ಬೆಂಗಳೂರು: ಸಿಎಂ ಸ್ಥಾನ ಪಡೆಯಲು 1 ಸಾವಿರ ಹಣ ಹೊಂದಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿಕೆ ನೀಡಿದ್ದರ ವಿರುದ್ಧ ಕಾಂಗ್ರೆಸ್ (Congress) ನಾಯಕರು ದೂರು ನೀಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ನೀಡಿದೆ. ಯತ್ನಾಳ್ ಹೇಳಿದಂತೆ 1 ಸಾವಿರ ಕೋಟಿಯ ಮೂಲ ಯಾವುದು? ಕೂಡಲೇ ಯತ್ನಾಳ್ ರನ್ನು ವಿಚಾರಣೆಗಳಪಡಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ದೂರು ದಾಖಲಿಸಿದ್ದಾರೆ.
ಈ ವೇಳೆ ಮಾತನಾಡಿದ ಉಗ್ರಪ್ಪ, ಯತ್ನಾಳ್ ಸಾವಿರ ಕೋಟಿ ಇಟ್ಟುಕೊಂಡಿದ್ದೇವೆ ಎಂದರು ಕ್ರಮವಾಗಿಲ್ಲ. ಅವರ ವಿರುದ್ಧ ತನಿಖೆಯಾಗಬೇಕು. ಬಿಜೆಪಿಯು ಏನೇ ಷಡ್ಯಂತ್ರ ಮಾಡಿದರೂ ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದಿದ್ದಾರೆ.