್ಬ ಅದ್ವಿತೀಯ ಸಾಧಕ ದೂರದೃಷ್ಟಿಯ ಚಿಂತಕ ಅಪಾರ ಬುದ್ದಿಮತ್ತೆಯ ಖಭೌತ ಸಂಶೋಧಕನನ್ನು ಕಳೆದುಕೊಂಡು ಬಡವಾಯ್ತು.

ಅನಂತ ವಿಶ್ವ ಹಾಗೂ ಖಗೋಳ ಶಾಸ್ತ್ರ ಸೇರಿದಂತೆ ಖಭೌತಶಾಸ್ತ್ರದಲ್ಲಿ ಆಳವಾದ ಸಂಶೋಧನೆ ನಡೆಸಿದ್ದ ಹಾಕಿಂಗ್, ವಿಶ್ವವಿಜ್ಞಾನ, ಕ್ವಾಂಟಮ್ ಗುರುತ್ವಾಕರ್ಷಣೆ, ಕಪ್ಪು ರಂಧ್ರದ ವಿವರಗಳನ್ನು ಅತ್ಯಂತ ಸಮರ್ಥವಾಗಿ ವ್ಯಾಖ್ಯಾನಿಸಿದ್ದ ಅಪರೂಪದ ಭೌತ ವಿಜ್ಞಾನಿ. ಸುದೀರ್ಘ 40 ವರ್ಷಗಳ ಕಾಲ ಭೌತ ವಿಜ್ಞಾನ ಕ್ಷೇತ್ರದಲ್ಲಿ ಸೇವೆಗೈದಿದ್ದ ಹಾಕಿಂಗ್, 2008ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ 50ನೇ ವರ್ಷಾಚರಣೆ ವೇಳೆ, ಮಾನವ ಜನಾಂಗ ಆಕಾಶದ ಅನ್ವೇಷಣೆಗೆ ಯಾಕೆ ಮುಂದಾಗುತ್ತದೆ ಅನ್ನುವ ಕುರಿತು ಮಾಡಿದ್ದ ಭಾಷಣ ವಿಶ್ವದ ಖಗೋಳ ಆಸಕ್ತರ ಗಮನ ಸೆಳೆದಿತ್ತು.

Stephen William Hawking saakshatvಪ್ರಪಂಚದ ಏಕೈಕ ಮಹಾನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅಂದರೆ ಅತಿಶಯೋಕ್ತಿಯಲ್ಲ. ಆಲ್ಬರ್ಟ್ ಐನ್​ಸ್ಟೀನ್ ನಂತರ ಅವರಷ್ಟೇ ಶ್ರೇಷ್ಟ ಬೌತವಿಜ್ಞಾನಿಯ ಸ್ಥಾನ ಅಲಂಕರಿಸಿ ವಿಶ್ವಮಾನ್ಯರಾದವರು ಸ್ಟೀಫನ್ ಹಾಕಿಂಗ್. ಅವರ ಬುದ್ದಿ ಮತ್ತೆ ಅಥವಾ ಐಕ್ಯೂ ಸಹ ಐನ್​ಸ್ಟಿನ್​ಗೆ ಸಮನಾಗಿತ್ತು. ಭೌತಶಾಸ್ತ್ರದ ವಿಷಯದಲ್ಲಿ ಜಗತ್ಪ್ರಸಿದ್ಧ ವಿಜ್ಞಾನಿ ಸರ್ ಐಸಾಕ್ ನ್ಯೂಟನ್​ನಷ್ಟೇ ಹೆಸರು ಮಾಡಿರುವ ಮತ್ತೊಬ್ಬ ಈ ಕಾಲಘಟ್ಟದ ಅಗ್ರಮಾನ್ಯ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್. ಸಾಮಾನ್ಯ ಜನರಿಗೆ ಸರಳವಾಗಿ ಭೌತಶಾಸ್ತ್ರ ತಲುಪಿಸಲು ಹಾಕಿಂಗ್ ನೀಡಿದ ಕೊಡುಗೆ ಬೆಲೆಕಟ್ಟಲಾಗದ್ದು.

ವಿಶ್ವ ಸಾಹಿತ್ಯ ಇತಿಹಾಸದಲ್ಲಿ ಯಾವುದಾದರೊಂದು ಪುಸ್ತಕ ಮಾರಾಟದಲ್ಲಿ ಇತಿಹಾಸ ಕಂಡಿದೆ ಅಂದ್ರೆ ಅದು ಸ್ಟೀಫನ್ ಹಾಕಿಂಗ್​ರ ಪುಸ್ತಕ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’. ಇದು ನ್ಯೂಯಾರ್ಕ್ ಬೆಸ್ಟ್​ ಲಿಸ್ಟರ್​ಗಳ ಪಟ್ಟಿಯಲ್ಲಿ ನಿರಂತರ 4 ವರ್ಷಗಳ ಕಾಲ ಅಗ್ರ ಪಂಕ್ತಿಯಲ್ಲಿತ್ತು. 1988 ರಲ್ಲಿ ಸ್ಟೀಫನ್ ಪ್ರಕಟಿಸಿದ್ದ ಅವರ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕ ಬರೋಬ್ಬರಿ 10 ದಶಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿತ್ತು. ಬ್ರಿಟೀಷ್ ಸಂಡೇ ಟೈಮ್ಸ್​ನ ಅತ್ಯಂತ ಯಶಸ್ವಿ ಮಾರಾಟದ ಪುಸ್ತಕ ಪಟ್ಟಿಯಲ್ಲಿ 237 ವಾರಗಳ ಕಾಲ ಸ್ಥಾನ ಪಡೆದಿತ್ತು ಹಾಕಿಂಗ್​ರ ಈ ಪುಸ್ತಕ.

