ಮೈಸೂರು, ಮೇ 18: ಕೆಲವು ದಿನಗಳ ಹಿಂದೆ ಕೊರೊನಾ ಮುಕ್ತವಾಗಿದ್ದ ಮೈಸೂರು ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದ ಮುಂಬೈನಿಂದ ಹಿಂತಿರುಗಿದ 46 ವರ್ಷದ ಪುರುಷನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಮಾರ್ಚ್ 21 ರಂದು ಪತ್ತೆಯಾಗಿತ್ತು. ಮಾರ್ಚ್ 21ರಂದು ದುಬೈನಿಂದ ಮೈಸೂರಿನ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ ಜ್ಯುಬಿಲಿಯಂಟ್ ನೌಕರರು, ತಬ್ಲಿಘಿಗಳು ಸೇರಿದಂತೆ ಒಟ್ಟು 90 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಎಲ್ಲಾ 90 ಕೊರೊನಾ ಪ್ರಕರಣಗಳು ಗುಣಮುಖರಾಗಿ ಮನೆಗೆ ತೆರಳುವುದರೊಂದಿಗೆ ಸಾಂಸ್ಕೃತಿಕ ನಗರ ಮೈಸೂರು ಕೊರೊನಾ ಸೋಂಕು ಮುಕ್ತವಾಗಿತ್ತು. ಅಲ್ಲದೇ ಕಳೆದ 18 ದಿನಗಳಿಂದ ಮೈಸೂರಿನಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಇದೀಗ ಹೊರರಾಜ್ಯದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಪ್ರಾರಂಭವಾಗಿದೆ.
ನನ್ನ ಇಲಾಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ; ಪರಮೇಶ್ವರ್
ಬೆಂಗಳೂರು: ಗೃಹ ಇಲಾಖೆಯಲ್ಲಿ ನನ್ನ ಬಿಟ್ಟು ಯಾರ ಹಸ್ತಕ್ಷೇಪವೂ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G. Parameshwara) ಹೇಳಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ....