ಮಡಿಕೇರಿ: ಮಾರುತಿ ಕಾರೊಂದು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದು ಅಂಗಡಿಗೆ ನುಗ್ಗಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಗುಡ್ಡೆಹೊಸೂರಿನಿಂದ ಕುಶಾಲನಗರ ಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಒಂದು ಮತ್ತೊಂದು ಕಾರನ್ನು ಹಿಂದಿಕ್ಕಲು ಪ್ರಯತ್ನ ಮಾಡುತ್ತಿರುವ ಸಂದರ್ಭ ಆ ಕಾರನ್ನು ಹಿಂದಿಕ್ಕಲು ಮಾರುತಿ ಕಾರು ವೇಗವಾಗಿ ಆಗಮಿಸಿದೆ.

ಈ ವೇಳೆ ನಿಯಂತ್ರಣ ಕಳೆದುಕೊಂಡ ಮಾರುತಿ ಕಾರು ನಾಲ್ಕೈದು ಬಾರಿ ಪಲ್ಟಿ ಹೊಡೆದು ರಸ್ತೆ ಬದಿಯಲ್ಲಿ ಮಣ್ಣಿನ ಕಲಾಕೃತಿ ಮಾರಾಟ ಮಾಡುವ ಅಂಗಡಿಗೆ ನುಗ್ಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಸ್ಥಳೀಯರು ಆಗಮಿಸಿ ಚಾಲಕನನ್ನು ಕಾರಿನ ಬಾಗಿಲು ತೆರೆದು ಹೊರ ತೆಗೆದಿದ್ದು, ಸಣ್ಣಪುಟ್ಟ ಗಾಯಗಳಾಗಿದೆ. ಈ ಅಪಘಾತದ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








