ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಮೂವರು ಸಾವು ramanagara
ರಾಮನಗರ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ರಾಮನಗರದ ರಾಯರದೊಡ್ಡಿ ಬಳಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
23 ವರ್ಷದ ಮೂರ್ತಿ, 22 ವರ್ಷದ ವೆಂಕಟೇಶ್ ಹಾಗೂ 16 ವರ್ಷದ ರಘು ಮೃತ ಯುವಕರಾಗಿದ್ದಾರೆ.
ಸವಾರರಿಬ್ಬರು ಅತೀ ವೇಗದಲ್ಲಿ ಬೈಕ್ ಸವಾರಿ ಮಾಡುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಇನ್ನು ಬೈಕ್ ಗಳು ಡಿಕ್ಕಿಯಾದ ರಭಸಕ್ಕೆ ಯುವಕರು ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸದ್ಯ ಮೃತ ದೇಹಗಳನ್ನು ರಾಮನಗರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಕುರಿತು ರಾಮನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









