ಸಹರನ್ಪುರ: ಲಾಕ್ ಡೌನ್ ನಡುವೆಯೇ ಜನಿಸಿದ ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯ್ ವಿಹಾರದ ನಿವಾಸಿಯಾಗಿರುವ ಓಂ ವೀರ್ ಸಿಂಗ್ ತನ್ನ ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ. ಕೊರೊನಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುವ ಕಾರಣ ತನ್ನ ಮಗುವಿಗೆ ಸ್ಯಾನಿಟೈಸರ್ ಎಂಬ ಹೆಸರು ನಾಮಕರಣ ಮಾಡಿದ್ದೇನೆ ಎಂದು ಓಂ ವೀರ್ ಸಿಂಗ್ ಹೇಳಿದ್ದಾರೆ.
ಭಾನುವಾರ ಈ ಮಗು ಜನಿಸಿದ್ದು, ಪೋಷಕರು ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡುವುದಾಗಿ ಘೋಷಿಸಿದಾಗ ಆಸ್ಪತ್ರೆಯಲ್ಲಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ನಗಲು ಪ್ರಾರಂಭಿಸಿದ್ದರಂತೆ.
ಇನ್ನು ಗೋರಖ್ ಪುರದಲ್ಲಿಯೂ ಇಂಥಹದ್ದೇ ಘಟನೆ ನಡೆದಿದ್ದು, ಜನತಾ ಕರ್ಫ್ಯೂ ದಿನ ಜನಿಸಿದ್ದ ಮಗುವಿಗೆ ಕೊರೊನಾ ಎಂದು ನಾಮಕರಣ ಮಾಡಲಾಗಿತ್ತು. ಇದಾದ ಒಂದು ವಾರದಲ್ಲಿ ಜನಿಸಿದ್ದ ಮಗುವೊಂದಕ್ಕೆ ಲಾಕ್ ಡೌನ್ ಎಂದು ನಾಮಕರಣ ಮಾಡಲಾಗಿದ್ದರೆ, ರಾಮ್ ಪುರದಲ್ಲಿ ಜನಿಸಿದ್ದ ಮಗುವೊಂದಕ್ಕೆ ಕೋವಿಡ್ ಎಂದು ಹೆಸರಿಟ್ಟಿದ್ದಾರೆ.