ಸ್ಟೀಫನ್ ಹಾಕಿಂಗ್​ ತಮ್ಮ ಜೀವನದ ಬಹುಪಾಲು ಅವಧಿ ವ್ಯಯಿಸಿದ್ದು ಸೈದ್ಧಾಂತಿಕ ವಿಶ್ವವಿಜ್ಞಾನ ಹಾಗೂ ಕ್ವಾಂಟಮ್ ಗುರುತ್ವಾಕರ್ಷಣೆ, ಬ್ಲ್ಯಾಕ್ ಹೋಲ್ ಬಗೆಗಿನ ಸಂಶೋಧನೆಗೆ. ಪ್ರಾಯಶಃ ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ,1959ರಲ್ಲಿ ಪಿಎಚ್​​ಡಿ ಅಧ್ಯಯನಕ್ಕೂ ಮೊದಲು ಆಕ್ಸ್​​ಫರ್ಡ್ ವಿಶ್ವವಿದ್ಯಾಲಯದಲ್ಲಿ ನೈಸರ್ಗಿಕ ವಿಜ್ಞಾನ ಅಧ್ಯಯನ ಮಾಡಿದ್ದರು ಹಾಕಿಂಗ್. 1974ರಲ್ಲಿ ಕಪ್ಪು ಕುಳಿಗಳು ವಿಕಿರಣ ಹೊರಸೂಸುತ್ತವೆ ಎಂಬ ತನ್ನ ಸಿದ್ಧಾಂತವನ್ನು ವಿವರಿಸಿದ್ದರು ಹಾಕಿಂಗ್. ಆನಂತರ ಅದು ಹಾಕಿಂಗ್ ವಿಕಿರಣಗಳು ಎಂದೇ ಖ್ಯಾತವಾಯ್ತು. 2014ರಲ್ಲಿ ಸ್ಟೀಫನ್ ಹಾಕಿಂಗ್ ಜೀವನಾಧಾರಿತ ಕಥೆ ‘ದ ಥಿಯರಿ ಆಫ್ ಎವೆರಿಥಿಂಗ್’ ಸಿನಿಮಾ ಬಿಡುಗಡೆಯಾಯಿತು. ಎಡ್ಡಿ ರೆಡಿಮೇನ್, ಸ್ಟೀಫನ್ ಹಾಕಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ದಶಕಗಳ ಕಾಲ ತಮ್ಮ ಯಾವುದೇ ದೇಹದ ಅಂಗಗಳನ್ನು ಚಲಿಸಲಾಗದ ಸ್ಥಿತಿಯಲ್ಲಿ ವೀಲ್​ಚೇರ್​ನಲ್ಲಿ ಕುಳಿತೇ ಬದುಕಿದ ಸ್ಟೀಫನ್ ಹಾಕಿಂಗ್ಸ್, ಬದುಕಿದ್ದೇ ತಮ್ಮ ಅಗಾಧ ಮನೋಬಲದ ಸಹಾಯದಿಂದ. ಕನಿಷ್ಟ ತುಟಿಯನ್ನೂ ಹೆಚ್ಚು ಅಲುಗಿಸಲು ಸಾಧ್ಯವಾಗದಿದ್ದ ಅವರು ಸಂವಹನಕ್ಕೆ ಯಂತ್ರಗಳನ್ನು ಬಳಸಿ ಜಗತ್ತಿನೊಂದಿಗೆ ಸಂಭಾಷಿಸುತ್ತಿದ್ದರು. ಅವರು ಹೇಳುವ ಪ್ರತಿಯೊಂದು ವಾಕ್ಯವೂ ಭೌತ ವಿಜ್ಞಾನಿಗಳ ಪಾಲಿಗೆ ಧರ್ಮಗ್ರಂಥದಂತಾಗಿತ್ತು. ಐನ್​ಸ್ಟೀನ್ ನಂತರ ಐನ್​ಸ್ಟೀನ್ ಪುನರ್ಜನ್ಮ ಎಂಬಂತೆ ವಿದ್ವತ್ ಸಂಪಾದಿಸಿದ್ದ ಹಾಕಿಂಗ್​ಗೆ ನೋಬೆಲ್ ಸಿಗದೇ ಹೋದದ್ದು ಸೋಜಿಗ.

ಸ್ಟೀಫನ್ ಹಾಕಿಂಗ್​ಗೆ ಬಂದಿದ್ದು ಅತ್ಯಂತ ಅಪರೂಪದ ಕಾಯಿಲೆ. ಇನ್ನೇನು ಹಾಕಿಂಗ್ ಬದುಕು ಮುಗಿದೇ ಹೋಯಿತು ಅಂತ ವೈದ್ಯರು ಸರ್ಟಿಫಿಕೆಟ್ ಕೊಟ್ಟರು ಹಾಕಿಂಗ್ ತಮ್ಮ ಮನೋಬಲದ ಮೂಲಕ ಸಾವಿಗೆ ಸವಾಲ್ ಹಾಕಿ ಬದುಕಿದ್ದರು.

Stephen William Hawking saakshatvಸ್ಟೀಫನ್ ಹಾಕಿಂಗ್ ಹುಟ್ಟಿನಿಂದ ದೈಹಿಕ ಅಸಮರ್ಥರಲ್ಲ. ತಾರುಣ್ಯದ ವರೆಗೂ ಸರಿಯಾಗೇ ಇದ್ದ ಅವರಿಗೆ ಆನಂತರ ಅಪರೂಪದ ದೈಹಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ರೆ ದೇಹ ಕೆಲಸ ಮಾಡುವುದು ನಿಂತ ನಂತರ ಅವರ ಮೆದುಳು ಅಸಾಧ್ಯ ವೇಗದಲ್ಲಿ ಕೆಲಸ ಮಾಡತೊಡಗಿತ್ತು. ಹೀಗಾಗಿ ಹಾಕಿಂಗ್ ಜಗತ್ತಿನ ಕಣ್ಣಿಗೆ ಜೀವಂತ ವಂಡರ್ ಆಗಿ ಕಂಡರು.

ಸ್ಟೀಫನ್ ವಿಲಿಯಂ ಹಾಕಿಂಗ್ ಹುಟ್ಟಿದ್ದು 1942ರ ಜನವರಿ 8ರಂದು ಆಕ್ಸ್​ಫರ್ಡ್​ನಲ್ಲಿ. ಅವರ ತಂದೆ ಫ್ರಾಂಕ್ ಹಾಕಿಂಗ್ ಹಾಗೂ ತಾಯಿ ಇಸಾಬೆಲ್ ಗೃಹಿಣಿ. ತನ್ನ ಶಾಲಾ ದಿನಗಳಲ್ಲೇ ಅತ್ಯಂತ ಕ್ಲಿಷ್ಟದ ಗಣಿತ ಹಾಗೂ ಭೌತ ವಿಜ್ಞಾನದ ಯಾವುದೇ ಸಮಸ್ಯೆಗಳಿಗೆ ಹಾಕಿಂಗ್ ಲೀಲಾಜಾಲವಾಗಿ ಉತ್ತರ ನೀಡುತ್ತಿದ್ದರು. ಹಾಕಿಂಗ್ ದೈಹಿಕ ಕಾಯಿಲೆಯ ಅರಿವಿದ್ದರೂ ಜೇನ್ ಅನ್ನುವ ತರುಣಿ 1963ರಲ್ಲಿ ಅವರನ್ನು ಮದುವೆಯಾದರು. ಬಳಿಕ ಎರಡು ಮಕ್ಕಳಾದವು. ಕೆಲ ವರ್ಷಗಳ ನಂತರ ವಿಚ್ಛೇದನೆಯೂ ಆಯಿತು.

