ಕಾರವಾರ: ಮೂರು ವರ್ಷದ ಮಗು ಆಟವಾಡುತ್ತ ಆಕಸ್ಮಿಕವಾಗಿ ಬಾವಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿ ನಗರದ ಸಿ.ಪಿ. ಬಜಾರಿನಲ್ಲಿ ನಡೆದಿದೆ. ಅನುಶ್ರೀ ರಾಜಶೇಖರ ಶೆಟ್ಟರ್ (2) ಸಾವನ್ನಪ್ಪಿದ ಬಾಲಕಿ ಎಂದು ಗುರುತಿಸಲಾಗಿದೆ. ಮಗು ಬಾವಿ ಹತ್ತಿರ ಆಟವಾಡುತ್ತಿತ್ತು ಎನ್ನಲಾಗುತ್ತಿದೆ. ಈ ವೇಳೆ ಆಟವಾಡುತ್ತ ಬಾವಿಗೆ ಬಿದ್ದಿದೆ.
ಇದನ್ನು ಕಂಡ ಕೂಡಲೇ ತಾಯಿ ಕಿರುಚಾಡಿಕೊಂಡಿದ್ದಾಳೆ. ಸ್ಥಳೀಯರಾದ ಶಂಭು ಶೆಂಮಡಿ ಎಂಬವರು ಕೂಡಲೇ ಬಾವಿಗೆ ಇಳಿದು ಮಗು ಹೊರಕ್ಕೆ ತೆಗೆದಿದ್ದಾರೆ. ಅಷ್ಟರಲ್ಲಾಗಲೇ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಈ ಕುರಿತು ನಗರಠಾಣೆ ಪಿಎಸ್ಐ ರಾಜಕುಮಾರ ಉಕ್ಕಲಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.