ಗಟ್ಟಿಮೇಳ ಖ್ಯಾತಿಯ ನಟ ರಕ್ಷಿತ್ ಅಂಡ್ ಗ್ಯಾಂಗ್ ನಿಂದ ಕುಡಿದು ಗಲಾಟೆ
ಕನ್ನಡ ಕಿರುತೆರೆಯ ಗಟ್ಟಿಮೇಳ ಧಾರಾವಾಹಿ ಖ್ಯಾತಿ ನಟ ರಕ್ಷಿತ್ ಮತ್ತು ಅವರ ಸ್ನೇಹಿತರು ಕುಡಿದು ಗಲಾಟೆ ಮಾಡಿಕೊಂಡ ಕಾರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಗೇರಿ ಬಳಿ ಜಿಂಜರ್ ಲೇಕ್ ವ್ಯೂ ಹೋಟೆಲ್‍ಗೆ ರಾತ್ರಿ ಊಟಕ್ಕ ಬಂದಿದ್ದರು. ಈ ವೇಳೆ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ಗಲಾಟೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಜೊತೆಗೆ ರಕ್ಷಿತ್ ಊಟ ಮಾಡುವುದಕ್ಕೆ ಬಂದಿದ್ದೆವು ಲೇಟ್ ಆಯಿತು ಎಂದು ಕಿರಿಕ್ ಮಾಡಿದ್ದಾರೆ.
ನಟ ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ ಸೇರಿದಂತೆ 7 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಪಾರ್ಟಿಗೆ ಅನುಮತಿ ನೀಡಿದ್ದಕ್ಕೆ ಹೋಟೆಲ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ನಟ ರಕ್ಷಿತ್ ಜಿ ಕನ್ನಡವಾಹಿನಿಯಲ್ಲಿ ಪ್ರಸಾರ ವಾಗುವ ಗಟ್ಟಿಮೇಳ ಧಾರಾವಾಹಿಯುಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆಯಲ್ಲಿ ಮಹೇಶ ಪಾತ್ರದಲ್ಲಿ ಅಭಿನಯಿಸುತ್ತಿದ್ದ.