ಬಾಲ್ಯದಲ್ಲಿ ಗಣಿತದಲ್ಲಿ ಅತೀವ ಆಸಕ್ತಿ ಹೊಂದಿದ್ದ ಸ್ಟೀಫನ್ ಮುಂದೆ ಜಗತ್ತೇ ಶ್ಲಾಘಿಸುವ ಭೌತಶಾಸ್ತ್ರದ ಮಹಾನ್ ವಿಜ್ಞಾನಿಯಾಗುತ್ತಾನೆ ಅಂತ ಯಾರೂ ಕಲ್ಪಿಸಿಕೊಂಡಿರಲಿಲ್ಲ. ಆದ್ರೆ ಹಾಕಿಂಗ್​ಗೆ ವರವಾಗಿ ದೊರೆತಿದ್ದು ಅವರ ಕೌಟುಂಬಿಕ ಹಿನ್ನೆಲೆ. ಮನೆಯಲ್ಲಿ ವೈಜ್ಞಾನಿಕ ವಾತಾವರಣವಿತ್ತು; ಅವರ ತಂದೆ ತಂದೆ ಡಾ. ಫ್ರಾಂಕ್ ಹಾಕಿಂಗ್ ಪ್ರಸಿದ್ಧ ಜೀವಶಾಸ್ತ್ರಜ್ಞರಾಗಿದ್ದರು. ಗಣಿತದಲ್ಲಿ ಆಸಕ್ತಿಯಿದ್ದರೂ ತಂದೆಯ ಸಲಹೆಯಂತೆ ಆಕ್ಸ್​ಫರ್ಡ್ ವಿವಿಯಲ್ಲಿ ಗಣಿತಶಾಸ್ತ್ರದ ವಿಷಯಕ್ಕೆ ಪ್ರಾಧ್ಯಾಪಕರಿಲ್ಲದ ಕಾರಣ ಅನಿವಾರ್ಯವಾಗಿ ಭೌತಶಾಸ್ತ್ರ ಆರಿಸಿಕೊಂಡಿದ್ದರು ಹಾಕಿಂಗ್. ಮುಂದಿನದೆಲ್ಲಾ ಇತಿಹಾಸ.

ಹಾಕಿಂಗ್, ಸ್ನಾಯುವಿಗೆ ಸಂಬಂಧಿಸಿದ ಅಪರೂಪದ ತೀವ್ರ ನರಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಇದ್ದಿದ್ದು ಮಾನವ ಪ್ರಪಂಚದಲ್ಲೇ ಅತ್ಯಂತ ಅಪರೂಪದ ನರ ದೌರ್ಬಲ್ಯದ ಸಮಸ್ಯೆ. ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ ಅಂತ ಕರೆಯಲಾದ ಈ ದೈಹಿಕ ಕಾಯಿಲೆಯನ್ನು ಬೆನ್ನುಹುರಿಯ ಸ್ನಾಯು ಕ್ಷೀಣತೆಯ IVನೇ ವಿಧ ಅಂತ ಗುರುತಿಸಲಾಗಿತ್ತು. ಇದೊಂದು ರೀತಿ ಸಂಪೂರ್ಣ ಪಾರ್ಶ್ವವಾಯುವಿಗೆ ದೇಹ ಒಳಗಾದ ಸ್ಥಿತಿ. ಬೆನ್ನು ಹುರಿಯ ಸ್ನಾಯು ಕ್ಷೀಣತೆ ಹಾಕಿಂಗ್ಸ್​ ಅವರನ್ನು ಬದುಕಿನುದ್ದಕ್ಕೂ ಕಾಡಿತ್ತು.

ದೈಹಿಕವಾಗಿ ಮೊದಲು ಸಮರ್ಥವಾಗಿದ್ದ ಹಾಕಿಂಗ್ ಒಂದು ದಿನ ಕಾಲೇಜಿನ ಮೆಟ್ಟಿಲು ಇಳಿಯುತ್ತಿದ್ದಾಗ ಆಯ ತಪ್ಪಿ ಬಿದ್ದು ಪ್ರಜ್ಞೆ ತಪ್ಪಿದ್ದರು. ಬಳಿಕ ಪ್ರಜ್ಞೆ ಮರಳಿದ ಅವರಿಗೆ ಮತ್ತೆ ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ. ಅವರಿಗೆ ಮತ್ತೆ ಪ್ರಜ್ಞೆ ಮರುಕಳಿಸದ್ದೆ ಎರಡು ದಿನಗಳ ನಂತರ. ಆಸ್ಪತ್ರೆಯ ಹಾಸಿಗೆಯಲ್ಲಿ ಚಲನರಹಿತ ದೇಹ ಹೊತ್ತು ಮಲಗಿದ್ದ ಹಾಕಿಂಗ್ ಡಾಕ್ಟರ್​ರನ್ನು ಕೇಳಿದ ಮೊತ್ತ ಮೊದಲ ಪ್ರಶ್ನೆಯೇ ತಮ್ಮ ಮೆದುಳಿಗೇನೂ ತೊಂದರೆ ಇಲ್ಲ ಅಲ್ಲವೇ ಅನ್ನುವುದು. ಅದಾದ ನಂತರ ಅವರು ಬದುಕಿದ್ದೂ ಸಹ ಹಾಗೇ ಸತ್ತ ದೇಹ ಹಾಗೂ ಜೀವಂತ ಮೆದುಳಿನೊಂದಿಗೆ.

ಹಾಕಿಂಗ್​ಗೆ ದೈಹಿಕ ಸಮಸ್ಯೆ ಪತ್ತೆಯಾಗಿದ್ದು 1963ರಲ್ಲಿ ಅವರ 21ನೇ ವಯಸ್ಸಿನಲ್ಲಿ. ಆದ್ರೆ ಈ ನ್ಯೂನ್ಯತೆ ಅವರ ಬೌದ್ದಿಕ ಜ್ಞಾನವನ್ನಾಗಲೀ ಅಥವಾ ಆಲೋಚನಾ ವಿಸ್ತಾರವನ್ನಾಗಲಿ ತಗ್ಗಿಸಲಿಲ್ಲ. ವೀಲ್​ಚೇರ್​ನಲ್ಲಿ ಕುಳಿತೇ ಹಾಕಿಂಗ್, ಬೌತಶಾಸ್ತ್ರದ ಸೂಕ್ಷ್ಮಾತಿಸೂಕ್ಷ್ಮ ಬದಲಾವಣೆಗಳನ್ನ ಗ್ರಹಿಸುತ್ತಿದ್ದರು. ಖಗೋಳ ಅನಂತ ವಿಶ್ವದ ಪ್ರತಿಯೊಂದು ಕದಲಿಕೆಗಳ ಕುರಿತಾಗಿಯೂ ಮಾಹಿತಿ ನೀಡುತ್ತಿದ್ದರು. ಭವಿಷ್ಯತ್​ನ ತಲ್ಲಣಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು.

ಶಾಶ್ವತ ಮಾತಿನ ಶಕ್ತಿಯನ್ನು ಕಳೆದುಕೊಂಡ ಹಾಕಿಂಗ್​ಗೆ ವೈದ್ಯರು ಗಂಟಲಿಗೆ ವಾಯ್ಸ್ ಮಾಡ್ಯುಲೇಟರ್ ಯಂತ್ರ ಅಳವಡಿಸಿದ್ದರು. ಅವರು ಹೇಳುವ ಅಸ್ಪಷ್ಟ ಧ್ವನಿಯನ್ನು ಕಂಪ್ಯೂಟರ್ ಮಾತಿನಂತೆ ಬದಲಾಯಿಸುತ್ತಿತ್ತು. ಅವರನ್ನು ಪರಿಶೀಲಿಸುತ್ತಿದ್ದ ಯಾವುದೇ ವೈದ್ಯರು ಹಾಕಿಂಗ್ ಇನ್ನು ಹೆಚ್ಚೆಂದರೆ ಎರಡು ವರ್ಷ ಬದುಕುತ್ತಾರೆ ಎಂದು ಹೇಳುತ್ತಿದ್ದರು. ಆದ್ರೆ ಹೀಗೆ ಅವರನ್ನು ಕಳೆದ 40 ವರ್ಷ ಹೇಳುತ್ತಾ ಬಂದ ವೈದ್ಯಲೋಕಕ್ಕೆ ಸವಾಲೆಸೆಯುವಂತೆ ಹಾಕಿಂಗ್ ಕೇವಲ ತಮ್ಮ ಮನೋಬಲದ ಮೂಲಕ ಬದುಕಿದ್ದರು. ಹೀಗೆ ಹೇಳುತ್ತಾ ಹೋದರೆ ಹಾಕಿಂಗ್​ ಅವರ ಹತ್ತಾರು ವಿಸ್ಮಯಕಾರಿ ಸಂಗತಿಗಳಿವೆ.

Stephen William Hawking saakshatv20ನೆಯ ಶತಮಾನದ ಭೌತಶಾಸ್ತ್ರದ ಅತ್ಯುತ್ತಮ ಸಿದ್ಧಾಂತ ವಾದ ಕ್ವಾಂಟಂ. ಜಗತ್ತು ಅಣು ಮತ್ತು ಕಣಗಳಿಂದ ಕೂಡಿದೆ. ಅಣುವಿಗೂ ಕಿರಿಯದಾದ ಅಗೋಚರತೆಯನ್ನು ಕ್ವಾಂಟಂ ಎನ್ನಬಹುದು ಎಂದು ವಾದ ಮಂಡಿಸಿದ್ದವರು ಹಾಕಿಂಗ್. ತಮ್ಮ ಭೌತ ಸಿದ್ಧಾಂತಕ್ಕೆ ಸಂಬಂಧಪಟ್ಟಂತೆ ಕಾಲ, ಕೃಷ್ಣ ರಂಧ್ರ, ಕಾಲ್ಪನಿಕ ಕಾಲದ ಕುರಿತ ಪ್ರಮೇಯ, ಶಾಶ್ವತ ಸಿದ್ಧಾಂತ ಮಂಡನೆ ಮಾಡಿ ವಿಶ್ವದ ಭೌತಶಾಸ್ತ್ರ ಕ್ಷೇತ್ರದಲ್ಲಿ ಸಂಚಲ ಹುಟ್ಟಿಸಿ, ಭೌತವಿಜ್ಞಾನದ ವಿದ್ಯಾರ್ಥಿಗಳ ನೆಚ್ಚಿನ ಗುರುವಾದವರು ಹಾಕಿಂಗ್.

ಭೌತಶಾಸ್ತ್ರಜ್ಞ, ಗಣಿತಜ್ಙ, ಖಗೋಳಶಾಸ್ತ್ರಜ್ಙ ಮತ್ತು ತತ್ವಶಾಸ್ತ್ರಜ್ಞ ಗೆಲಿಲಿಯೋ ಸತ್ತ 3 ಶತಮಾನಗಳ ಬಳಿಕ ಅದೇ ದಿನ ಹುಟ್ಟಿದ್ದ ಸ್ಟೀಫನ್ ಹಾಕಿಂಗ್, ಒಬ್ಬ ನಾಸ್ತಕರಾದ್ರೂ ತಾನು ಗೆಲಿಲಿಯೋ ಪುನರ್ಜನ್ಮ ಎನ್ನುತ್ತಿದ್ದರು. ಹಾಕಿಂಗ್ 49 ವರ್ಷಕ್ಕೇ ಸಾಯುತ್ತಾರೆ ಅಂತ ಭವಿಷ್ಯ ನುಡಿದಿದ್ದ ವೈದ್ಯಕೀಯ ಲೋಕದ ತರ್ಕವನ್ನು ಸುಳ್ಳಾಗಿಸಿ 70 ವರ್ಷ ಮೀರಿ ಬದುಕಿದರು.

ಹಾಕಿಂಗ್​ ಅವರು ಬರೆದ ಬಹುತೇಕ ಪುಸ್ತಕಗಳು ಮನುಕುಲದ ಸರ್ವಶ್ರೇಷ್ಟ ಕೃತಿಗಳು ಅಂತ ಗುರುತಿಸಲ್ಪಟ್ಟಿವೆ. ಆದ್ರೂ ಅವರ ಕೃತಿಗೆ ನೋಬೆಲ್ ದೊರಕಲಿಲ್ಲ ಅನ್ನೋದು ಅತ್ಯಂತ ಆಶ್ಚರ್ಯದ ಸಂಗತಿ.

ಹಾಕಿಂಗ್, ಕೃಷ್ಣರಂಧ್ರಗಳ ಬಗ್ಗೆ, ಏಲಿಯನ್ಸ್​ಗಳ ಬಗ್ಗೆ, ದೇವಕಣಗಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಅವರ ಭೌತಶಾಸ್ತ್ರದ ಪಾಂಡಿತ್ಯ ನಮ್ಮ ಆಲೋಚನೆಗೂ ನಿಲುಕದಷ್ಟು ವಿಸ್ತಾರವಾಗಿದೆ. ಅವರು ದೈಹಿಕ ಅಸಮರ್ಥತೆ ಇದ್ರೂ ಹಲವು ಅಪರೂಪದ ಕೃತಿಗಳನ್ನು ಬರೆದ್ರು. ಅವರ ಒಂದು ಪುಸ್ತಕ ಮಾರಾಟದಲ್ಲಿ ಜಾಗತಿಕ ದಾಖಲೆ ಸೃಷ್ಟಿಸಿತು. ಆದ್ರೂ ನೋಬೆಲ್ ಅನ್ನುವ ಮಾಯಾಂಗನೆ ಮಾತ್ರ ಹಾಕಿಂಗ್​ಗೆ ಒಲಿಯಲಿಲ್ಲ.

ತಮ್ಮ ಮಗಳು ಲೂಸಿಯೊಂದಿಗೆ ಜೊತೆಗೆ ಹಾಕಿಂಗ್ ಬರೆದೆ ಕೆಲವು ಕೃತಿಗಳು ಮನುಕುಲದ ಸರ್ವಶ್ರೇಷ್ಟ ಹಾಗೂ ಅಮೂಲ್ಯ ಬರಹಗಳೆಂದೇ ಪರಿಗಣಿಸಲ್ಪಟ್ಟಿದೆ. ಜಾರ್ಜ್ಸ್ ಸೀಕ್ರೆಟ್ ಕೀ ಟು ದಿ ಯೂನಿವರ್ಸ್, ಜಾರ್ಜ್ಸ್ ಕಾಸ್ಮಿಕ್ ಟ್ರೆಷರ್ ಹಂಟ್, ಎ ಬ್ರೀಫ್ ಹಿಸ್ಟರಿ ಆಫ್ ಟೈಮ್, ಸ್ಟೀಫನ್ ಹಾಕಿಂಗ್ಸ್ ಯೂನಿವರ್ಸ್, ಹೊರೈಜನ್/ಹಾರಿಜಾನ್: ದಿ ಹಾಕಿಂಗ್ ಪ್ಯಾರಡಾಕ್ಸ್, ಮಾಸ್ಟರ್ ಆಫ್ ಸೈನ್ಸ್ ಫಿಕ್ಷನ್, ಸ್ಟೀಫನ್ ಹಾಕಿಂಗ್: ಮಾಸ್ಟರ್ ಆಫ್ ದಿ ಯೂನಿವರ್ಸ್ ಕೃತಿಗಳು ವಿಶ್ವ ಸಾಹಿತ್ಯದ ಅತ್ಯುತ್ತಮ ಕೃತಿಗಳೆಂದೇ ಸ್ಥಾನ ಪಡೆದಿವೆ. ಇನ್ನು ಸ್ಟೀಫನ್ ಹಾಕಿಂಗ್ ಭೌತವಿಜ್ಞಾನ ಸಾಧನೆಗಳ ಬಗ್ಗೆ ಕೆಲವು ಕೃತಿಗಳು ವರ್ಣಿಸಿವೆ; ಅವು ಕ್ವಾಂಟಮ್ ಯಂತ್ರಶಾಸ್ತ್ರದ ಮೂಲ ವಿಚಾರಗಳು, ಜಾರ್ಜ್ ಎಲ್ಲಿಸ್, ಗುರುತ್ವಾಕರ್ಷಣೆಯ ವಿಶಿಷ್ಟತೆ, ಮೆನಿ-ವರ್ಲ್ಡ್ಸ್ ಇಂಟರ್ಪ್ರಿಟೇಷನ್, ಫ್ಲೆಕ್ಸಿವರ್ಸ್, ಸ್ಟೀಫನ್ ಹಾಕಿಂಗ್ ಇನ್ ಪಾಪ್ಯುಲರ್ ಕಲ್ಚರ್, ಸಸ್ಕೈಂಡ್–ಹಾಕಿಂಗ್ ಕದನ ಇತ್ಯಾದಿ.

ಹಾಕಿಂಗ್​ಗೆ 13 ಗೌರವ ಪದವಿಗಳು ದೊರೆತಿದ್ದವು. ಸಿಬಿಇ, ಕಂಪ್ಯಾನಿಯನ್ ಆಫ್ ಆನರ್, ಪ್ರಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. ಫಂಡಮೆಂಟಲ್ ಫಿಸಿಕ್ಸ್ ಪ್ರೈಜ್, ಕಾಪ್ಲೆ ಮೆಡಲ್ ಮತ್ತು ವೂಲ್ಫ್ ಫೌಂಡೇಶನ್ ಪ್ರೈಜ್ ಸೇರಿದಂತೆ ಇನ್ನೂ ಹಲವಾರು ಪದಕಗಳು, ಫಲಕಗಳು, ಪ್ರಶಸ್ತಿಗಳು, ಪಾರಿತೋಷಕಗಳು ಸ್ಟೀಫನ್ ಬೌದ್ದಿಕ ಸಂಪತ್ತಿಗೆ ಗೌರವ ಸಲ್ಲಿಸಿದ್ದವು. ಜಗತ್ತಿನ ಪ್ರತಿಷ್ಠಿತ ರಾಯಲ್ ಸೊಸೈಟಿಯ ಫೆಲೋಶಿಪ್ ಪಡೆದಿದ್ದ ಹಾಕಿಂಗ್, ಅಮೆರಿಕದ ಪೋಂಟಿಫಿಶಿಯಲ್ ಅಕಾಡೆಮಿ ಆಫ್ ಸೈನ್ಸಸ್​ ಹಾಗೂ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸದಸ್ಯತ್ವ ಪಡೆದಿದ್ದರು.

ಹಾಕಿಂಗ್ ಅವರ ಎ ಬ್ರೀಫ್ ಹಿಸ್ಟರಿ ಆಫ್ ಟೈಂ ನಾಲ್ಕು ಬಾರಿ ನೋಬೆಲ್ ಅಂಗಳದೊಳಗೆ ಕಾಲಿಟ್ಟಿತ್ತು. ಆದ್ರೆ ಹಾಕಿಂಗ್​ಗೆ ನೋಬೆಲ್ ಒಂದು ಹೊರತುಪಡಿಸಿ ಉಳಿದ ಎಲ್ಲಾ ಅತ್ಯುನ್ನತ ಗೌರವಗಳೂ ಸಂದಿವೆ. ಎಡ್ಡಿಂಗ್ಟನ್ ಪದಕ, ರಾಯಲ್ ಸೊಸೈಟಿಯ ಹ್ಯೂಜಸ್ ಪದಕ, ಆಲ್ಬರ್ಟ್ ಐನ್ಸ್ಟೀನ್ ಪದಕ, ಆರ್ಡರ್ ಆಫ್ ದಿ ಬ್ರಿಟೀಷ್ ಎಂಪೈರ್ (ಕಮ್ಯಾಂಡರ್), ರಾಯಲ್ ಖಗೋಳೀಯ ಸಂಸ್ಥೆಯ ಚಿನ್ನದ ಪದಕ, ಭೌತಶಾಸ್ತ್ರದಲ್ಲಿ ವುಲ್ಫ್ ಪ್ರಶಸ್ತಿ, ಕಾನ್ಕಾರ್ಡ್​ನಲ್ಲಿ ಪ್ರಿನ್ಸ್ ಆಫ್ ಆಸ್ಟುರಿಯಾಸ್ ಅವಾರ್ಡ್ಸ್, ಕಂಪ್ಯಾನಿಯನ್ ಆಫ್ ಆನರ್, ಅಮೇರಿಕನ್ ಫಿಸಿಕಲ್ ಸೊಸೈಟಿಯವರ ಜೂಲಿಯಸ್ ಎಡ್ಜರ್ ಲಿಲಿಯನ್ಫೀಲ್ಡ್ ಪ್ರಶಸ್ತಿ, ಕೇಸ್ ವೆಸ್ಟ್ರನ್ ರಿಸರ್ವ್ ವಿಶ್ವವಿದ್ಯಾಲಯದ ಮೈಕಲ್ಸನ್ ಮೊರ್ಲೆ ಪ್ರಶಸ್ತಿ, ರಾಯಲ್ ಸೊಸೈಟಿಯವರ ಕೊಪ್ಲಿ ಮೆಡಲ್, ಸ್ಯಾಂಟಿಯಾಗೊ ಡಿ ಕಂಪೋಸ್ಟೆಲಾ ವಿಶ್ವವಿದ್ಯಾಲಯದ ಫೋನ್ಸೆಕಾ ಪ್ರೈಸ್ ಇತ್ಯಾದಿ ಗೌರವಗಳು ಹಾಕಿಂಗ್ ಮನೆಯ ಕದ ತಟ್ಟಿವೆ.

Stephen William Hawking saakshatvಅನ್ಯಗ್ರಹ ಜೀವಿಗಳ ಪತ್ತೆಗೆ ಅಮೇರಿಕಾ ಹಮ್ಮಿಕೊಂಡ 10 ಕೋಟಿ ಡಾಲರ್ ವೆಚ್ಚದ ಯೋಜನೆಗೆ ಚಾಲನೆ ಕೊಟ್ಟಿದ್ದೇ ಸ್ಟೀಫನ್ ಹಾಕಿಂಗ್. ಭೂಮಿಯಾಚೆಗಿನ ಜೀವಿಗಳ ಪತ್ತೆಗಾಗಿ ಈವರೆಗೆ ಹಮ್ಮಿಕೊಂಡಿರುವ ಅತ್ಯಂತ ದೊಡ್ಡ ಸಂಶೋಧನಾ ಕಾರ್ಯಾಚರಣೆಗೆ ಚಾಲನೆ ನೀಡಿದ್ದ ಹಾಕಿಂಗ್, ಭೂಮಿಯ ಮೇಲೆ ಜೀವಿಗಳು ಸ್ವಾಭಾವಿಕವಾಗಿ ಸೃಷ್ಟಿಯಾದವು ಎಂದು ನಮ್ಮ ವಿಜ್ಞಾನ ನಂಬುತ್ತದೆ. ಹಾಗಿದ್ದರೆ ಈ ವಿಶಾಲ ವಿಶ್ವದಲ್ಲಿ ಮತ್ತೆಲ್ಲೋ ಜೀವ ಸೆಲೆ ಇರುವ ಸಾಧ್ಯತೆ ಇದೆ. ಅನಂತ ಬ್ರಹ್ಮಾಂಡದ ಯಾವುದೋ ಮೂಲೆಯಲ್ಲಿ ಕುಳಿತ ಜೀವಿ ನಮ್ಮನ್ನು ನೋಡುತ್ತಿರಲೂ ಬಹುದು. ಆ ಜೀವಿಗಳಿಗೆ ನಮ್ಮ ಜೀವನಶೈಲಿಯ ಬಗ್ಗೆ ಅರಿವಿರಬಹುದು ಎಂದು ಹೇಳುವ ಮೂಲಕ ಹೊಸ ಆಶ್ಚರ್ಯ ಹುಟ್ಟುಹಾಕಿದ್ದರು.

ಕೆಲವು ಕಾಲದ ಹಿಂದೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಎಕ್ಸ್​ಟ್ರಾ ಟೆರಿಸ್ಟ್ರಿಯಲ್ ಇಂಟೆಲಿಜೆನ್ಸ್ ಇನ್ಸ್ಟಿಟ್ಯೂಟ್, ವಿವಿಧ ನಕ್ಷತ್ರಗಳು ಹಾಗೂ ಗ್ರಹಗಳಿಗೆ ರೇಡಿಯೋ ಟೆಲಿಸ್ಕೋಪ್ ಮೂಲಕ ಭೂಮಿಯ ಅಸ್ತಿತ್ವದ ಕುರಿತು ಅಂಕಿ ಅಂಶಗಳನ್ನು ಕಳುಹಿಸಲು ಸಿದ್ಧತೆ ನಡೆಸಿತ್ತು. ಈ ಹಿಂದೆಯೂ ಅನ್ಯಗ್ರಹ ಜೀವಿಗಳಿಗೆ ಭೂಮಿ ಎನ್ನುವುದೊಂದಿದೆ ಇಲ್ಲಿ ಜೀವಿಗಳಿವೆ ಅನ್ನೋ ಸಂದೇಶಗಳನ್ನು ಇಲ್ಲಿನ ವಿಜ್ಞಾನಿಗಳು ರೇಡಿಯೋ ತರಂಗಗಳ ಮೂಲಕ ರವಾನಿಸಿದ್ದರು. ಈ ವೇಳೆ ಈ ಕ್ರಮಕ್ಕೆ ಎಚ್ಚರಿಕೆ ನೀಡಿದ್ದ ಹಾಕಿಂಗ್, ಇಂತಹ ಪ್ರಯತ್ನಗಳು ಭವಿಷ್ಯದಲ್ಲಿ ಅಪಾಯ ತಂದೊಡ್ಡಬಹುದು ಎಂದು ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ನಮಗೆ ಒಳಿತಾಗುತ್ತದೆ ಅನ್ನುವ ನಂಬಿಕೆ ಇಲ್ಲ. ಕೊಲಂಬಸ್ ಅಮೆರಿಕಕ್ಕೆ ಬಂದಿಳಿದ ಬಳಿಕ ಸ್ಥಳೀಯರು ತೀವ್ರ ತೊಂದರೆ ಎದುರಿಸಬೇಕಾಗಿತ್ತು. ಅದೇ ರೀತಿಯ ವ್ಯತಿರಿಕ್ತ ಪರಿಣಾಮ ಅನ್ಯಗ್ರಹ ಜೀವಿಗಳಿಂದ ಭೂ ವಾಸಿಗಳಿಗೂ ಉಂಟಾಗಬಹುದು ಅಂತ ಹಾಕಿಂಗ್ ಹೇಳಿದ್ದರು. ಈ ಎಚ್ಚರಿಕೆಯನ್ನು ವಿಶ್ವದ ಎಲ್ಲಾ ಭೌತ ವಿಜ್ಞಾನಿಗಳೂ ಗಂಭೀರವಾಗಿ ತೆಗೆದುಕೊಂಡಿದ್ದರು.

ಕೃತಕ ಬುದ್ಧಿಮತ್ತೆ ಸಾಧನಗಳಿಗೆ ಹೆಚ್ಚಿನ ಬಲ ತುಂಬುವುದರಿಂದ ಮನುಕುಲದ ಮೇಲೆ ಅತಿ ಕೆಟ್ಟ ಪರಿಣಾಮವಾಗಲಿದೆ ಅಂತ ಕೆಲವು ಕಾಲದ ಹಿಂದಷ್ಟೆ, ಸ್ಟೀಫನ್ ಹಾಕಿಂಗ್ ಆತಂಕ ವ್ಯಕ್ತಪಡಿಸಿದ್ದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಲೆವೆರ್ಹಲ್ಮ್ ಸೆಂಟರ್ ಫಾರ್ ದಿ ಫ್ಯೂಚರ್ ಆಫ್ ಇಂಟೆಲಿಜೆನ್ಸ್ ಉದ್ಘಾಟನೆಯ ಸಮಾರಂಭದಲ್ಲಿ ಭಾಗಿಯಾಗಿದ್ದ ಹಾಕಿಂಗ್, ಕೃತಕ ಬುದ್ಧಿಮತ್ತೆ ಸಂಶೋಧನೆಯ ಸಕಾರಾತ್ಮಕ ಅಂಶ ಹಾಗೂ ಭವಿಷ್ಯತ್ತಿನ ಅಪಾಯಗಳ ಕುರಿತಾಗಿ ವಿದ್ವತ್ ಪೂರ್ಣ ಭಾಷಣ ಮಾಡಿದ್ದರು.

ಜಗತ್ತಿನ ಅತಿದೊಡ್ಡ ಕಣ ಭೌತಶಾಸ್ತ್ರ ಪ್ರಯೋಗಾಲಯದ ವಿಜ್ಞಾನಿಗಳು 2012ರಲ್ಲಿ ಹಿಗ್ಸ್ ಬೋಸಾನ್ ದೇವಕಣ ಕಂಡುಹಿಡಿದಿದ್ದರು. ಈ ವಿಜ್ಞಾನಿಗಳು ಪತ್ತೆ ಮಾಡಿದ ದೇವಕಣ ಇಡೀ ಬ್ರಹ್ಮಾಂಡವನ್ನೇ ನಾಶಮಾಡುವ ಅಖಂಡ ಶಕ್ತಿ ಹೊಂದಿದೆ ಅಂತ ಸ್ಟೀಫನ್ ಹಾಕಿಂಗ್ ಮುನ್ನೆಚ್ಚರಿಕೆ ನೀಡಿದ್ದರು. ‘ಹಿಗ್ಸ್ ಬೋಸಾನ್’ ಎಂದು ಹೆಸರಿಟ್ಟ ದೇವಕಣದ ಅದ್ಭುತ ಶಕ್ತಿ ವಿಶ್ವದ ಅಸ್ತಿತ್ವದ ಮೂಲ. ಆದರೆ ಈ ಶಕ್ತಿಯ ಅಸ್ಥಿರತೆ ವಿನಾಶಕಾರಿ ನಿರ್ವಾತ ದುರಂತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾದರೆ ಆಕಾಶ ಮತ್ತು ಕಾಲದ ಕುಸಿತ ಸಂಭವಿಸಬಹುದು ಅಂತ ಸ್ಪಷ್ಟವಾಗಿ ಹೇಳಿದ್ದರು ಹಾಕಿಂಗ್. ಜೊತೆಗೆ ಹಿಗ್ಸ್ ಬೋಸಾನ್ ಕಣ 100 ಬಿಲಿಯನ್ ಗಿಗಾ ಎಲೆಕ್ಟ್ರಾನ್ ವೋಲ್ಟ್ಸ್ ನಷ್ಟು ಅಗಾಧ ಶಕ್ತಿ ಬಿಡುಗಡೆ ಮಾಡುವ ಮೂಲಕ ತನ್ನ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಹಾಕಿಂಗ್, ತಮ್ಮ ಕೃತಿ ಸ್ಟಾರ್ಮಸ್​ನ ಮುನ್ನುಡಿಯಲ್ಲಿ ಬರೆದಿದ್ದರೂ ಕೂಡಾ.

Stephen William Hawking saakshatvಹಾಕಿಂಗ್​​ರನ್ನು ನಾವು ಈ ಜಗತ್ತು ಕಂಡು ಅತ್ಯದ್ಭುತ ಭೌತ ವಿಜ್ಞಾನಿ ಅಂತ ಒಪ್ಪಿಕೊಳ್ಳಬೇಕಿರುವುದಕ್ಕೆ ಹತ್ತಾರು ಕಾರಣಗಳಿವೆ. ಅದರಲ್ಲಿ ಒಂದು ಕಾರಣ ಹಾಕಿಂಗ್​ಗೆ ವಿಶ್ವದ ಕಾಲದ ಬಗ್ಗೆ ಇದ್ದ ನಿಖರ ಜ್ಞಾನ. ಬಿಗ್ ಬ್ಯಾಂಗ್ ಅಥವಾ ಮಹಾಸ್ಫೋಟದ ನಂತರ ಸೃಷ್ಟಿ ಪ್ರಾರಂಭವಾದರೆ ಅದಕ್ಕೂ ಮೊದಲಿನ ಕಾಲ ಹೇಗಿತ್ತು ಅಂತ ಯೋಚಿಸಿದವರಲ್ಲಿ ಪ್ರಾಯಶಃ ಹಾಕಿಂಗ್ ಮೊದಲಿನವರು. ಮುಂಬೈನ ಟಾಟಾ ಸಂಶೋಧನಾಲಯ 2001ರ ಜನವರಿಯಲ್ಲಿ ಮುಂಬೈನಲ್ಲಿ ಸ್ಟ್ರಿಂಗ್ ಥಿಯರಿಯ ಕುರಿತಾಗಿ ವಿಶೇಷ ಅಂತರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿತ್ತು. ಇದಕ್ಕೆ ವಿಶೇಷ ಉಪನ್ಯಾಸಕರಾಗಿ ಸ್ಟೀಫನ್ ಹಾಕಿಂಗ್ ಭಾರತಕ್ಕೆ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ಹಾಕಿಂಗ್ ಮಾಡಿದ ಭಾಷಣದ ಸಂಪೂರ್ಣ ನೇರಪ್ರಸಾರವನ್ನು ದೂರದರ್ಶನ ಪ್ರಸಾರಿಸಿತ್ತು.

ಖಗೋಳ ಭೌತ ವಿಜ್ಞಾನಕ್ಕೆ ತಮ್ಮ ವಿಶಿಷ್ಟ ಚಿಂತನೆಗಳಿ೦ದ, ವಿಸ್ಮಯಕಾರಿ ಬರಹಗಳಿಂದ ನೂತನ ಆಯಾಮ ಕಲ್ಪಿಸಿ ಜಗತ್ತಿನ ಬೆರಗಿಗೆ ಕಾರಣರಾದ ಸರ್ವಶ್ರೇಷ್ಟ ಸೈದ್ಧಾಂತಿಕ ಖಗೋಳಶಾಸ್ತ್ರ ಭೌತಶಾಸ್ತ್ರದ ಸೈದ್ಧಾಂತಿಕ ವಿಜ್ಞಾನಿ ಸ್ಟೀಫೆನ್ ಹಾಕಿಂಗ್ ನಡೆದಾಡುವ ವಿಶ್ವಕೋಶ. ಸೃಷ್ಟಿಯ ಜೀವ ಅದ್ಭುತ. ದೈಹಿಕವಾಗಿ ನಡೆದಾಡಲು ಸಾಧ್ಯವಿಲ್ಲದೆ, ಕೋಟಿಗೊಬ್ಬರಿಗೆ ಬರುವ ವ್ಯಾದಿ ಬಂದರೂ ಕೇವಲ ಮನೋಬಲದ ಮೇಲೆ ಬದುಕಿ ವಿಶ್ವದ ಕಣ್ಣಿಗೆ ಸದಾ ಅಚ್ಚರಿಯ ವ್ಯಕ್ತಿಯಾಗುಳಿದ ಅಪ್ಪಟ ಪ್ರತಿಭಾವಂತ.

ಈ ಜಗತ್ತು ಹೀಗೆ ಸಾಗಿದರೆ ಸಾವಿರ ವರ್ಷಗಳ ಬಳಿಕ ಮನುಷ್ಯ ಜೀವನಕ್ಕೆ ಬೆಲೆಯೇ ಇರುವುದಿಲ್ಲ. ಮಾನವೀಯತೆ ಉಳಿಯುವುದಿಲ್ಲ ಎಂದು ಈಗಾಗಲೆ ಸ್ಟೀಫನ್ ಹಾಕಿಂಗ್ ಭವಿಷ್ಯ ನುಡಿದಿದ್ದಾರೆ. ಹಾಕಿಂಗ್ ಭವಿಷ್ಯತ್ ಬಗ್ಗೆ ಕೊಟ್ಟ ಎಲ್ಲ ಎಚ್ಚರಿಕೆಗಳನ್ನು ವಿಜ್ಞಾನಿಗಳು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಖಗೋಳ ಶಾಸ್ತ್ರದ ಹಾಗೂ ಭೌತ ವಿಜ್ಞಾನದ ಕದಲಿಕೆಗಳನ್ನು ಗಮನಿಸಲು ಸ್ಟೀಫನ್ ಹಾಕಿಂಗ್ ಇಲ್ಲದ ಈ ನಿರ್ವಾತ ಸ್ಥಿತಿಯನ್ನು ಭರ್ತಿ ಮಾಡಲು ಮತ್ತೊಬ್ಬ ಹಾಕಿಂಗ್ ಹುಟ್ಟಿ ಬರಬೇಕಷ್ಟೆ.

-ವಿಭಾ (ವಿಶ್ವಾಸ್ ಭಾರದ್ವಾಜ್)
ಮಾರ್ಜಾಲ ಮಂಥನ ಕಾಲಂ

Tags: #saakshatvCambridgecosmologistEnglish theoretical physicistRoger PenroseStephen William Hawking saakshatvUnited KingdomUniversity of Cambridge
ShareTweetSendShare
Join us on:

Related Posts

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

by Shwetha
February 15, 2026
0

ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ತೀವ್ರ ಸ್ವರೂಪದ ರಾಜಕೀಯ ವಿವಾದವೊಂದು ಭುಗಿಲೆದ್ದಿದೆ. ಮಹಾನಗರ ಪಾಲಿಕೆಯ ಉಪಮೇಯರ್ ಅವರ ಅಧಿಕೃತ ಕೊಠಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ...

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

by Shwetha
February 15, 2026
0

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲೆ ದಿನೇ ದಿನೇ ಹೆಚ್ಚುತ್ತಿದ್ದು, ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬರೋಬ್ಬರಿ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ...

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

by Shwetha
February 15, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ 2028ರ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಈಗಲೇ ಕಾವೇರುತ್ತಿದೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಆಗಲು...

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

by Shwetha
February 15, 2026
0

ಬೆಂಗಳೂರು: ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ (Ration Card) ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕಳೆದ ಕೆಲವು ಸಮಯದಿಂದ...

ದೆಹಲಿಯಿಂದ ಡಿಕೆಶಿ ವಾಪಸ್ ಬಂದ್ರು, ಮುನ್ನೆಲೆಗೆ ಬಂದ  ಕೋಡಿಶ್ರೀಗಳ ಭವಿಷ್ಯ! ಬಜೆಟ್ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್ ಹಸ್ತಾಂತರ ಫಿಕ್ಸ್?

ದೆಹಲಿಯಿಂದ ಡಿಕೆಶಿ ವಾಪಸ್ ಬಂದ್ರು, ಮುನ್ನೆಲೆಗೆ ಬಂದ ಕೋಡಿಶ್ರೀಗಳ ಭವಿಷ್ಯ! ಬಜೆಟ್ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್ ಹಸ್ತಾಂತರ ಫಿಕ್ಸ್?

by Shwetha
February 15, 2026
0

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2026ನೇ ಸಾಲಿನ ರಾಜ್ಯ ಬಜೆಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram